-->
ಚೆಕ್ ಅಮಾನ್ಯ ಪ್ರಕರಣ: ಶಿಕ್ಷೆ ಅಂತಿಮಗೊಂಡ ನಂತರವೂ ರಾಜಿ ಸಾಧ್ಯ- ಹೈಕೋರ್ಟ್ ಪುನರುಚ್ಚಾರ

ಚೆಕ್ ಅಮಾನ್ಯ ಪ್ರಕರಣ: ಶಿಕ್ಷೆ ಅಂತಿಮಗೊಂಡ ನಂತರವೂ ರಾಜಿ ಸಾಧ್ಯ- ಹೈಕೋರ್ಟ್ ಪುನರುಚ್ಚಾರ

ಚೆಕ್ ಅಮಾನ್ಯ ಪ್ರಕರಣ: ಶಿಕ್ಷೆ ಅಂತಿಮಗೊಂಡ ನಂತರವೂ ರಾಜಿ ಸಾಧ್ಯ- ಹೈಕೋರ್ಟ್ ಪುನರುಚ್ಚಾರ





ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಶಿಕ್ಷೆ ಅಂತಿಮಗೊಂಡ ಬಳಿಕವೂ ಪಕ್ಷಗಳ ನಡುವಿನ ರಾಜಿ ಒಪ್ಪಂದಕ್ಕೆ ಮಾನ್ಯತೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.


ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಉರ್ಮಿಳಾ ಜೋಶಿ ಫಲ್ಕೆ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ನೆಗೋಶಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆಯ ಸೆಕ್ಷನ್ 138 ರಡಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆ ಅಂತಿಮಗೊಂಡ ನಂತರವೂ ಪಕ್ಷಗಳು ಪರಸ್ಪರ ರಾಜಿ ಮಾಡಿಕೊಂಡರೆ, ಅದಕ್ಕೆ ಕಾನೂನುಬದ್ಧ ಮಾನ್ಯತೆ ನೀಡಬೇಕು ಎಂದು ಪುನರುಚ್ಚರಿಸಿದೆ.


ಇಂತಹ ಪ್ರಕರಣಗಳಲ್ಲಿ ಪರಿಹಾರ (compensation) ಅಂಶಕ್ಕೆ ಶಿಕ್ಷಾತ್ಮಕ (punitive) ಅಂಶಕ್ಕಿಂತ ಹೆಚ್ಚು ಆದ್ಯತೆ ನೀಡಬೇಕು. ಆದ್ದರಿಂದ, ಪಕ್ಷಗಳು ವಿವಾದವನ್ನು ಬಗೆಹರಿಸಲು ಸಮ್ಮತಿಸಿದರೆ, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯಿದೆ ಅಡಿಯಲ್ಲಿ ಅಪರಾಧಗಳನ್ನು ರಾಜಿ (compounding) ಮಾಡುವುದನ್ನು ನ್ಯಾಯಾಲಯಗಳು ಉತ್ತೇಜಿಸಬೇಕು ಎಂದು ತೀರ್ಪು ಹೇಳಿದೆ.


ಚೆಕ್ ಬೌನ್ಸ್ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯನ್ನು ರದ್ದುಪಡಿಸಿದ ಹೈಕೋರ್ಟ್ ನ್ಯಾಯಪೀಠ, ಎನ್.ಐ. ಆಕ್ಟ್ ನಡಿ ದಾಖಲಾದ ಪ್ರಕರಣವು ಯಾವುದೇ ಹಂತದಲ್ಲೂ, ಅಂದರೆ ಶಿಕ್ಷೆ ಅಂತಿಮವಾದ ನಂತರವೂ ಪಕ್ಷಕಾರರು ರಾಜಿ ಮಾಡಿಕೊಂಡರೆ, ಸೆಕ್ಷನ್ 147 ಅಡಿಯಲ್ಲಿ ಅದನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ.


ಹಿಮಾಚಲ ಪ್ರದೇಶ ಹೈಕೋರ್ಟ್‌ನ ಚುನೆ ರಾಮ್ ವಿರುದ್ಧ ಬಿಕ್ರಮ್ ಚಂದ್ (2025) ತೀರ್ಪನ್ನು ಉಲ್ಲೇಖಿಸಿ ಹೀಗೆ ಹೇಳಿದೆ:

“ಸೆಕ್ಷನ್ 138 ಅಡಿಯಲ್ಲಿ ಅಪರಾಧಕ್ಕೆ ಸಂಬಂಧಿಸಿದಂತೆ ಪಕ್ಷಕಾರರು ರಾಜಿ ಮಾಡಿಕೊಂಡರೆ, ಸೆಕ್ಷನ್ 147 ಅಡಿಯಲ್ಲಿ ಯಾವುದೇ ಹಂತದಲ್ಲಿಯೂ ಅದಕ್ಕೆ ಪರಿಣಾಮ ನೀಡಬೇಕು. ಶಿಕ್ಷೆ ಅಂತಿಮಗೊಂಡಿದೆ ಎಂಬ ಕಾರಣದಿಂದ ರಾಜಿಗೆ ಮಾನ್ಯತೆ ನೀಡದಿದ್ದರೆ, ಸೆಕ್ಷನ್ 147 ನ ಉದ್ದೇಶವೇ ಅರ್ಥಹೀನವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜಿಯನ್ನು ಅಂಗೀಕರಿಸದಿರುವುದು ಪಕ್ಷಗಳಿಗೆ ಅನ್ಯಾಯವಾಗುತ್ತದೆ.”


ಇದಲ್ಲದೆ, ಸುಪ್ರೀಂ ಕೋರ್ಟ್ ಸ್ಥಾಪಿತ ಸಿದ್ಧಾಂತದಂತೆ ಪರಿಹಾರಾತ್ಮಕ ಅಂಶಕ್ಕೆ ಶಿಕ್ಷಾತ್ಮಕ ಅಂಶಕ್ಕಿಂತ ಹೆಚ್ಚಿನ ಮಹತ್ವವಿದೆ ಎಂಬುದನ್ನು ನ್ಯಾಯಾಲಯ ಪುನಃ ಒತ್ತಿಹೇಳಿತು.


ವಾಸ್ತವ ಹಿನ್ನಲೆ

ಅರ್ಜಿದಾರನು ಎನ್.ಐ. ಆಕ್ಟ್ ಸೆಕ್ಷನ್ 138 ಅಡಿಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಮೂಲ ಆರೋಪಿ ಆಗಿದ್ದನು. ಈ ಪ್ರಕರಣಗಳಲ್ಲಿ ಅವನ ವಿರುದ್ಧ ಶಿಕ್ಷೆ ವಿಧಿಸಲಾಗಿತ್ತು. ಅವನ ಮೇಲ್ಮನವಿಯೂ (appeal) ಹಾಗೂ ಪುನರ್ ಪರಿಶೀಲನೆಯೂ (revision) ತಿರಸ್ಕೃತವಾಗಿದ್ದವು.


ಆದರೆ, ಈ ಪ್ರಕ್ರಿಯೆಗಳು ನಡೆಯುತ್ತಿದ್ದ ಸಮಯದಲ್ಲಿ ಪಕ್ಷಗಳ ನಡುವೆ ರಾಜಿ ಮಾತುಕತೆಗಳು ನಡೆದಿದ್ದು, ನಂತರ ಅಂತಿಮವಾಗಿ ಅವರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ, ಶಿಕ್ಷೆ ಹಾಗೂ ದಂಡದ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮುಂದೆ ಮನವಿ ಮಾಡಲಾಯಿತು.


ನ್ಯಾಯಾಲಯದ ತಾರ್ಕಿಕ ವಿಶ್ಲೇಷಣೆ

ನ್ಯಾಯಾಲಯವು ಸೆಕ್ಷನ್ 147 ಅನ್ನು ಉಲ್ಲೇಖಿಸಿ, ಅದು non-obstante clause ಹೊಂದಿರುವುದರಿಂದ, ದಂಡ ಪ್ರಕ್ರಿಯೆ ಸಂಹಿತೆ 1973 ರ ನಿಯಮಗಳನ್ನು ಮೀರಿ ಪ್ರಾಬಲ್ಯ ಹೊಂದಿದೆ ಎಂದು ತಿಳಿಸಿತು.


ಹಾಗೆಯೇ, ದಂಡ ಪ್ರಕ್ರಿಯ ಸಂಸ್ಕೃತಿ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 5 ಪ್ರಕಾರ, ವಿಶೇಷ ಕಾನೂನುಗಳಾದ ಎನ್.ಐ.ಆಕ್ಟ್ ನ ನಿಯಮಗಳು ಪ್ರಾಬಲ್ಯ ಹೊಂದಿರುತ್ತವೆ. ಆದ್ದರಿಂದ, ಸೆಕ್ಷನ್ 147, ಸಿ.ಆರ್.ಪಿ.ಸಿ. ಯ ಸೆಕ್ಷನ್ 320(9) ರ ಮೇಲೆ ಮೇಲುಗೈ ಹೊಂದಿದೆ ಎಂದು ಹೇಳಿದೆ.

ಇನ್ನೂ, ದಂಡ ಪ್ರಕ್ರಿಯ ಸಂಹಿತೆಯ ಸೆಕ್ಷನ್ 482 ಅಥವಾ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 528 ಅಡಿಯಲ್ಲಿ ಹೈಕೋರ್ಟ್ ತನ್ನ ಅಂತರ್ನಿಹಿತ ಅಧಿಕಾರವನ್ನು ಬಳಸಿಕೊಂಡು, ದೂರುದಾರನ ಸ್ಪಷ್ಟ ಒಪ್ಪಿಗೆಯಿದ್ದಲ್ಲಿ ಅಪರಾಧವನ್ನು ರಾಗಿ ಮಾಡಿಕೊಳ್ಳಲು ಅನುಮತಿಸಬಹುದು ಎಂದು ತಿಳಿಸಿತು.


ಅಂತಿಮ ಆದೇಶ


ಪಕ್ಷಕಾರರ ನಡುವಿನ ರಾಜಿ ಒಪ್ಪಂದವನ್ನು ಪರಿಗಣಿಸಿ, ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿ, ಅರ್ಜಿದಾರನ ವಿರುದ್ಧ ವಿಧಿಸಲಾದ ಶಿಕ್ಷೆ ಮತ್ತು ದಂಡದ ಆದೇಶಗಳನ್ನು ರದ್ದುಪಡಿಸಿತು.

“ಅರ್ಜಿದಾರನು ಎರಡೂ ಪ್ರಕರಣಗಳಲ್ಲಿ ನಿರ್ದೋಷಿ (acquitted) ಎಂದು ಘೋಷಿಸಲಾಗುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.


ಪ್ರಕರಣ ಶೀರ್ಷಿಕೆ: ರವಿ ವಿರುದ್ಧ ಅವಿನಾಶ್ ಶಿಂಧೆ


Ads on article

Advertise in articles 1

advertising articles 2

Advertise under the article