ವಕೀಲರ ವೃತ್ತಿ ವ್ಯಾಪಾರಿ ಚಟುವಟಿಕೆಯಲ್ಲ, ವಾಣಿಜ್ಯ ವಿದ್ಯುತ್ ಶುಲ್ಕ ಅನ್ವಯಿಸದು- ಕರ್ನಾಟಕ ಹೈಕೋರ್ಟ್
Tuesday, November 18, 2025
ವಕೀಲರ ವೃತ್ತಿ ವ್ಯಾಪಾರಿ ಚಟುವಟಿಕೆಯಲ್ಲ, ವಾಣಿಜ್ಯ ವಿದ್ಯುತ್ ಶುಲ್ಕ ಅನ್ವಯಿಸದು- ಕರ್ನಾಟಕ ಹೈಕೋರ್ಟ್
ವಕೀಲರ ವೃತ್ತಿ ಎಂಬುದು ವ್ಯಾಪಾರಿ ಚಟುವಟಿಕೆಯಲ್ಲ. ಹಾಗಾಗಿ, ವಕೀಲರ ಕಚೇರಿಗೆ ವಾಣಿಜ್ಯ ವಿದ್ಯುತ್ ಶುಲ್ಕ ಅನ್ವಯಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ವಕೀಲರ ಕಚೇರಿ ವಾಣಿಜ್ಯ ಉದ್ದೇಶಕ್ಕೆ ಸ್ಥಾಪಿತವಾಗಿಲ್ಲ. ಇಲ್ಲಿ ವಕೀಲರು ಮತ್ತು ಕಾನೂನು ವೃತ್ತಿಪರರು ಬೌದ್ಧಿಕ ಮತ್ತು ನೈತಿಕ ವೃತ್ತಿಯನ್ನು ನಿಯಂತ್ರಿಸುತ್ತಾರೆ. ವೈಯಕ್ತಿಕ ಕೌಶಲ್ಯಗಳ ಮೇಲೆ ಸ್ಥಾಪಿತವಾದ ನ್ಯಾಯದ ಅಗತ್ಯತೆ ಮತ್ತು ಸಮಗ್ರತೆ ಮತ್ತು ವಿಶ್ವಾಸಾರ್ಹ ಜವಾಬ್ದಾರಿಯನ್ನು ಅವರು ಹೊಂದಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯವಾದಿಗಳ ವೃತ್ತಿ ವಾಣಿಜ್ಯ ಚಟುವಟಿಕೆಯಲ್ಲ. ಹಾಗಾಗಿ ವಾಣಿಜ್ಯ ಬಳಕೆಯ ಶುಲ್ಕವನ್ನು ವಕೀಲರ ಕಚೇರಿಗೆ ಅನ್ವಯಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.