ವಕೀಲರ ಜೊತೆಗೆ ಆಘಾತಕಾರಿ ನಡವಳಿಕೆ: ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ವಕೀಲರ ಸಂಘ ಅಸಮಾಧಾನ
Monday, November 24, 2025
ವಕೀಲರ ಜೊತೆಗೆ ಆಘಾತಕಾರಿ ನಡವಳಿಕೆ: ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ವಕೀಲರ ಸಂಘ ಅಸಮಾಧಾನ
ಕರ್ನಾಟಕ ಹೈಕೋರ್ಟ್ ಕಲಾಪಗಳಲ್ಲಿ ವಕೀಲರ ಜೊತೆಗೆ ನ್ಯಾಯಮೂರ್ತಿಗಳು ನಡೆದುಕೊಳ್ಳುವ ರೀತಿ ಆಘಾತಕಾರಿಯಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಆರೋಪಿಸಿದೆ.
ಈ ಬಗ್ಗೆ ವಕೀಲರ ಸಂಘದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ನ್ಯಾಯಮೂರ್ತಿಗಳಿಬ್ಬರ ನಡವಳಿಕೆಯನ್ನು ವಿರೋಧಿಸಿದೆ.
ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರು ತೆರೆದ ನ್ಯಾಯಾಲಯದ ಕೋರ್ಟ್ ಕಲಾಪದಲ್ಲಿ ವಕೀಲ ವೃಂದದ ಜೊತೆಗೆ ಹಿತಕರವಾಗಿ ನಡೆದುಕೊಳ್ಳುತ್ತಿಲ್ಲ. ನ್ಯಾಯಮೂರ್ತಿಗಳ ನಡವಳಿಕೆ ಆಘಾತಕಾರಿಯಾಗಿದೆ ಎಂದು ವಕೀಲರ ಸಂಘ ಅಂಗೀಕರಿಸಿದ ನಿರ್ಣಯ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ ವಕೀಲರು ವಿನಮ್ರ ನಡವಳಿಕೆಗೆ ದೇಶದಲ್ಲೇ ಹೆಸರುವಾಸಿಯಾಗಿದ್ದಾರೆ. ಆದರೆ, ಈ ನ್ಯಾಯಮೂರ್ತಿಗಳ ವಕೀಲರ ಜೊತೆಗಿನ ವರ್ತನೆ ಮತ್ತು ನಡವಳಿಕೆ ಸಮಾಧಾನಕರವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.