-->
ಅನ್ಯ ಮಹಿಳೆ ಜೊತೆ ವಾಸವಾಗಿದ್ದರೆ ದ್ವಿಪತ್ನಿತ್ವದ ಅಪರಾಧ ಎನ್ನಲಾಗದು- ವಿವಾಹವಾಗದೆ ಸಹಬಾಳ್ವೆಯ ಜೀವನದ ಬಗ್ಗೆ ಹೈಕೋರ್ಟ್‌ ತೀರ್ಪು

ಅನ್ಯ ಮಹಿಳೆ ಜೊತೆ ವಾಸವಾಗಿದ್ದರೆ ದ್ವಿಪತ್ನಿತ್ವದ ಅಪರಾಧ ಎನ್ನಲಾಗದು- ವಿವಾಹವಾಗದೆ ಸಹಬಾಳ್ವೆಯ ಜೀವನದ ಬಗ್ಗೆ ಹೈಕೋರ್ಟ್‌ ತೀರ್ಪು

ಅನ್ಯ ಮಹಿಳೆ ಜೊತೆ ವಾಸವಾಗಿದ್ದರೆ ದ್ವಿಪತ್ನಿತ್ವದ ಅಪರಾಧ ಎನ್ನಲಾಗದು- ವಿವಾಹವಾಗದೆ ಸಹಬಾಳ್ವೆಯ ಜೀವನದ ಬಗ್ಗೆ ಹೈಕೋರ್ಟ್‌ ತೀರ್ಪು





ಅನ್ಯ ಮಹಿಳೆ ಜೊತೆ ವಾಸವಾಗಿದ್ದ ಮಾತ್ರಕ್ಕೆ ಅದನ್ನು ದ್ವಿಪತ್ನಿತ್ವದ ಅಪರಾಧ ಎನ್ನಲಾಗದು. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 494ರ ಪ್ರಕಾರ ಅದು ಅಪರಾಧ ಎನ್ನಿಸಿಕೊಳ್ಳುವುದಿಲ್ಲ ಎಂದು ವಿವಾಹವಾಗದೆ ಸಹಬಾಳ್ವೆಯ ಜೀವನದ ಬಗ್ಗೆ ರಾಜಸ್ತಾನ ಹೈಕೋರ್ಟ್‌ ತೀರ್ಪು ನೀಡಿದೆ.


ವಿವಾಹವಾಗಿರುವ ವ್ಯಕ್ತಿ ಅಥವಾ ಮಹಿಳೆ ಅಧಿಕೃತವೆನ್ನಿಸುವ ರೀತಿಯಲ್ಲಿ ಮತ್ತೊಂದು ವಿವಾಹವಾಗದೇ ಪರ ಪರುಷ ಅಥವಾ ಮಹಿಳೆಯ ಜತೆಗೆ ಗಂಡ-ಹೆಂಡತಿಯಂತೆ ವಾಸವಿದ್ದರೆ ಅದು ದ್ವಿಪತ್ನಿತ್ವದ ಅಪರಾಧ ಎನಿಸಿಕೊಳ್ಳುವುದಿಲ್ಲ ಹಾಗೂ ಈ ನಿಯಮದ ಅಡಿ ವಿಚಾರಣೆ ನಡೆಸಲು ಬರುವುದಿಲ್ಲ ಎಂದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಇದೇ ವೇಳೆ ಪತ್ನಿ, ತನ್ನ ಪತಿ ಮತ್ತೋರ್ವ ಮಹಿಳೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದು, ಅವರಿಬ್ಬರೂ ಗಂಡ-ಹೆಂಡತಿಯಂತೆ ಬಾಳುತ್ತಿದ್ದಾರೆ ಎಂದು ಆರೋಪಿಸಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ದ್ವಿಪತ್ನಿತ್ಯ ಹಾಗೂ ಇತರೆ ಆರೋಪಗಳ ಅಡಿ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕುಲದೀಪ್ ಮಾಥುರ್ ಅವರಿದ್ದ ಪೀಠ ಈ ಆದೇಶ ನೀಡಿದೆ.


ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಐಪಿಸಿ ಸೆಕ್ಷನ್ 494ರ ಪ್ರಕಾರ ಪತಿ ಅಥವಾ ಪತ್ನಿ ಜೀವಂತವಿರುವಾಗ ಅವರು ಇನ್ನೊಬ್ಬರನ್ನು ಮದುವೆಯಾಗುವುದು ಶಿಕ್ಷಾರ್ಹ ಅಪರಾಧ ಎನ್ನಿಸಿಕೊಳ್ಳುತ್ತದೆ. ಇಂತಹ ಅಪರಾಧಕ್ಕೆ 7 ವರ್ಷಗಳವರೆಗೆ ಶಿಕ್ಷೆ/ದಂಡ ವಿಧಿಸಬಹುದಾಗಿದೆ. ಆದರೆ, ವಿವಾಹಿತ ಪುರುಷ/ಮಹಿಳೆ ಅಧಿಕೃತವೆನ್ನಿಸಿಕೊಳ್ಳುವ ರೀತಿಯಲ್ಲಿ ಎರಡನೇ ವಿವಾಹವಾಗದೆ ಮತ್ತೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದರೆ ಅದನ್ನು ದ್ವಿಪತ್ನಿತ್ವ ಅಥವಾ ದ್ವಿಪತಿತ್ಮದ ಅಪರಾಧವಾಗಿ ಪರಿಗಣಿಸಲು ಬರುವುದಿಲ್ಲ ಎಂದು ಹೈಕೋರ್ಟ್ ವಿವರಿಸಿದೆ.


ಅಲ್ಲದೇ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ವ್ಯಕ್ತಿ ಬೇರೊಬ್ಬ ಮಹಿಳೆಯೊಂದಿಗೆ ಎರಡನೇ ವಿವಾಹವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳನ್ನು ಪತ್ನಿ ನೀಡಿಲ್ಲ. ದ್ವಿಪತ್ನಿತ್ಯದ ಆರೋಪ ಸಾಬೀತಾಗಿಲ್ಲ. ಮಹಿಳೆಯ ಪರ ವಕೀಲರು ಆರೋಪಿತನಾಗಿರುವ ಅರ್ಜಿದಾರ ಹಾಗೂ ಎರಡನೆ ಹೆಂಡತಿ ಎಂದು ಹೇಳಲಾಗಿರುವ ಮಹಿಳ ಒಟ್ಟಿಗೆ ಗಂಡ-ಹೆಂಡತಿ ರೀತಿಯಲ್ಲಿ ವಾಸಿಸುತ್ತಿದ್ದು ಅದನ್ನು ನಾತ ಸಂಪ್ರದಾಯದ ಮದುವೆ ಎಂದು ಕರೆಯಲಾಗುತ್ತದೆ ಎಂದು ವಾದಿಸಿದ್ದರೂ, ಆ ಸಂಪ್ರದಾಯಗಳನ್ನು ಪಾಲಿಸಿರುವ ಕುರಿತು ಯಾವುದೇ ದಾಖಲೆಗಳಿಲ್ಲ.


ಆದ್ದರಿಂದ, ಅರ್ಜಿದಾರರ ವಿರುದ್ಧ ದ್ವಿಪತ್ನಿತ್ವ ಆರೋಪದಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.


ಹಿನ್ನೆಲೆ: ತನ್ನ ಪತಿ 20 ವರ್ಷಗಳ ಹಿಂದೆ ಪರಸ್ತ್ರೀಯೊಂದಿಗೆ ವಿವಾಹವಾಗಿ ವಂಚಿಸಿದ್ದಾರೆ. ನಾನು ಜೀವಂತ ಇರುವಾಗಲೇ ಆಕೆಯೊಟ್ಟಿಗೆ ವಾಸಿಸುತ್ತಿದ್ದಾರೆ. ಜತೆಗೆ ಪತಿ ಮತ್ತು ಆತನ ಮನೆಯವರು ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ. ಆದ್ದರಿಂದ ಪತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಪತ್ನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.


ಪ್ರಕರಣದ ಶೀರ್ಷಿಕೆ: S.B. Criminal Misc (Pet.) No. 1154/2019

ರಾಜಸ್ತಾನ ಹೈಕೋರ್ಟ್‌

Ads on article

Advertise in articles 1

advertising articles 2

Advertise under the article