-->
ಹೊರಗುತ್ತಿಗೆ ಮುಂದುವರಿಸಲು ಲಂಚ ಸ್ವೀಕಾರ: ಮಂಗಳೂರಿನ ಸರ್ವೇ ಕಚೇರಿಯ ಮೂವರು ಭ್ರಷ್ಟರು ಅರೆಸ್ಟ್‌

ಹೊರಗುತ್ತಿಗೆ ಮುಂದುವರಿಸಲು ಲಂಚ ಸ್ವೀಕಾರ: ಮಂಗಳೂರಿನ ಸರ್ವೇ ಕಚೇರಿಯ ಮೂವರು ಭ್ರಷ್ಟರು ಅರೆಸ್ಟ್‌

ಹೊರಗುತ್ತಿಗೆ ಮುಂದುವರಿಸಲು ಲಂಚ ಸ್ವೀಕಾರ: ಮಂಗಳೂರಿನ ಸರ್ವೇ ಕಚೇರಿಯ ಮೂವರು ಭ್ರಷ್ಟರು ಅರೆಸ್ಟ್‌





ಹೊರಗುತ್ತಿಗೆ ನೌಕರರನ್ನು ಮುಂದುವರಿಸಲು ನೇಮಕಾತಿ ಆದೇಶ ಮಾಡಿಸಿಕೊಡಲು ಹಾಗೂ ಬಾಕಿ ಇದ್ದ ವೇತನದ ಬಿಲ್ ಮಾಡಿಕೊಡಲು ಲಂಚಕ್ಕೆ ಕೈಚಾಚಿದ ಮಂಗಳೂರಿನ ಸರ್ವೇ ಕಚೇರಿಯ ಮೂವರು ಭ್ರಷ್ಟರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.


ಪ್ರಾಪರ್ಟಿ ಕಾರ್ಡ್ ಮಾಡಿಕೊಡುವ "ನಗರ ಆಸ್ತಿ ಮಾಲೀಕತ್ವ ದಾಖಲೆ" (ಯುಪಿಓಆರ್)ಗಳ ಮಂಗಳೂರು ಕಚೇರಿಯಲ್ಲಿ ಈ ಘಟನೆ ನಡೆದಿದೆ.


ಹೊರಗುತ್ತಿಗೆ ನೌಕರನ ಬಾಕಿ ಸಂಬಳದ ಬಿಲ್ ಮಾಡಿಕೊಡಲು ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶ ಮಾಡಿಸಿಕೊಡಲು ಮೂವರು ಆರೋಪಿ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು.


ಉಳ್ಳಾಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ 50 ಸಾವಿರ ರೂ., ಮಂಗಳೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇ ಶಕ ಬಿ.ಕೆ.ರಾಜು 10 ಸಾವಿರ ರೂ., ಮಂಗಳೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆ ಸುಪರ್‌ವೈಸರ್ ಎಸ್‌.ಧನಶೇಖರ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ನೌಕರ ಪ್ರಕರಣ ದಾಖಲಿಸಿದ್ದರು.


ದೂರುದಾರರಿಂದ ಗುರುವಾರ ಕೃಷ್ಣಮೂರ್ತಿ 20 ಸಾವಿರ ರೂ., ಬಿ.ಕೆ.ರಾಜು ಐದು ಸಾವಿರ ರೂ. ಮತ್ತು ಎಸ್.ಧನಶೇಖರ ಐದು ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.


ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ.ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್. ಅವರು ಸಿಬ್ಬಂದಿ ಜತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu