ಪಕ್ಷಕಾರರ ಪರವಾಗಿ ಅಫಿದಾವಿತ್‌ಗೆ ವಕೀಲರ ಸಹಿ ಫೋರ್ಜರಿಗೆ ಸಮ: ವಕೀಲರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ
ಪಕ್ಷಕಾರರ ಪರವಾಗಿ ಅಫಿದಾವಿತ್‌ಗೆ ವಕೀಲರ ಸಹಿ ಫೋರ್ಜರಿಗೆ ಸಮ: ವಕೀಲರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ
ಪಕ್ಷಕಾರರ ಪರವಾಗಿ ವಕೀಲರೇ ಅಥವಾ ಅವರ ಗುಮಾಸ್ತರೇ ಸಹಿ ಹಾಕುವುದನ್ನು ವಂಚನೆ ಎಂದು ಪರಿಗಣಿಸಲಾಗುವುದು ಎಂದು ರಾಜಸ್ತಾನ ಹೈಕೋರ್ಟ್ ಹೇಳಿದೆ.
"ರಾಕೇಶ್ ಜೈನ್ ವಿರುದ್ಧ ರಾಜಸ್ತಾನ ರಾಜ್ಯ ಮತ್ತಿತರರು" ಪ್ರಕರಣದಲ್ಲಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ರಾಜಸ್ತಾನ ಹೈಕೋರ್ಟ್‌ನ ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಪಡಿಸುವಂತೆ ಕೋರಿ ವಕೀಲರಾದ ರಾಕೇಶ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಪಕ್ಷಕಾರರ ಪರವಾಗಿ ವಕೀಲರು ಅಥವಾ ಕಿರಿಯ ವಕೀಲರು, ಗುಮಾಸ್ತರು ಸಹಿ ಹಾಕುವುದು ಗಂಭೀರ ವೃತ್ತಿ ದುರ್ನಡತೆಯಾಗಿದ್ದು, ಇದನ್ನು ವಂಚನೆ ಎಂದು ಪರಿಗಣಿಸಲಾಘುವುದು ಎಂದು ನ್ಯಾಯಪೀಠ ಹೇಳಿತು.
ಪ್ರಕರಣ: "ರಾಕೇಶ್ ಜೈನ್ ವಿರುದ್ಧ ರಾಜಸ್ತಾನ ರಾಜ್ಯ ಮತ್ತಿತರರು"
ರಾಜಸ್ತಾನ ಹೈಕೋರ್ಟ್, Crl.Mis.Pet: 8097/2024 Dated 18-11-2025