ತಕ್ಷಣದಿಂದಲೇ ಜಾರಿ! ಇ-ಖಾತಾ ಹೊಸ ಮಾದರಿ ಜಾರಿ: ಆಸ್ತಿದಾರರಿಗೆ ಬೊಂಬಾಟ್ ಗುಡ್ ನ್ಯೂಸ್!
ತಕ್ಷಣದಿಂದಲೇ ಜಾರಿ! ಇ-ಖಾತಾ ಹೊಸ ಮಾದರಿ ಜಾರಿ: ಆಸ್ತಿದಾರರಿಗೆ ಬೊಂಬಾಟ್ ಗುಡ್ ನ್ಯೂಸ್!
ಇದು ನಿಜಕ್ಕೂ ಆಸ್ತಿದಾರರಿಗೆ ಬೊಂಬಾಟ್ ಗುಡ್ ನ್ಯೂಸ್. ತಕ್ಷಣದಿಂದಲೇ ಜಾರಿಗೆ ಬರುವಂತೆ ಇ-ಖಾತಾ ಹೊಸ ಮಾದರಿಯನ್ನು ಜಾರಿ ಮಾಡಲಾಗಿದೆ. ಈ ಹೊಸ ಮಾದರಿಯ ಇ-ಖಾತಾ ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲೆಡೆ ಜಾರಿಗೆ ಬರಲಿದೆ.
ಈ ಹೊಸ ನಿಯಮ ಡಿಸೆಂಬರ್ 18ರಿಂದಲೇ ಜಾರಿಗೆ ಬಂದಿದ್ದು, ಆಸ್ತಿಗಳ ಮಾರಾಟ ಮತ್ತು ಖರೀದಿಯಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸುವ ಉದ್ದೇಶ ಮತ್ತು ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಈ ಹೊಸ ನಿಯಮವನ್ನು ಪರಿಚಯಿಸಲಾಗಿದೆ.
ನಿಮ್ಮ ಮನೆಯಲ್ಲೇ ಕುಳಿತು ಇ ಖಾತಾ ಪಡೆದುಕೊಳ್ಳಿ. ಸಾರ್ವಜನಿಕರ ಆಸ್ತಿ ದಾಖಲೆ ಈಗ ಮತ್ತಷ್ಟು ಸುರಕ್ಷಿತ ಎಂದು ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯ ಹೇಳಿಕೊಂಡಿದೆ.
ಆಸ್ತಿದಾರರು ಇನ್ನು ಮುಂದೆ ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ. ಮನೆಯಿಂದಲೇ ಸರಳ ವಿಧಾನದ ಮೂಲಕ ಇ ಖಾತಾ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮನೆಯಲ್ಲೇ ಇ ಖಾತಾವನ್ನು ಪಡೆಯಲು ಬೇಕಾಗುವ ದಾಖಲೆಗಳು ಹೀಗಿವೆ.
ಮಾಲಕರ ಭಾವಚಿತ್ರ ಮತ್ತು ಆಧಾರ್
ಆಸ್ತಿ ತೆರಿಗೆ ಎಸ್.ಎ.ಎಸ್. ಚಲನ್ ಸಂಖ್ಯೆ
ಸ್ವತ್ತಿನ ಕ್ರಯ/ನೋಂದಾಯಿತ ಡೀಡ್‌ನ ಸಂಖ್ಯೆ (ಕಾವೇರಿ ತಂತ್ರಾಂಶದಿಂದ ಲಭ್ಯ)
ಸ್ವತ್ತಿನ ಛಾಯಾಚಿತ್ರ
ಋಣಭಾರ ಪ್ರಮಾಣಪತ್ರ
ಸ್ವತ್ತಿಗೆ ಸಂಬಂಧಿಸಿದ ಇತರ ಪೂರಕ ಅಗತ್ಯ ದಾಖಲೆಗಳು
www.eaasthi.karnataka.gov.in Onlineನಲ್ಲಿ ಆಸ್ತಿ ದಾಖಲೆ ಪರಿಶೀಲಿಸಬಹುದು.
ಅಗತ್ಯವಿದ್ದಲ್ಲಿ ದಾಖಲೆ ನೀಡಿ ತಿದ್ದುಪಡಿ / ತಕರಾರು ಅರ್ಜಿ ಸಲ್ಲಿಸಬಹುದು.
ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ ದಾಖಲೆ ಸಲ್ಲಿಸಿ ಅನುಮೋದಿತ ಅಧಿಕೃತ ಇ ಖಾತಾ ಪಡೆಯಬಹುದು.
ಕೆ-1 ಕೇಂದ್ರಗಳಲ್ಲೂ ಸಹ ಸಾರ್ವಜನಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದು.
ಇಖಾತಾ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.
ಇನ್ನು ಕರ್ನಾಟಕದಲ್ಲಿ ಕಾವೇರಿ 2 ಮತ್ತು ಇಸ್ವತ್ತು ಡಿಜಿಟಲ್ ಡೇಟಾ ಪರಸ್ಪರ ಲಿಂಕ್ ಮಾಡುವಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.