-->
ಜಡ್ಜ್ ಹುದ್ದೆ ಹೂವಿನ ಹಾಸಿಗೆಯಲ್ಲ; ನನ್ನ ಸೇವೆ ಬಗ್ಗೆ ತೃಪ್ತಿ ಇದೆ: ಬೀಳ್ಕೊಡುಗೆ ಭಾಷಣದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾ. ಎಂ.ಜಿ. ಉಮಾ

ಬೆಂಗಳೂರು ವಕೀಲರ ಸಂಘದ (ಎಎಬಿ) ವತಿಯಿಂದ ದಿನಾಂಕ 10.3.2026 ರಂದು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನ್ಯಾಯಮೂರ್ತಿ ಎಂ. ಜಿ. ಉಮಾ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

‘ಯಾವುದೂ ಶಾಶ್ವತವಲ್ಲ. ನಾವೆಲ್ಲರೂ ಇಲ್ಲಿ ಸೀಮಿತ ಅವಧಿಗೆ ಮಾತ್ರವೇ ಇರುತ್ತೇವೆ. ಆದ್ದರಿಂದ, ಈ ಮಹಾನ್ ಸಂಸ್ಥೆಯ ಘನತೆಯನ್ನು ಎತ್ತಿಹಿಡಿಯಲು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು’ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಜಿ.ಉಮಾ ಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಮಂಗಳವಾರ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆಯಾಗಿ ಈ ಹಂತ ತನಕ ನಡೆದು ಬಂದಿದ್ದೇನೆ. ಈ ವೃತ್ತಿ ಹೂವಿನ ಹಾಸಿಗೆಯಲ್ಲ. ಹಗ್ಗದ ಮೇಲಿನ ನಡಿಗೆ ಎಂದು ಅವರು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.

ತಮ್ಮ ಸೇವಾವಧಿಯಲ್ಲಿ ಮೈಸೂರು, ಬಳ್ಳಾರಿ, ಮಂಗಳೂರು, ರಾಮನಗರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆಯಾಗಿ ನಂತರ ಹೈಕೋರ್ಟ್‌ಗೆ ಪದೋನ್ನತಿ ಹೊಂದಿ ನ್ಯಾಯಮೂರ್ತಿಯಾಗಿ ನಾನು ಮಾಡಿರುವ ಕೆಲಸ ನನಗೆ ಸಂಪೂರ್ಣ ಸಮಾಧಾನ ಮತ್ತು ತೃಪ್ತಿ ಇದೆ' ಎಂದು ಅವರು ಸ್ಮರಿಸಿದರು.

Ads on article

Advertise in articles 1

advertising articles 2

Advertise under the article

Join our WhatsApp Channel Powered By : Online Pudu