ಸಕಾರಣವಿಲ್ಲದೆ ಹಿಂಪಡೆದ ಅಮಲ್ಜಾರಿ ಪ್ರಕರಣಗಳನ್ನು ಮತ್ತೆ ಸಲ್ಲಿಸಲು ಅವಕಾಶ ನೀಡಬಾರದು: ಸುಪ್ರೀಂ ಕೋರ್ಟ್
ಸಕಾರಣವಿಲ್ಲದೆ ಹಿಂಪಡೆದ ಅಮಲ್ಜಾರಿ ಪ್ರಕರಣಗಳನ್ನು ಮತ್ತೆ ಸಲ್ಲಿಸಲು ಅವಕಾಶ ನೀಡಬಾರದು: ಸುಪ್ರೀಂ ಕೋರ್ಟ್
ಸಮರ್ಪಕವಾದ ಕಾರಣ ನೀಡದ ಹೊರತು ನ್ಯಾಯಾಲಯದಿಂದ ಹಿಂದಕ್ಕೆ ಪಡೆದ ಅಮಲ್ಜಾರಿ ಪ್ರಕರಣಗಳನ್ನು ಮತ್ತೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
"ಪೆರಿಯಾಮ್ಮಳ್ (ಮೃತರು) ಮತ್ತಿತರರು ವಿರುದ್ಧ ವಿ. ರಾಜಮಣಿ ಮತ್ತಿತರರು" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ. ಬಿ. ಪರ್ದೀವಾಲಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಅಮಲ್ಜಾರಿ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಮತ್ತು ಹೊಸದಾಗಿ ಸಲ್ಲಿಸುವುದರಿಂದ ಡಿಕ್ರಿಗಳ ಜಾರಿಯಲ್ಲಿ ಅನಗತ್ಯ ವಿಳಂಬವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಮರ್ಪಕವಾದ ಕಾರಣವಿದ್ದಾಗ ಮಾತ್ರ ಇಂತಹ ಪ್ರಕ್ರಿಯೆಗೆ ಕೋರ್ಟ್‌ಗಳು ಅವಕಾಶ ಮಾಡಿಕೊಡಬೇಕು ಎಂದು ಅದು ಕಿವಿಮಾತು ಹೇಳಿದೆ.
ಕರ್ನಾಟಕವೊಂದರಲ್ಲೇ 1.41 ಲಕ್ಷ ಅಮಲ್ಜಾರಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಇದು ಗಂಭೀರವಾದ ಪರಿಸ್ಥಿತಿಯಾಗಿದೆ. ಈ ಬಗ್ಗೆ ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಪೆರಿಯಾಮ್ಮಳ್ (ಮೃತರು) ಮತ್ತಿತರರು ವಿರುದ್ಧ ವಿ. ರಾಜಮಣಿ ಮತ್ತಿತರರು
ಸುಪ್ರೀಂ ಕೋರ್ಟ್, CA 3640/2025 Dated 11-11-2025