ಭೂ ಕಂದಾಯ ಕಾಯ್ದೆ: ಪುರಸಭೆ, ಪಾಲಿಕೆ ವ್ಯಾಪ್ತಿಯ ಕೃಷಿ ಭೂಮಿ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಭೂ ಕಂದಾಯ ಕಾಯ್ದೆ: ಪುರಸಭೆ, ಪಾಲಿಕೆ ವ್ಯಾಪ್ತಿಯ ಕೃಷಿ ಭೂಮಿ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದ್ದು, ರಾಜ್ಯದ ಎಲ್ಲ ಪುರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಕೃಷಿ ಭೂಮಿ ಸ್ವಯಂ ಪರಿವರ್ತಿತವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ ಎಂಬುದಾಗಿ ಈ ತೀರ್ಪು ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ಎಂ.ಜಿ. ಉಮಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ನಗರ ವ್ಯಾಪ್ತಿಯ ಎಲ್ಲ ಕೃಷಿ ಭೂಮಿ ಡೀಮ್ಡ್ ಕನ್‌ವರ್ಟೆಡ್ ಆಗಿದೆ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಈ ಬಗ್ಗೆ ಅಧಿಕೃತತೆ ದೊರೆಯಬೇಕಾದರೆ, ಅದಕ್ಕೆ ನಿಗದಿಪಡಿಸಲ್ಪಟ್ಟ ಪರಿವರ್ತನಾ ಶುಲ್ಕವನ್ನು ಭೂಮಿಯ ಮಾಲಕರು ಪಾವತಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
Karnataka Land Revenue Act: Karnataka High Court Judgement
Even where agricultural land is deemed converted due to its inclusion within city municipal or corporation limits, payment of the prescribed conversion fee remains mandatory.