-->
ಆರೋಪಿಗೆ ಪೊಲೀಸ್ ಸಮನ್ಸ್: ಎಫ್‌ಐಆರ್ ಸಂಖ್ಯೆ, ಮಾಹಿತಿ ಕಡ್ಡಾಯ- ಚೆಕ್ ಲಿಸ್ಟ್ ನೀಡದಿದ್ದರೆ ಹಾಜರಾಗಬೇಕಿಲ್ಲ- ಕರ್ನಾಟಕ ಹೈಕೋರ್ಟ್‌

ಆರೋಪಿಗೆ ಪೊಲೀಸ್ ಸಮನ್ಸ್: ಎಫ್‌ಐಆರ್ ಸಂಖ್ಯೆ, ಮಾಹಿತಿ ಕಡ್ಡಾಯ- ಚೆಕ್ ಲಿಸ್ಟ್ ನೀಡದಿದ್ದರೆ ಹಾಜರಾಗಬೇಕಿಲ್ಲ- ಕರ್ನಾಟಕ ಹೈಕೋರ್ಟ್‌

ಆರೋಪಿಗೆ ಪೊಲೀಸ್ ಸಮನ್ಸ್: ಎಫ್‌ಐಆರ್ ಸಂಖ್ಯೆ, ಮಾಹಿತಿ ಕಡ್ಡಾಯ- ಚೆಕ್ ಲಿಸ್ಟ್ ನೀಡದಿದ್ದರೆ ಹಾಜರಾಗಬೇಕಿಲ್ಲ- ಕರ್ನಾಟಕ ಹೈಕೋರ್ಟ್‌





ಆರೋಪಿಗೆ ಪೊಲೀಸ್ ಸಮನ್ಸ್ ನೀಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಕರ್ನಾಟಕ ಹೈಕೋರ್ಟ್‌ ಪೊಲೀಸರಿಗೆ ಪಾಠ ಹೇಳಿದೆ. ಸಮನ್ಸ್‌ ನೀಡುವಾದ ಅಪರಾಧದ ಬಗ್ಗೆ ಮಾಹಿತಿ, ಎಫ್‌ಐಆರ್ ಸಂಖ್ಯೆ ಕಡ್ಡಾಯ ನೀಡಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.


"ಟಿ.ಆರ್. ಶಿವಪ್ರಸಾದ್ ವಿರುದ್ಧ ಕರ್ನಾಟಕ ರಾಜ್ಯ" ಪ್ರಕರಣದಲ್ಲಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಅಮೃತಹಳ್ಳಿ ಠಾಣೆಯ ಪೊಲೀಸ್ ಠಾಣೆ ಅಧಿಕಾರಿಗಳು ವಾಟ್ಸ್ ಆಪ್ ಮೂಲಕ, "ನೀವು ಠಾಣೆಗೆ ಹಾಜರಾಗಬೇಕೆಂದು" ಸಂದೇಶ ಕಳುಹಿಸಿದ್ದರು. ಈ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್. ಶಿವಪ್ರಸಾದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ.


ಯಾವುದೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸ್‌ ಠಾಣೆಗೆ ಕರೆಸಿಕೊಳ್ಳಲು ನೀಡುವ ನೋಟಿಸ್‌ನಲ್ಲಿ ಅಪರಾಧ ಕ್ರಮ ಸಂಖ್ಯೆ, ಪ್ರಥಮ ವರ್ತಮಾನ ಮಾಹಿತಿ (ಎಫ್‌ಐಆರ್) ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್‌ಲಿಸ್ಟ್ ಅನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ.


ಎಫ್‌ಐಆರ್ ಸಂಖ್ಯೆ, ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಈ ಮೇಲೆ ತಿಳಿಸಿದ ಚೆಕ್ ಲಿಸ್ಟ್ ನೀಡದಿದ್ದರೆ ಆರೋಪಿಗಳು ಪೊಲೀಸ್ ಠಾಣೆಗೆ ಹಾಜರಾಗಬೇಕಿಲ್ಲ ಎಂದು ನ್ಯಾಯಪೀಠ ಹೇಳಿದೆ.


ತೀರ್ಪಿನಲ್ಲಿ ನಿರ್ದೇಶಿಸಲಾದ ಅಂಶಗಳ ಕುರಿತು ಸಾರ್ವಜನಿಕರ ಅವಗಾಹನೆಗೆ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಹೈಕೋರ್ಟ್ ತೀರ್ಪಿನಲ್ಲಿ ನಿರ್ದೇಶನ ನೀಡಿದೆ.



ಚೆಕ್‌ಲಿಸ್ಟ್ ನೀಡದಿದ್ದರೆ ಹಾಜರಾಗಬೇಕಿಲ್ಲ

ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ -2023 ಕಲಂ 35ರ ಅನುಸಾರ

ಕಲಂ 35ರ ಅನುಸಾರ ಆರೋಪಿಗೆ ಚೆಕ್‌ಲಿಸ್ಟ್ ಒದಗಿಸದಿದ್ದರೆ ಅಂತಹ ಆರೋಪಿಯು ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಹಾಗೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.


ಪ್ರಕರಣದ ಹಿನ್ನೆಲೆ:

ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಟಿ.ವಿ. ಚಾನಲ್ ಸಿಇಒ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಪೊಲಿಸರು ಪತ್ರಕರ್ತರಿಗೆ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿ, ಠಾಣೆಗೆ ಹಾಜರಾಗಬೇಕೆಂದು ಸೂಚಿಸಿದರು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.


ಪ್ರಕರಣ: ಟಿ.ಆರ್. ಶಿವಪ್ರಸಾದ್ ವಿರುದ್ಧ ಕರ್ನಾಟಕ ರಾಜ್ಯ

ಕರ್ನಾಟಕ ಹೈಕೋರ್ಟ್ WP 15125/2024 Dated 19-07-2024


Ads on article

Advertise in articles 1

advertising articles 2

Advertise under the article