ಹೈಕೋರ್ಟ್‌ಗಳು ಎಮರ್ಜೆನ್ಸಿ ವಾರ್ಡ್ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್
ಹೈಕೋರ್ಟ್‌ಗಳು ಎಮರ್ಜೆನ್ಸಿ ವಾರ್ಡ್ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್
ಹೈಕೋರ್ಟ್‌ಗಳು ತುರ್ತು ನಿಗಾ ಘಟಕ ಯಾ ಎಮರ್ಜೆನ್ಸಿ ವಾರ್ಡ್ ರೀತಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡಬೇಕು. ಈ ಮೂಲಕ ನ್ಯಾಯದಾನ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಕೋರ್ಟ್‌ಗಳಿಗೆ ವೇಗ, ಸಮನ್ವಯತೆ ಮತ್ತು ತಂತ್ರಜ್ಞಾನದ ಬಳಕೆ ಅಗತ್ಯ. ಹೈಕೋರ್ಟ್‌ಗಳು ಸಾಮಾಜಿಕ ಪರಿವರ್ತನೆಯ ಎಂಜಿನ್‌ಗಳಂತೆ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಇದರಿಂದ ಸರಿಯಾದ ಸಮಯಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ಧಾರೆ.
ಜಾರ್ಖಂಡ್ ಹೈಕೋರ್ಟ್ 'ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ್ಯಾಯಮೂರ್ತಿ ಸೂರ್ಯಕಾಂತ್, ''ಅನ್ಯಾಯದ ವಿರುದ್ಧ ಹೈಕೋರ್ಟ್‌ಗಳು ಆಸ್ಪತ್ರೆಗಳಲ್ಲಿನ ತುರ್ತು ಚಿಕಿತ್ಸಾ ಘಟಕಗಳ ಮಾದರಿಯಲ್ಲಿ ತ್ವರಿತವಾಗಿ ಹಾಗೂ ನಿಖರವಾಗಿ ನ್ಯಾಯದಾನ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
"ಎಮರ್ಜೆನ್ಸಿ ವಾರ್ಡ್‌ನಲ್ಲಿ ಆಸ್ಪತ್ರೆಗಳು ಸ್ವಲ್ಪ ತಡ ಮಾಡಿದರೆ, ನಿರ್ಲಕ್ಷ್ಯ ತೋರಿದರೆ ಜೀವಗಳಿಗೆ ಆಪತ್ತು ಎದುರಾಗುತ್ತದೆ. ಅಂಥ ಸ್ಥಿತಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸುವವರದ್ದೂ ಕೂಡ ಇರುತ್ತದೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಅಗತ್ಯತೆಗಳನ್ನು ಕ್ಷಿಪ್ರವಾಗಿ ಹಾಗೂ ಸ್ಪಷ್ಟವಾಗಿ ಪೂರೈಸುವ ಸವಾಲು ನಮ್ಮ ಎದುರಿಗಿದೆ'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2025ರ ನವೆಂಬರ್ 23ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನಿವೃತ್ತರಾಗಲಿದ್ದು, ನವೆಂಬರ್ 24ರಂದು ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.