-->
ಕೃಷಿ ಅಧಿಕಾರಿ 258 ಹುದ್ದೆಗಳ ನೇರ ನೇಮಕಾತಿಗೆ: ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

ಕೃಷಿ ಅಧಿಕಾರಿ 258 ಹುದ್ದೆಗಳ ನೇರ ನೇಮಕಾತಿಗೆ: ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

ಕೃಷಿ ಅಧಿಕಾರಿ 258 ಹುದ್ದೆಗಳ ನೇರ ನೇಮಕಾತಿಗೆ: ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ





ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ್ದು, ಕಲ್ಯಾಣ ಕರ್ನಾಟಕ ವೃಂದದ 258 ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 10ಕ್ಕೆ ಅಂತಿಮ ದಿನವಾಗಿರುತ್ತದೆ. ಹಾಗೂ ಶುಲ್ಕ ಪಾವತಿಗೆ ಪಾವತಿಗೆ ಮೇ ನ 12 ಕೊನೆಯ ದಿನ.


ಗ್ರೂಪ್-ಬಿ ವೃಂದದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಸ್ಪರ್ಧಾ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾಗುತ್ತದೆ.


ಬಿಎಸ್‌ಸಿ ಕೃಷಿ, ಬಿಎಸ್‌ಸಿ ಆನರ್ಸ್ (ಕೃಷಿ) ಹಾಗೂ ಬಿ.ಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40, ಹಿಂದುಳಿದ ವರ್ಗಗಳಿಗೆ 43 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 45 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.


ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ರೂ. 750, ಪರಿಶಿಷ್ಟ ಜಾತಿ-ಪಂಗಡ, ಇತರೆ ವಿಶೇಷ ವರ್ಗಗಳಿಗೆ ₹500 ಹಾಗೂ ಅಂಕವಿಕಲರಿಗೆ ₹250 ಶುಲ್ಕ ನಿಗದಿ ಮಾಡಲಾಗಿದೆ.


ಜೂನ್ 6ರಂದು ಕನ್ನಡ ಭಾಷಾ ಪರೀಕ್ಷೆ, ಜೂನ್ 14ರಂದು ಪತ್ರಿಕೆ-1 ಮತ್ತು ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu