ಸೋಶಿಯಲ್ ಮೀಡಿಯಾದಲ್ಲಿ ವಾಣಿಜ್ಯ ಚಟುವಟಿಕೆ: ವೃತ್ತಿ ಘನತೆಗೆ ಕುಂದು ತಂದಿದ್ದ ವಕೀಲರ ಸನದು ಆದೇಶ ವಾಪಸ್- ಕೆಎಸ್‌ಬಿಸಿ ಅಧ್ಯಕ್ಷ ಕಾಮರಡ್ಡಿ ಪ್ರಕಟಣೆ
ಸೋಶಿಯಲ್ ಮೀಡಿಯಾದಲ್ಲಿ ವಾಣಿಜ್ಯ ಚಟುವಟಿಕೆ: ವೃತ್ತಿ ಘನತೆಗೆ ಕುಂದು ತಂದಿದ್ದ ವಕೀಲರ ಸನದು ಆದೇಶ ವಾಪಸ್- ಕೆಎಸ್‌ಬಿಸಿ ಅಧ್ಯಕ್ಷ ಕಾಮರಡ್ಡಿ ಪ್ರಕಟಣೆ
ರೀಲ್ಸ್ ಮಾಡುವುದು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವೃತ್ತಿ ಘನತೆಗೆ ಕುಂದು ತಂದಿದ್ದ ವಕೀಲರ ಸನದು ಆದೇಶ ರದ್ದು ಮಾಡಿದ್ದ ಆದೇಶವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಾಪಸ್ ಪಡೆದಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು- ಕೆಎಸ್‌ಬಿಸಿ ಅಧ್ಯಕ್ಷ ಕಾಮರಡ್ಡಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪರಿಷತ್ತು ವಿರುದ್ಧವಾಗಲೀ, ಈ ವಿಚಾರದ ಬಗ್ಗೆ ಯಾವುದೇ ಪರ-ವಿರೋಧ ಆರೋಪ ಮಾಡುವುದಾಗಲೀ ವಕೀಲರು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಮಾಡಬಾರದು ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಕಾನೂನು ಸಲಹೆ ನೀಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ವಕೀಲರಾದ ವಿನಯ್ ಕುಮಾರ್, ಜಿ. ಮಂಜುನಾತ್ ಹಾಗೂ ರೇಣುಕಾ ದೇವಿ ಆಲಿಯಾಸ್ ರೇಣುಕಾ ಹಿರೇಮಠ, ಮೈಸೂರಿನ ವಿ. ರವಿಕುಮಾರ್ ಹಾಗೂ ಹುಣಸೂರಿನ ಎನ್. ಪುಟ್ಟೇಗೌಡ ಅವರ ಸನದನ್ನು ಅಮಾನತುಗೊಳಿಸಿ ಕೆಎಸ್‌ಬಿಸಿ ಆದೇಶ ಹೊರಡಿಸಿತ್ತು.