-->
ಜಿಲ್ಲಾ ಕೋರ್ಟ್‌ಗಳಲ್ಲಿ ತುರ್ತು ಆರೋಗ್ಯ ಸೇವೆ: ಪಿಐಎಲ್ ವಜಾ ಮಾಡಿದ ಬಳಿಕ ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

ಜಿಲ್ಲಾ ಕೋರ್ಟ್‌ಗಳಲ್ಲಿ ತುರ್ತು ಆರೋಗ್ಯ ಸೇವೆ: ಪಿಐಎಲ್ ವಜಾ ಮಾಡಿದ ಬಳಿಕ ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

ಜಿಲ್ಲಾ ಕೋರ್ಟ್‌ಗಳಲ್ಲಿ ತುರ್ತು ಆರೋಗ್ಯ ಸೇವೆ: ಪಿಐಎಲ್ ವಜಾ ಮಾಡಿದ ಬಳಿಕ ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್





ಜಿಲ್ಲಾ ನ್ಯಾಯಾಲಯಗಳಲ್ಲಿ ತುರ್ತು ಆರೋಗ್ಯ ಸೇವಾ ಸೌಲಭ್ಯಗಳ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿದ್ದು, ರಿಟ್ ಅರ್ಜಿದಾರರಿಗೆ ಹೈಕೋರ್ಟ್ ನ ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಲು ನಿರ್ದೇಶನ ಹೊರಡಿಸಿದೆ.


ದೆಹಲಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ವಕೀಲರು, ಕಕ್ಷಿದಾರರು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಹಿತಾಸಕ್ತಿದಾರರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಲು ಸೂಕ್ತ ಆರೋಗ್ಯ ಸೌಲಭ್ಯಗಳ ವ್ಯವಸ್ಥೆ ಮಾಡುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ದೆಹಲಿ ಹೈಕೋರ್ಟ್ ದಿನಾಂಕ 28.1.2026 ರಂದು ವಜಾಗೊಳಿಸಿದೆ.


ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ವಿಭಾಗೀಯ ಪೀಠವು ಈ ವಿಷಯದ ಮಹತ್ವವನ್ನು ಒತ್ತಿಹೇಳಿ, ಅರ್ಜಿದಾರರು ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸುವಂತೆ ಸೂಚಿಸಿದರು.


“ನಾವು ಒಪ್ಪುತ್ತೇವೆ! ಈ ವಿಷಯಕ್ಕೆ ನಮ್ಮ ಗಮನ ಸೆಳೆದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಚಿಂತೆಗಳನ್ನು ಆಡಳಿತಾತ್ಮಕ ವಿಭಾಗದಲ್ಲಿ ಪರಿಗಣಿಸಲಾಗುವುದು; ಆದ್ದರಿಂದ ದಯವಿಟ್ಟು ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಿ,” ಎಂದು ಮುಖ್ಯ ನ್ಯಾಯಮೂರ್ತಿ ಅರ್ಜಿದಾರರ ಪರವಾಗಿ ಹಾಜರಾದ ವಕೀಲರಿಗೆ ಹೇಳಿದರು.


ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯಡಿ "ಜನ್ ಆರೋಗ್ಯ ಮಂದಿರ ಯೋಜನೆ"ಯನ್ನು ಉಲ್ಲೇಖಿಸಿದ ಅರ್ಜಿದಾರ ಪರ ವಕೀಲರು, ಇಂತಹ ಸೌಲಭ್ಯವನ್ನು ಎಲ್ಲಾ ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಸ್ಥಾಪಿಸಬೇಕೆಂದು ಮನವಿ ಮಾಡಿದರು.


ಎರಡು ನ್ಯಾಯಾಲಯ ಸಂಕೀರ್ಣಗಳಲ್ಲಿ ಡಿಸ್ಪೆನ್ಸರಿ ಸೌಲಭ್ಯವಿದ್ದರೂ ಅದು ಅಗತ್ಯಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುವ ಜನ್ ಆರೋಗ್ಯ ಮಂದಿರ ವ್ಯವಸ್ಥೆಯನ್ನು ಒದಗಿಸಬೇಕೆಂದು ಅವರು ಕೋರಿದರು.


ಈ ನ್ಯಾಯಾಲಯಗಳಿಗೆ ಪ್ರತಿದಿನ ಸುಮಾರು 12,000 ರಿಂದ 15,000 ಜನರು ಭೇಟಿ ನೀಡುತ್ತಾರೆ. ಇದರಲ್ಲಿ ಮೊಕದ್ದಮೆದಾರರು, ಹಿರಿಯ ನಾಗರಿಕರು, ಮಹಿಳೆಯರು, ಪೊಲೀಸ್ ಸಿಬ್ಬಂದಿ, ವಿಚಾರಣಾಧೀನ ಕೈದಿಗಳೂ ಇದ್ದಾರೆ ಎಂಬುದನ್ನು ಶರ್ಮಾ ನ್ಯಾಯಪೀಠದ ಗಮನಕ್ಕೆ ತಂದರು.


ಅವರು ಈಗಾಗಲೇ ರಿಜಿಸ್ಟ್ರಿಗೆ ಮನವಿ ಸಲ್ಲಿಸಿರುವುದನ್ನೂ ಪೀಠಕ್ಕೆ ತಿಳಿಸಿದರು. “ಇನ್ನೊಂದು, ಹೆಚ್ಚು ವಿವರವಾದ ಮನವಿಯನ್ನು ಸಲ್ಲಿಸಿ,” ಎಂದು ಮುಖ್ಯ ನ್ಯಾಯಮೂರ್ತಿ ಸೂಚಿಸಿದರು.


ನ್ಯಾಯಾಲಯದ ಅಂತಿಮ ಆದೇಶ

“ಅರ್ಜಿದಾರರಿಗೆ, ಈ ಕುರಿತು ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ, ಈ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಸೇರಿದಂತೆ, ಎರಡು ವಾರಗಳ ಒಳಗಾಗಿ ಮನವಿ ಸಲ್ಲಿಸಲು ಅನುಮತಿ ನೀಡಲಾಗುತ್ತದೆ. ಅಂತಹ ಮನವಿ ಸಲ್ಲಿಸಿದ ಬಳಿಕ, ಹೈಕೋರ್ಟ್ ಆಡಳಿತದ ಸಲಹೆಯೊಂದಿಗೆ ಸಂಬಂಧಿತ ಎಲ್ಲಾ ಅಧಿಕಾರಿಗಳು ವಿಷಯವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಹಾಗೂ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಅರ್ಜಿ ವಜಾಗೊಳಿಸಲಾಗುತ್ತದೆ.”


ವಾಜ್ಯ ಶೀರ್ಷಿಕೆ: ನರೇಂದ್ರ ಶರ್ಮಾ ವಿರುದ್ಧ ಜಿಎನ್‌ಸಿಟಿಡಿ ಮತ್ತು ಇತರರು

ದೆಹಲಿ ಹೈಕೋರ್ಟ್‌, W.P.(C)-1146/2026


Ads on article

Advertise in articles 1

advertising articles 2

Advertise under the article