ಆಧಾರ್ ಕಾರ್ಡ್ ಗುರುತಿನ ಪುರಾವೆ ಮಾತ್ರ: ಪೌರತ್ವದ ದಾಖಲೆ ಅಲ್ಲ- ಸುಪ್ರೀಂ ಕೋರ್ಟ್ ಮುಂದೆ ಚುನಾವಣಾ ಆಯೋಗದ ವಾದ
ಆಧಾರ್ ಕಾರ್ಡ್ ಗುರುತಿನ ಪುರಾವೆ ಮಾತ್ರ: ಪೌರತ್ವದ ದಾಖಲೆ ಅಲ್ಲ- ಸುಪ್ರೀಂ ಕೋರ್ಟ್ ಮುಂದೆ ಚುನಾವಣಾ ಆಯೋಗದ ವಾದ
ಭಾರತದಲ್ಲಿ ಆಧಾರ್ ಕಾರ್ಡ್‌ನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಕೆ ಮಾಡಬಹುದು. ಆದರೆ, ಅದನ್ನು ಭಾರತೀಯ ಪೌರತ್ವದ ದಾಖಲೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಚುನಾವಣಾ ಆಯೋಗದ ವಾದ ಮಂಡಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಾಲಾ ಬಾಗ್ಚಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಚುನಾವಣಾ ಆಯೋಗ ಈ ವಾದ ಮಂಡಿಸಿದೆ.
ಆಧಾರ್‌ನ್ನು ಜನ್ಮ ದಿನಾಂಕ, ವಾಸಸ್ಥಳ ಮತ್ತು ಪೌರತ್ವದ ದಾಖಲೆಯಾಗಿ ಬಳಕೆ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪುಗಳು ಹೇಳಿವೆ. ಆಧಾರ್ ಕಾಯ್ದೆಯಲ್ಲೂ ಅದನ್ನೇ ಹೇಳಲಾಗಿದೆ ಎಂದು ಹೇಳಿರುವ ಚುನಾವಣಾ ಆಯೋಗ, 'ಬಿಹಾರದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅಥವಾ ರದ್ದುಪಡಿಸಲು ಅಧಾರ್ ಕಾರ್ಡನ್ನು ಗುರುತಿನ ದಾಖಲೆಯಾಗಿ ಬಳಸಲು ಸೂಚಿಸಲಾಗಿದೆಯೇ ಹೊರತು ಪೌರತ್ವದ ಪುರಾವೆಯಾಗಿ ಅಲ್ಲ' ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, 'ಮತದಾರರ ಪಟ್ಟಿ ಪರಿಷ್ಕರಿಸಲು ಆಧಾರ್ ಬಳಕೆ ಕುರಿತು ನ್ಯಾಯಾಲಯವು ಸೆ. 8ರಂದೇ ಸ್ಪಷ್ಟಪಡಿಸಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ-19500 (2) ជថ្ម 23(4) ರ ಪ್ರಕಾರ ಗುರುತು ಪತ್ತೆ ಮಾಡುವ ಉದ್ದೇಶಕ್ಕಾಗಿ ಆಧಾರ್ ಕಾರ್ಡ್ ಬಳಸಬೇಕೆಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಆಧಾರ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಬಳಸಬೇಕು; ಪೌರತ್ವದ ಪುರಾವೆಯಾಗಿ ಅಲ್ಲ' ಎಂದು ತಿಳಿಸಿದ್ದೇವೆ