-->
ಕೇಂದ್ರ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ: ನೌಕರರು ದುಷ್ಕೃತ್ಯ ಎಸಗಿದರೆ ಪಿಂಚಣಿ ಮುಟ್ಟುಗೋಲು!

ಕೇಂದ್ರ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ: ನೌಕರರು ದುಷ್ಕೃತ್ಯ ಎಸಗಿದರೆ ಪಿಂಚಣಿ ಮುಟ್ಟುಗೋಲು!

ಕೇಂದ್ರ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ: ನೌಕರರು ದುಷ್ಕೃತ್ಯ ಎಸಗಿದರೆ ಪಿಂಚಣಿ ಮುಟ್ಟುಗೋಲು!





ಕೇಂದ್ರ ಸರಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.


ಕೇಂದ್ರ ಸರಕಾರಿ ನೌಕರ ದುಷ್ಕೃತ್ಯ ಎಸಗಿದರೆ, ಅವರಿಗೆ ನೀಡುವ ಪಿಂಚಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ. ಇದಕ್ಕಾಗಿ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳಿಗೆ ಇಲಾಖೆಯು ತಿದ್ದುಪಡಿ ತಂದಿದೆ.


ಸಾರ್ವಜನಿಕ ಕ್ಷೇತ್ರ ಕಂಪೆನಿಗಳು (ಪಿಎಸ್‌ಯು)ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೊಲೆ, ಹಲ್ಲೆ, ಅತ್ಯಾಚಾರದಂತಹ ದುಷ್ಕೃತ್ಯಗಳಲ್ಲಿ ತೊಡಗಿದ್ದು ಸಾಬೀತಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.


ಸರ್ಕಾರಿ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಕ್ಷೇತ್ರ ಕಂಪೆನಿಗಳಲ್ಲಿ ಉದ್ಯೋಗದಲ್ಲಿ ಇರುವವರು ಸರಕಾರದ ಹುದ್ದೆಯಲ್ಲಿ ಎಷ್ಟೇ ವರ್ಷ ಸೇವೆ ಸಲ್ಲಿಸಿರಲಿ, ಅವರ ಪಿಂಚಣಿಯನ್ನು ತಕ್ಷಣವೇ ಇಲಾಖೆಯು ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ.


ಇದಕ್ಕೂ ಮೊದಲು, ಉದ್ಯೋಗಿಯು ಯಾವುದೇ ಅಪರಾಧ ಎಸಗಿದರೂ ಅವರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿತ್ತು. ಆದರೆ, ಈಗ ಹೊಸ ಕಠಿಣ ನಿಯಮ ಜಾರಿಗೆ ತರಲಾಗಿದೆ. ಅಪರಾಧಗಳಿಂದ ಉದ್ಯೋಗಿಗಳ ನಿಯಂತ್ರಣಕ್ಕಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.


Ads on article

Advertise in articles 1

advertising articles 2

Advertise under the article