-->
ನ್ಯಾಯಾಧೀಶರ ನೇಮಕಾತಿ ಕುರಿತು ಸುಪ್ರೀಂ ಮಹತ್ವದ ಮಾರ್ಗಸೂಚಿ: ವೃತ್ತಿಪರ ವಕೀಲರ ನೇರ ನೇಮಕಾತಿ ನಿಯಮ ಸಡಿಲಿಕೆ?

ನ್ಯಾಯಾಧೀಶರ ನೇಮಕಾತಿ ಕುರಿತು ಸುಪ್ರೀಂ ಮಹತ್ವದ ಮಾರ್ಗಸೂಚಿ: ವೃತ್ತಿಪರ ವಕೀಲರ ನೇರ ನೇಮಕಾತಿ ನಿಯಮ ಸಡಿಲಿಕೆ?

ನ್ಯಾಯಾಧೀಶರ ನೇಮಕಾತಿ ಕುರಿತು ಸುಪ್ರೀಂ ಮಹತ್ವದ ಮಾರ್ಗಸೂಚಿ: ವೃತ್ತಿಪರ ವಕೀಲರ ನೇರ ನೇಮಕಾತಿ ನಿಯಮ ಸಡಿಲಿಕೆ?





ಜಿಲ್ಲಾ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ರಜನೀಶ್ ವಿರುದ್ಧ ದೀಪಾ ತೀರ್ಪಿನ ಬಳಿಕ ಪುನರ್ ನೇಮಕಾತಿ ಮತ್ತು ಸೇವಾ ಜೇಷ್ಟತೆ ಕುರಿತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ.


ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಹಾಗೂ ಸೇವಾ ಜೇಷ್ಟತೆ ಕುರಿತು ಹಲವು ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿರ್ದೇಶನಗಳು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ "ರಜನೀಶ್ ಕೆ ವಿ ವಿರುದ್ಧ ಕೆ. ದೀಪ" ಪ್ರಕರಣದಲ್ಲಿ ನೀಡಿದ ತೀರ್ಪಿನ ಅನುಸರಣೆಯಾಗಿ ಈ ಮಾರ್ಗಸೂಚಿ ಹೊರಡಿಸಲ್ಪಟ್ಟಿವೆ.


ಆ ತೀರ್ಪಿನಲ್ಲಿ, ವಕೀಲರಾಗಿ ಏಳು ವರ್ಷಗಳ ಅನುಭವ ಹೊಂದಿರುವ ಸಿವಿಲ್ ನ್ಯಾಯಾಧೀಶರು ನೇರ ನೇಮಕಾತಿಯ ಮೂಲಕ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಹೇಳಲಾಗಿತ್ತು.


ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯಾ ಬಾಗ್ಚಿ ಹಾಗೂ ವಿಪುಲ್ ಪಾಂಚೋಲಿ ಅವರಿದ್ದ ವಿಭಾಗೀಯ ನ್ಯಾಯಪೀಠ ಪೀಠ ಈ ಆದೇಶ ಹೊರಡಿಸಿದೆ.


ಕೆಲವು ಸಿವಿಲ್ ನ್ಯಾಯಾಧೀಶರು ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಆದರೆ ಧೀರಜ್ ಮೋರ್ ವಿರುದ್ಧ ದೆಹಲಿ ಹೈಕೋರ್ಟ್ (2020) ತೀರ್ಪಿನ ನಂತರ, ಜಿಲ್ಲಾ ನ್ಯಾಯಾಧೀಶರಾಗಿ ನೇರ ನೇಮಕಾತಿಗೆ ಕೇವಲ ವೃತ್ತಿಪರ ವಕೀಲರು ಮಾತ್ರ ಅರ್ಹರು ಎಂದು ಹೇಳಲಾಗಿದ್ದರಿಂದ, ಆ ನ್ಯಾಯಿಕ ಅಧಿಕಾರಿಗಳನ್ನು ಮತ್ತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಹಿಂತಿರುಗಿಸಲಾಗಿತ್ತು.


ನಂತರ ರಜನೀಶ್ ಪ್ರಕರಣದಲ್ಲಿ ಧೀರಜ್ ಮೋರ್ ತೀರ್ಪು ರದ್ದುಗೊಂಡಿತು. ಇದನ್ನು ಗಮನಿಸಿದ ಮೂವರು ನ್ಯಾಯಮೂರ್ತಿಗಳ ಪೀಠವು ಇಂತಹ ಹಿಂತಿರುಗಿಸುವ ಕ್ರಮಗಳು ಕಾನೂನುಬಾಹಿರವಾಗಿವೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.


ಅದರಿಂದ, ಮೊದಲು ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ಎಲ್ಲ ನ್ಯಾಯಿಕ ಅಧಿಕಾರಿಗಳು ತಮ್ಮ ಮೂಲ ನೇಮಕಾತಿಯ ದಿನಾಂಕದಿಂದಲೇ ಜಿಲ್ಲಾ ನ್ಯಾಯಾಧೀಶರ ಸೇವೆಯನ್ನು ಪರಿಗಣಿಸಲಾಗುತ್ತದೆ. ಅವರಿಗೆ ಸಂಬಂಧಿತ ಜ್ಯೇಷ್ಠತೆ ಹಾಗೂ ಇತರ ಲಾಭಗಳಿಗೂ ಹಕ್ಕು ಇರುತ್ತದೆ.


“ಇಂತಹ ಹಿಂತಿರುಗಿಸುವ ಕ್ರಮಗಳು ಕಾನೂನುಬಾಹಿರವಾಗಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಅವುಗಳನ್ನು ಕಾನೂನುಬಾಹಿರವೆಂದು ಘೋಷಿಸುತ್ತೇವೆ. ಮೊದಲು ನೇಮಕಗೊಂಡ ಎಲ್ಲಾ ನ್ಯಾಯಿಕ ಅಧಿಕಾರಿಗಳು ತಮ್ಮ ಮೂಲ ನೇಮಕಾತಿ ದಿನಾಂಕದಿಂದಲೇ ಜಿಲ್ಲಾ ನ್ಯಾಯಾಧೀಶರ ಸೇವೆಯಲ್ಲಿ ಇದ್ದವರಂತೆ ಪರಿಗಣಿಸಲ್ಪಡುತ್ತಾರೆ. ಅವರಿಗೆ ಸೇವಾ ಜೇಷ್ಟತೆ ಹಾಗೂ ಕಲ್ಪಿತ ವೇತನ ಲಾಭಗಳು ದೊರೆಯುತ್ತವೆ, ಆದರೆ ಬಾಕಿ ವೇತನ (arrears) ನೀಡಲಾಗುವುದಿಲ್ಲ.” ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.


ನಂತರ ಪೀಠವು ಎರಡನೇ ವರ್ಗದ ಅಧಿಕಾರಿಗಳನ್ನು ಪರಿಗಣಿಸಿತು. ಇವರ ನೇಮಕಾತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅರ್ಹತೆ ಕುರಿತ ವಿಚಾರಗಳ ಕಾರಣದಿಂದ ಅಂತಿಮ ನೇಮಕಾತಿ ಆದೇಶಗಳನ್ನು ನೀಡಲಾಗಿರಲಿಲ್ಲ ಎಂಬುದನ್ನು ಗಮನಿಸಿತು.


ನ್ಯಾಯಪೀಠದ ನಿರ್ದೇಶನ:

ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳು ತಕ್ಷಣವೇ ಇಂತಹ ಎಲ್ಲ ನ್ಯಾಯಿಕ ಅಧಿಕಾರಿಗಳಿಗೆ ನೇಮಕಾತಿ ನೀಡಬೇಕು. ಈ ನೇಮಕಾತಿ 12-10-2025ರಿಂದ ಪರಿಣಾಮಕಾರಿಯಾಗಿರಬೇಕು. ಇದು ಸಂವಿಧಾನ ಪೀಠದ ತೀರ್ಪು 09-10-2025ರಂದು ನೀಡಿದ ನಂತರದ ದಿನವಾಗಿದೆ.


ಆದರೆ ಸೇವಾ ಜೇಷ್ಟತೆ ನಿರ್ಧರಿಸುವ ವಿಷಯವು ಪ್ರತಿ ಹೈಕೋರ್ಟ್‌ನ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುವುದರಿಂದ ಸಂಕೀರ್ಣವಾಗಿದೆ ಎಂದು ನ್ಯಾಯಾಲಯ ಹೇಳಿತು. ಆದ್ದರಿಂದ, ಈಗ ನೇಮಕಗೊಳ್ಳಲಿರುವ ಅಧಿಕಾರಿಗಳು ಹಾಗೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಈಗಾಗಲೇ ನೇಮಕಗೊಂಡಿರುವ ಅಧಿಕಾರಿಗಳ ನಡುವೆ ಇರುವ ಪರಸ್ಪರ ಜೇಷ್ಟತೆಯನ್ನು ಸಂಬಂಧಿತ ಹೈಕೋರ್ಟ್ ಎಲ್ಲಾ ಪರಿಣಾಮ ಬೀರುವ ಅಧಿಕಾರಿಗಳ ಮಾತು ಕೇಳಿ ನಿರ್ಧರಿಸಬೇಕು ಎಂದು ಸೂಚಿಸಿತು.


ನ್ಯಾಯಾಲಯ ತೀರ್ಪಿನಲ್ಲಿ ಹೇಳಿದ ಅಂಶಗಳು:

ಈ ಪರಸ್ಪರ ಜೇಷ್ಟತೆಯನ್ನು ನಿರ್ಧರಿಸಲು ಹೈಕೋರ್ಟ್‌ಗಳು ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಬೇಕು. ಸಮಿತಿಯ ಶಿಫಾರಸ್ಸುಗಳನ್ನು ಹೈಕೋರ್ಟ್‌ನ ಪೂರ್ಣ ಪೀಠದ ಮುಂದೆ ಅಂತಿಮ ನಿರ್ಧಾರಕ್ಕಾಗಿ ಮಂಡಿಸಬೇಕು. ಈ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು.


ಮೂರನೇ ವರ್ಗದವರು ಎಂದರೆ ಆಯ್ಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲದ ಅಧಿಕಾರಿಗಳು. ಇವರ ಬಗ್ಗೆ ನ್ಯಾಯಾಲಯ ಹೈಕೋರ್ಟ್‌ಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಹ ಅಧಿಕಾರಿಗಳನ್ನು ನೇಮಕ ಮಾಡಲು ಸೂಚಿಸಿತು.


ಪೀಠವು ಇನ್ನೂ ಹೇಳಿದ್ದು, ಮೇರುಪಟ್ಟಿಯಲ್ಲಿ ಸ್ಥಾನ ಪಡೆದ ಅಧಿಕಾರಿಗಳಿಗೆ ಮುಂದಿನ ದಿನಾಂಕದಿಂದ ಮಾತ್ರ ಹಿರಿಯತೆ ದೊರೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಈಗಾಗಲೇ ಸ್ಥಿರವಾಗಿರುವ ಹಿಂದಿನ ಜ್ಯೇಷ್ಠತೆ ವ್ಯವಸ್ಥೆಯನ್ನು ಮರುಪರಿಶೀಲಿಸಲಾಗುವುದಿಲ್ಲ.


ಇನ್ನೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿರುವ ಅಧಿಕಾರಿಗಳ ಕುರಿತು ಪೀಠವು ಹೇಳಿದ್ದು:

ಒಂದು ಕಾಲದಲ್ಲಿ ಅವರು ಅರ್ಹರಾಗಿದ್ದರು ಎಂಬ ಕಾರಣಕ್ಕೆ ಅವರಿಗೆ ಯಾವುದೇ “ಕಲ್ಪಿತ ಹಕ್ಕುಗಳು” ಸೃಷ್ಟಿಯಾಗುವುದಿಲ್ಲ. ಆದರೆ ಅವರು ವಯೋಮಿತಿ ಮೀರಿದ್ದರೆ ಅವರಿಗೆ ವಯೋಮಿತಿ ಸಡಿಲಿಕೆ ನೀಡಬೇಕು.


ಹೈಕೋರ್ಟ್‌ಗಳು ಹೊಸ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿ ಅವರಿಗೆ ಭಾಗವಹಿಸಲು ಅವಕಾಶ ನೀಡಬೇಕು. ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿದರೆ, ಅವರಿಗೆ ನೇಮಕಾತಿಯ ಹಕ್ಕು ದೊರೆಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ಸಂವಿಧಾನ ಪೀಠದ ತೀರ್ಪಿನ ಬೆಳಕಿನಲ್ಲಿ ಇಂತಹ ಎಲ್ಲಾ ಸವಾಲುಗಳು ಫಲಕಾರಿಯಾಗುವುದಿಲ್ಲ. ಆ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳು ಮುಂದುವರಿಯಲು ಅರ್ಹವಿಲ್ಲ ಎಂದು ನ್ಯಾಯಪೀಠ ವಕೀಲರ ಸಂಘಗಳ ಅರ್ಜಿಯ ಬಗ್ಗೆ ಹೇಳಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu