-->
ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್‌

ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್‌

ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್‌





ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದ್ವೇಷ ಭಾಷಣ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇಂತಹ ಬೆಳವಣಿಗೆಯನ್ನು 'ಬ್ರಾಹ್ಮಣಫೋಬಿಯಾ' ಎಂದು ಬಣ್ಣಿಸಿದೆ.


ಮಹಾಲಿಂಗಂ ಬಾಲಾಜಿ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಉಜ್ವಲ್ ಭುಯಾನ್ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


ವಕೀಲರು ವಾದ ಮಂಡಿಸಲು ಆರಂಭಿಸಿದಾಗಲೇ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಪೀಠವು, ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಬಾರದು ಎಂದು ತಿಳಿಸಿತು.


'ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವುದನ್ನು ಒಪ್ಪುವುದಿಲ್ಲ. ಇದು ಶಿಕ್ಷಣ, ಬೌದ್ಧಿಕ ಬೆಳವಣಿಗೆ ಹಾಗೂ ಸಹಿಷ್ಣುತೆಯನ್ನು ಒಳಗೊಂಡಿದೆ. ಎಲ್ಲರೂ ಭ್ರಾತೃತ್ವವನ್ನು ಪಾಲಿಸಿದರೆ. ಎಲ್ಲಿಯೂ ದ್ವೇಷ ಭಾಷಣ ಇರುವುದಿಲ್ಲ' ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.


ದ್ವೇಷ ಭಾಷಣದ ಸಮುದಾಯಕ್ಕೆ ಮಾತ್ರ ಏಕೆ ರಕ್ಷಣೆ ಕೋರಲಾಗಿದೆ ಎಂದು ನ್ಯಾಯಪೀಠ ಈ ವೇಳೆ ಅರ್ಜಿದಾರರನ್ನು ಪ್ರಶ್ನಿಸಿತು.


ಅರ್ಜಿದಾರರು ಸ್ವತಃ ಅರ್ಜಿ ಹಿಂಪಡೆಯಲು ಮಾಡಿದ ಮನವಿಗೆ ನ್ಯಾಯಾಲಯವು ಸಮ್ಮತಿ ನೀಡಿತು.

'ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ಪಡೆಯಲು ಒಪ್ಪಿದ್ದಾರೆ. ಅವರು ಸಲ್ಲಿಕೆಯನ್ನು ದಾಖಲೆಯಲ್ಲಿ ಇರಿಸಲಾಗಿದೆ. ಅರ್ಜಿ ಹಿಂದಕ್ಕೆ ಪಡೆದಿರುವ ಕಾರಣ, ಅರ್ಜಿ ವಜಾಗೊಳಿಸಲಾಗಿದೆ' ಎಂದು ನ್ಯಾಯಪೀಠ ತಿಳಿಸಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu