ವಾಸ್ತವಾಂಶ ಮರೆಮಾಚಿ ಜೀವನಾಂಶ ಕೋರಿದ್ದ ಮಹಿಳೆ: ವಿಚಾರಣಾ ಕೋರ್ಟ್ ಆದೇಶ ರದ್ದುಪಡಿಸಿದ ಹೈಕೋರ್ಟ್
ವಾಸ್ತವಾಂಶ ಮರೆಮಾಚಿ ಜೀವನಾಂಶ ಕೋರಿದ್ದ ಮಹಿಳೆ: ವಿಚಾರಣಾ ಕೋರ್ಟ್ ಆದೇಶ ರದ್ದುಪಡಿಸಿದ ಹೈಕೋರ್ಟ್
ದುಡಿಯುವ ಮಹಿಳೆ ತನ್ನ ದುಡಿಮೆಯ ಕುರಿತಾದ ವಾಸ್ತವಾಂಶವನ್ನು ಮರೆಮಾಚಿ ವಿಚಾರಣಾ ನ್ಯಾಯಾಲಯದಿಂದ ಜೀವನಾಂಶ ಕೋರಿದ್ದು, ಜೀವನಾಂಶ ಕುರಿತ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ.
ದುಡಿಯುವ ಮಹಿಳೆ ನಿರ್ಣಾಯಕ ವಾಸ್ತವಾಂಶಗಳನ್ನು ಮರೆಮಾಚಿದಲ್ಲಿ ಅನುಕಂಪಕ್ಕೆ ಅರ್ಹಳಲ್ಲ ಎಂದಿರುವ ನ್ಯಾಯಪೀಠ, ಆಕೆಯ ಜೀವನಾಂಶದ ಆದೇಶವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಈ ಪ್ರಕರಣದ ವಿವರ
ಅಂಕಿತ್ ಸಾಹಾ ಎಂಬ ವ್ಯಕ್ತಿ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದರು. ಆಕೆ ಸ್ನಾತಕೋತ್ತರ ಪದವೀಧರರಾಗಿದ್ದು, ಉದ್ಯೋಗದಿಂದ 36,000/- ರೂ. ವೇತನ ಪಡೆಯುತ್ತಿದ್ದರು. ಇದರ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಪತಿ ಜೀವನಾಂಶ ಕೊಡಬೇಕು ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮಹಿಳೆ ತಿಂಗಳಿಗೆ 36,000/- ರೂ. ಆದಾಯ ಹೊಂದಿದ್ದಾರೆ. ಆಕೆಗೆ ಬೇರೆ ಯಾವುದೇ ಹೊಣೆಗಾರಿಕೆ ಇಲ್ಲ. ಆದರೆ, ಪುರುಷ (ಪತಿ) ತನ್ನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಹಾಗಾಗಿ, ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ. ಮತ್ತು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
earning wife suppressing material facts not deserving of sumpathy. Allahabad High Court set aside maintenance order.