-->
ಮುಖ್ಯ ಶಿಕ್ಷಕಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧದ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್ ನಕಾರ

ಮುಖ್ಯ ಶಿಕ್ಷಕಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧದ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್ ನಕಾರ

ಮುಖ್ಯ ಶಿಕ್ಷಕಿ ಮೇಲೆ ನಿರಂತರ ಅತ್ಯಾಚಾರ ಆರೋಪ: ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧದ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್ ನಕಾರ





ಇನ್‌ಸ್ಪೆಕ್ಟರ್ ಸಂದೇಶ್ ಸೇರಿ ಇತರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸಿ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಆದೇಶಿಸಿ, ಅರ್ಜಿ ವಜಾಗೊಳಿಸಿದ ನ್ಯಾಯಾಲಯ.


ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ಪದೇಪದೇ ಅತ್ಯಾಚಾರ ಮಾಡಿದ ಆರೋಪದ ಮೇಲೆ ಮೂಡುಬಿದರೆಯ ಸದ್ಯ ಅಮಾನತುಗೊಂಡಿರುವ ಪೊಲೀಸ್ ಇನ್‌ಸ್ಪೆಕ್ಟರ್ ಪಿ ಜಿ ಸಂದೇಶ್ ಸೇರಿ ಮೂವರ ವಿರುದ್ಧ ದಾಖಲಾಗಿರುವ ಪ್ರಕರಣ ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, “ಪೊಲೀಸ್ ಅಧಿಕಾರಿಯಾಗಿ ಹೀಗೆಲ್ಲಾ ಮಾಡುವಂತಿಲ್ಲ" ಎಂದು ಮೌಖಿಕವಾಗಿ ಕಿಡಿಕಾರಿತು.


ದಕ್ಷಿಣ ಕನ್ನಡದ ವೇಣೂರು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಪಿ ಜಿ ಸಂದೇಶ್, ಉಡುಪಿಯ ಸ್ಮಿತಾ ಪೂರ್ಣಿಮಾ ಆರ್. ಮಲ್ಯ ಮತ್ತು ಮಂಗಳೂರಿನ ಸುನೀತಾ ಲೋಬೊ ಎಫ್‌ಐಆರ್ ರದ್ದತಿಗೆ ಹಾಗೂ ಪ್ರಕರಣಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.


ನ್ಯಾಯಮೂರ್ತಿಗಳ ಮೌಖಿಕ ಆಕ್ರೋಶದ ಹಿನ್ನೆಲೆಯಲ್ಲಿ ಸಂದೇಶ್ ಪರ ವಕೀಲ ಎಂ ಆರ್ ಬಾಲಕೃಷ್ಣ ಅವರು ಅರ್ಜಿ ಹಿಂಪಡೆಯುವುದಾಗಿ ಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸಿ ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ" ಎಂದು ಅರ್ಜಿ ಹಿಂಪಡೆಯಲು ಒಪ್ಪಿರುವುದರಿಂದ ಅದನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿತು.


ಇದಕ್ಕೂ ಮುನ್ನ ಬಾಲಕೃಷ್ಣ ಅವರು "ಕೃತ್ಯ ನಡೆದು ಮೂರು ವರ್ಷಗಳ ಬಳಿಕ ಸಂತ್ರಸ್ತೆಯಾಗಿರುವ ಮುಖ್ಯ ಶಿಕ್ಷಕಿಯು ಪ್ರಕರಣ ದಾಖಲಿಸಿದ್ದಾರೆ. 2022ರ ನವೆಂಬರ್‌ನಿಂದ 2023ರ ಜೂನ್ ನಡುವೆ ಅತ್ಯಾಚಾರ ನಡೆದಿದೆ ಎಂದಿದ್ದಾರೆ. 21.3.2026ರಂದು ಪ್ರಕರಣ ದಾಖಲಾಗಿದೆ. ಇದೊಂದು ಪಿತೂರಿಯಾಗಿದೆ. ಪೊಲೀಸ್ ಅಧಿಕಾರಿ ಸಂದೇಶ್ ಅವರನ್ನು ಸಿಲುಕಿಸಲು ಈ ಕೃತ್ಯ ಎಸಗಲಾಗಿದೆ. ಮೇಲ್ನೋಟಕ್ಕೆ ಯಾವುದೇ ಪ್ರಕರಣವಲ್ಲ" ಎಂದರು.


ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು "ಮೊದಲನೇ ಅರ್ಜಿದಾರ ಪೊಲೀಸ್ ಅಧಿಕಾರಿ. ಸಿಆರ್‌ಪಿಸಿ ಸೆಕ್ಷನ್ 183ರ ಅಡಿ ಸಂತ್ರಸ್ತೆಯ ಹೇಳಿಕೆ ಇದೆ. ಅದೇ ಸಾಕಲ್ಲವೇ? ತನಿಖೆ ನಡೆಯಬೇಕು" ಎಂದರು.


ಸಂತ್ರಸ್ತ ಪರ ವಕೀಲರು "2 ಮತ್ತು 3ನೇ ಆರೋಪಿಗಳು ಮೊದಲ ಅರ್ಜಿದಾರರ ಪರವಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿ, ದೂರು ಮುಂದುವರಿಸದಂತೆ ಹೆದರಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ನೀಡಲಾಗಿದ್ದು, ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಸಂದೇಶ್ ವಿರುದ್ಧ 2-3 ಪ್ರಕರಣ ದಾಖಲಾಗಿವೆ. 13 ಲಕ್ಷ ನಗದನ್ನು ಸಂತ್ರಸ್ತೆಯು ಪೊಲೀಸ್ ಅಧಿಕಾರಿಗೆ ನೀಡಿದ್ದಾರೆ. ಅರ್ಜಿದಾರರು ಸಂತ್ರಸ್ತೆ ಜೊತೆ ಮಾತನಾಡಿರುವ 800ಕ್ಕೂ ಹೆಚ್ಚು ಆಡಿಯೊ ರೆಕಾರ್ಡಿಂಗ್ ಇದೆ" ಎಂದರು.


ವಿಚಾರಣೆಯ ಒಂದು ಹಂತದಲ್ಲಿ ಪೀಠವು "ಪೊಲೀಸ್ ಅಧಿಕಾರಿಯಾಗಿ ಹೀಗೆಲ್ಲಾ ನೀವು ಮಾಡುವಂತಿಲ್ಲ.ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಬನ್ನಿ ನೋಡೋಣ" ಎಂದಿತು.


ಅರ್ಜಿದಾರರಿಗೆ ತನಿಖೆಯ ನೆಪದಲ್ಲಿ ಕಿರುಕುಳ ನೀಡದಂತೆ ಆದೇಶಿಸಬೇಕು ಎಂಬ ವಕೀಲ ಬಾಲಕೃಷ್ಣ ಅವರ ಮನವಿಯನ್ನು ನ್ಯಾಯಾಲಯವು ಸ್ಪಷ್ಟವಾಗಿ ನಿರಾಕರಿಸಿತು.


ಪ್ರಕರಣದ ಹಿನ್ನೆಲೆ: ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಮೂಡಿಬಿದಿರೆ ಇನ್ಸ್‌ ಪೆಕ್ಟರ್ ಆಗಿದ್ದ ಸಂದೇಶ್ ವಿರುದ್ಧ ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 376(2)ಎ(1), 376(2)(ಎನ್‌), 384, 506ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ.


ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ, ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು, ಆರೋಪ ಎಂದು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.


ಬೆಳ್ತಂಗಡಿ ತಾಲ್ಲೂಕಿನಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್, 2018 ರಿಂದ 2023ರ ವರೆಗೆ ಮನೆಗೆ ಬಂದು ಅತ್ಯಾಚಾರ ಮಾಡಿರುವುದಾಗಿ ಸ್ವತಃ ಶಿಕ್ಷಕಿ ಆರೋಪಿಸಿದ್ದಾರೆ. ಹಲವು ಕಾರಣಗಳನ್ನು ಹಿಡಿದು. ಕೆಲ ಪ್ರಕರಣಗಳ ಕುರಿತು ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. 2018 ರಿಂದ 2023ರವರೆಗೆ ಸತತ 5 ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ.


ಜೀವ ಭಯ, ಮಾನ, ಕುಟುಂಬಸ್ಥರ ವಿರುದ್ಧವೂ ಬೆದರಿಕೆ ಹಾಕಿದ್ದ ಕಾರಣ ಮೌನವಾಗಿದ್ದ ಎಂದು ಶಿಕ್ಷಕಿ ದೂರಿದ್ದಾರೆ. ಆರೋಪದ ಹಿನ್ನೆಲೆಯಲ್ಲಿ ಸದ್ಯ ಸಂದೇಶ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu