-->
ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೇಮಕಾತಿ ಆರಂಭ: ಶಾಖಾಧಿಕಾರಿ ಹುದ್ದೆಗೆ ತಕ್ಷಣ ಅರ್ಜಿ ಸಲ್ಲಿಸಿ

ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೇಮಕಾತಿ ಆರಂಭ: ಶಾಖಾಧಿಕಾರಿ ಹುದ್ದೆಗೆ ತಕ್ಷಣ ಅರ್ಜಿ ಸಲ್ಲಿಸಿ

ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೇಮಕಾತಿ ಆರಂಭ: ಶಾಖಾಧಿಕಾರಿ ಹುದ್ದೆಗೆ ತಕ್ಷಣ ಅರ್ಜಿ ಸಲ್ಲಿಸಿ





ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ 17 ಜಿಲ್ಲೆಗಳಲ್ಲಿ ಖಾಲಿ ಶಾಖಾಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಶಾಖಾಧಿಕಾರಿ ಹುದ್ದೆ ಬಯಸಿ ತಕ್ಷಣ ಅರ್ಜಿ ಸಲ್ಲಿಸಬಹುದಾಗಿದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.05.2026 ಆಗಿರುತ್ತದೆ.


ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅದರ ವ್ಯಾಪ್ತಿಯ ಕಛೇರಿಯಲ್ಲಿ ಖಾಲಿ ಇರುವ 17 ಶಾಖಾಧಿಕಾರಿಗಳ ಹುದ್ದೆಗಳಿಗೆ ಉಳಿದ ಮೂಲ ವೃಂದದಡಿಯಲ್ಲಿ ಮತ್ತು 02 ಶಾಖಾಧಿಕಾರಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ವೃಂದದಡಿಯಲ್ಲಿ ನೇರ ನೇಮಕಾತಿ ಅರ್ಜಿಯನ್ನು ಸಲ್ಲಿಸಬಹುದೆಂದು ಅಧಿಸೂಚಿಸಲಾಗಿದೆ.


ಖಾಲಿ ಹುದ್ದೆಗಳ ವರ್ಗೀಕರಣ, ವೇತನ ಶ್ರೇಣಿ, ನೇಮಕಾತಿ ವಿಧಾನ, ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ. ಸೇವಾ ಪರಿವೀಕ್ಷಣಾ ಅವಧಿ, ಆಯ್ಕೆ ವಿಧಾನ, ಸಾಮಾನ್ಯ ಸೂಚನೆಗಳು, ಅರ್ಹತಾ ಮಾನದಂಡಗಳು ಮೊದಲಾದ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.


ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮೀಸಲಾತಿ ಇತ್ಯಾದಿಗಳ ಕುರಿತು ಹೆಚ್ಚಿನ ಕರ್ನಾಟಕ ಪ್ರಾಧಿಕಾರದ https://cetonline.karnataka. ವೆಬ್‌ಸೈಟ್ gov.in/kea/indexnew ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‌ಸೈಟ್: https://karnataka nalsa.gov.in ವಿವರಗಳಿಗಾಗಿ ,


ಶಾಖಾಧಿಕಾರಿ ಹುದ್ದೆಗಳ ನೇರನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ:16,04,2026 ರಿಂದ ಪ್ರಾರಂಭಗೊಂಡು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15.05.2026 ಆಗಿರುತ್ತದೆ.


ಆಸಕ್ತ ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶವಿರುವುದರಿಂದ ಮಾಹಿತಿಯನ್ನು ಪ್ರಚಾರ ಮಾಡುವ ಅಗತ್ಯವಿರುತ್ತದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu