ಗ್ರಾಹಕರೇ ಗಮನಿಸಿ: ಈ ವಾರ ಬ್ಯಾಂಕ್, ಕೋರ್ಟ್, ಅಂಚೆ ಕಚೇರಿಗಳಿಗೆ ಭರ್ಜರಿ ರಜೆ
ಗ್ರಾಹಕರೇ ಗಮನಿಸಿ: ಈ ವಾರ ಬ್ಯಾಂಕ್, ಕೋರ್ಟ್, ಅಂಚೆ ಕಚೇರಿಗಳಿಗೆ ಭರ್ಜರಿ ರಜೆ
ಈ ವಾರದಲ್ಲಿ ಬ್ಯಾಂಕ್, ಕೋರ್ಟ್ ಮತ್ತು ಅಂಚೆ ಕಚೇರಿಗಳಿಗೆ ಭರ್ಜರಿ ರಜೆ ಇದ್ದು, ಇದನ್ನು ಗಮನಿಸದಿದ್ದರೆ ಸಂಬಂಧಪಟ್ಟ ಗ್ರಾಹಕರು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.
ಗ್ರಾಹಕರೇ ಗಮನಿಸಿ.
ಈ ವಾರ ಬ್ಯಾಂಕ್ ವ್ಯವಹಾರ, ಕೋರ್ಟ್ ಮತ್ತು ಅಂಚೆ ವ್ಯವಹಾರಗಳು ವಿಳಂಬವಾಗುವ ಅಥವಾ ಅಸ್ತವ್ಯಸ್ಥವಾಗುವ ಸಾಧ್ಯತೆ ಇದೆ.
ಯಾಕೆಂದರೆ, ಬೆನ್ನು ಬೆನ್ನಿಗೆ ರಜೆಗಳು ನಿಮ್ಮ ಎಲ್ಲ ಯೋಜನೆಗಳನ್ನು ವಿಫಲಗೊಳಿಸುವ ಸಾಧ್ಯತೆ ಇದೆ. ಹಾಗಾಗಿ ರಜೆಗಳ ಬಗ್ಗೆ ತಿಳಿದುಕೊಂಡು ಎಚ್ಚರಿಕೆಯಿಂದ ಹೆಜ್ಜೆ ಇಡಿ.
ನ್ಯಾಯಾಲಯಗಳಿಗೆ ಮೂರು ದಿನ ಸತತ ರಜೆ
ಈ ವಾರದಲ್ಲಿ ನ್ಯಾಯಾಲಯಗಳಿಗೆ ನಾಲ್ಕು ದಿನ ರಜೆ ಇದೆ. ಈ ಪೈಕಿ ಸತತ ಮೂರು ದಿನಗಳ ರಜೆ ಇರುತ್ತದೆ. ಭಾನುವಾರದಿಂದ ಮಂಗಳವಾರದ ವರೆಗೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಇರುತ್ತದೆ.
ಎಪ್ರಿಲ್ ಒಂದು ಮತ್ತು ಎರಡರಂದು ಕೋರ್ಟ್ ಕಲಾಪಗಳು ನಡೆಯಲಿದೆ. ಮತ್ತೆ ಶುಕ್ರವಾರ ಗುಡ್ ಫ್ರೈಡೇ ಪ್ರಯುಕ್ತ ರಜೆ ಇರುತ್ತದೆ.
ಬ್ಯಾಂಕ್‌ಗಳಿಗೆ ರಜೆ
ಸೋಮವಾರ ಬ್ಯಾಂಕ್ ರಜೆ ಇರುತ್ತದೆ. ಮಹಾವೀರ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆ ಹಿನ್ನೆಲೆಯಲ್ಲಿ ಆ ದಿನ ಬ್ಯಾಂಕ್ ವಹಿವಾಟು ಇರುವುದಿಲ್ಲ.
ಏಪ್ರಿಲ್ 1ರಂದು ವರ್ಷಾಂತ್ಯದ ಪ್ರಯುಕ್ತ ಬ್ಯಾಂಕಿಂಗ್ ವ್ಯವಹಾರ ಇರುವುದಿಲ್ಲ. ಮತ್ತೆ ಶುಕ್ರವಾರ ಗುಡ್ ಫ್ರೈಡೇ ಪ್ರಯುಕ್ತ ರಜೆ ಇರುತ್ತದೆ.
ಅಂಚೆ ಕಚೇರಿಗಳಲ್ಲಿ ಈ ವಾರ ನಾಲ್ಕು ದಿನ ವ್ಯವಹಾರವಿಲ್ಲ
ಅಂಚೆ ಕಚೇರಿಗಳು ಈ ವಾರ ನಾಲ್ಕು ದಿನ ಗ್ರಾಹಕರಿಗೆ ಮುಚ್ಚಿರುತ್ತದೆ. ಮಾರ್ಚ್ 31ರಂದು ಮಹಾವೀರ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ಏಪ್ರಿಲ್ 1 ಮತ್ತು 2 ರಂದು ವರ್ಷಾಂತ್ಯದ ಪ್ರಯುಕ್ತ ಅಂಚೆ ಬ್ಯಾಂಕಿಂಗ್ ವ್ಯವಹಾರವಿರುವುದಿಲ್ಲ
ಅದರ ಮರುದಿನ, ಅಂದರೆ ಏಪ್ರಿಲ್ 3ರಂದು ಶುಕ್ರವಾರ ಗುಡ್ ಫ್ರೈಡೇ ಪ್ರಯುಕ್ತ ರಜೆ ಇರುತ್ತದೆ. ಹಾಗಾಗಿ, ಸತತ ನಾಲ್ಕು ದಿನಗಳ ಕಾಲ ಗ್ರಾಹಕರು ಅಂಚೆ ವಹಿವಾಟು ಇಲ್ಲದೆ ಪರದಾಡಬೇಕಾಗುತ್ತದೆ.