-->
ಕೋರ್ಟ್ ಕಚೇರಿಯಿಂದ ಕಡತ ಕಣ್ಮರೆ: ಗುಮಾಸ್ತನ ಪ್ರಮಾದಕ್ಕೆ ಕ್ಷಮೆ ನೀಡದ ಹೈಕೋರ್ಟ್‌- ಶಿಸ್ತು ಕ್ರಮ ಎತ್ತಿಹಿಡಿದ ನ್ಯಾಯಪೀಠ

ಕೋರ್ಟ್ ಕಚೇರಿಯಿಂದ ಕಡತ ಕಣ್ಮರೆ: ಗುಮಾಸ್ತನ ಪ್ರಮಾದಕ್ಕೆ ಕ್ಷಮೆ ನೀಡದ ಹೈಕೋರ್ಟ್‌- ಶಿಸ್ತು ಕ್ರಮ ಎತ್ತಿಹಿಡಿದ ನ್ಯಾಯಪೀಠ

ಕೋರ್ಟ್ ಕಚೇರಿಯಿಂದ ಕಡತ ಕಣ್ಮರೆ: ಗುಮಾಸ್ತನ ಪ್ರಮಾದಕ್ಕೆ ಕ್ಷಮೆ ನೀಡದ ಹೈಕೋರ್ಟ್‌- ಶಿಸ್ತು ಕ್ರಮ ಎತ್ತಿಹಿಡಿದ ನ್ಯಾಯಪೀಠ





ರಾಂಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಕಡತವೊಂದು ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಮಾಸ್ತನ ಪ್ರಮಾದ ಗಂಭೀರ ಎಂದು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್‌, ಇಲಾಖಾ ತನಿಖೆಯ ನಂತರ ಶಿಸ್ತು ಪ್ರಾಧಿಕಾರ ವಿಧಿಸಿದ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.


ನ್ಯಾಯಾಂಗ ಕಡತವನ್ನು 'ಕಳೆದುಹಾಕಿದ' ಗುಮಾಸ್ತನಿಗೆ ಕರುಣೆ ತೋರಿಸದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.


ರಾಂಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಕಡತವೊಂದು ಕಣ್ಮರೆಯಾದ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆಸಿದ ಶಿಸ್ತು ಪ್ರಾಧಿಕಾರವು ತಪ್ಪಿತಸ್ಥ ಗುಮಾಸ್ತರ ನಾಲ್ಕು ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯುವ ಆದೇಶ ಹೊರಡಿಸಿತು.

ಇದರಿಂದ ಬಾಧಿತರಾದ ಗುಮಾಸ್ತರು ಇಲಾಖಾ ಕ್ರಮದ ವಿರುದ್ಧ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ವಜಾಗೊಳಿಸಲಾಯಿತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.


"ನ್ಯಾಯಾಂಗದ ದಾಖಲೆಯಿಂದ ನ್ಯಾಯಾಂಗ ಕಡತ ಕಳೆದುಹೋಗುವುದು ಅಥವಾ ಲಭ್ಯವಾಗದೇ ಇರುವುದು ಬಹಳ ಗಂಭೀರ ಆಪರಾಧ. ಇದು ನ್ಯಾಯದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಕಟುವಾಗಿ ನಿರ್ವಹಿಸಬೇಕಾಗುತ್ತದೆ" ಎಂದು ಅಲಹಾಬಾದ್ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.


ರಾಂಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ದೂರು ಪ್ರಕರಣಕ್ಕೆ ಸಂಬಂಧಿಸಿದ ಕಡತವೊಂದು ಕಣ್ಮರೆಯಾಗಿದ್ದರಿಂದ ಈ ಪ್ರಕರಣ ಹುಟ್ಟಿಕೊಂಡಿದೆ. ಸಿಬ್ಬಂದಿಗೆ ಪದೇ ಪದೇ ಅವಕಾಶಗಳನ್ನು ನೀಡಿದರೂ ಕಡತ ಪತ್ತೆಯಾಗದ ನಂತರ ಇಲಾಖಾ ವಿಚಾರಣೆ ಆರಂಭಿಸಲಾಯಿತು.


ಸಂಬಂಧಿತ ಸಮಯದಲ್ಲಿ ಕರ್ತವ್ಯ ನಿರತ ಗುಮಾಸ್ತರಾಗಿದ್ದ ಅರ್ಜಿದಾರರನ್ನು ನಷ್ಟಕ್ಕೆ ಹೊಣೆಗಾರರನ್ನಾಗಿ ಮಾಡಲಾಯಿತು. ಮತ್ತು 1956 ರ ಯುಪಿ ಸರ್ಕಾರಿ ಸೇವಕ ನಡವಳಿಕೆ ನಿಯಮಗಳ ಅಡಿಯಲ್ಲಿ ಇಲಾಖಾ, ವಿಚಾರಣೆ ನಡೆಸಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ದುರ್ನಡತೆಯ ಅಪರಾಧಿ ಎಂದು ತೀರ್ಮಾನಿಸಲಾಯಿತು.


ಅರ್ಜಿದಾರರಿಗೆ ವಿಚಾರಣೆಯ ಅವಕಾಶವನ್ನು ಒದಗಿಸಿದ ನಂತರ, ಶಿಸ್ತು ಪ್ರಾಧಿಕಾರವು ಸಂಚಿತ ಪರಿಣಾಮದೊಂದಿಗೆ ನಾಲ್ಕು ವೇತನ ಏರಿಕೆಗಳನ್ನು ತಡೆಹಿಡಿಯುವ ಆದೇಶವನ್ನು ಹೊರಡಿಸಿತು


ಇಲಾಖಾ ಕ್ರಮದ ವಿರುದ್ಧ ಅರ್ಜಿದಾರರು ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಯಿತು. ಸದರಿ ಆದೇಶದಿಂದ ಬಾಧಿತರಾದ ಅರ್ಜಿದಾರರು ಶಿಕ್ಷೆಯನ್ನು ಪ್ರಶ್ನಿಸಿ, ಅಲಹಾಬಾದ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.


ಕಚೇರಿಯಲ್ಲಿ ಕೆಲಸದ ಹಂಚಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿಲ್ಲ ಮತ್ತು ಕಾಣೆಯಾದ ಫೈಲ್‌ಗೆ ಜವಾಬ್ದಾರಿಯನ್ನು ನಿರ್ಣಾಯಕವಾಗಿ ನಿಗದಿಪಡಿಸಲಾಗಿಲ್ಲ ಎಂದು ಅರ್ಜಿದಾರರ ಪರವಾಗಿ ಹೈಕೋರ್ಟ್ ನಲ್ಲಿ ವಾದಿಸಲಾಯಿತು. ಕಾಣೆಯಾದ ಫೈಲ್‌ಗೆ ನಿಜವಾಗಿಯೂ ಕಾರಣರಾದ ವ್ಯಕ್ತಿ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳದೆ ತನಿಖಾ ಅಧಿಕಾರಿ ಅರ್ಜಿದಾರರನ್ನು ಕಾನೂನುಬಾಹಿರವಾಗಿ ತಪ್ಪಿತಸ್ಥರೆಂದು ಪರಿಗಣಿಸಿದ್ದಾರೆ ಎಂಬ ವಾದ ಮಂಡಿಸಲಾಯಿತು.


ಮತ್ತೊಂದೆಡೆ, ಅರ್ಜಿಯನ್ನು ವಿರೋಧಿಸಿದ ಶಿಸ್ತು ಪ್ರಾಧಿಕಾರದ ಪರ ವಕೀಲರು, ನ್ಯಾಯಾಲಯವು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಚಲಾಯಿಸುವಾಗ ಪ್ರಕರಣದ ಅರ್ಹತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಶಿಸ್ತು ಕ್ರಮಗಳ ಸಮಯದಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲಾಗಿರುವುದರಿಂದ ಶಿಕ್ಷೆಯ/ದಂಡನೆಯ ಆದೇಶದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ವಾದಿಸಲಾಯಿತು. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲು ಪ್ರಾರ್ಥನೆ ಸಲ್ಲಿಸಲಾಯಿತು.


ನ್ಯಾಯಾಂಗ ಪರಿಶೀಲನೆಯ ಸೀಮಿತ ವ್ಯಾಪ್ತಿ

ಆರಂಭದಲ್ಲಿ, ಅಲಹಾಬಾದ್ ಹೈಕೋರ್ಟ್ ಅರ್ಜಿದಾರರಿಗೆ ವಿಚಾರಣೆಯ ಅವಕಾಶವನ್ನು ನೀಡದಿರುವ ಬಗ್ಗೆ ಯಾವುದೇ ಆರೋಪವಿಲ್ಲ ಎಂದು ಗಮನಿಸಿತು. ಅರ್ಜಿದಾರರ ಅಪರಾಧಕ್ಕೆ ಶಿಕ್ಷೆಯು ಅನುಪಾತದಲ್ಲಿಲ್ಲ ಎಂಬ ಬಗ್ಗೆ ಯಾವುದೇ ವಾದವನ್ನು ಮಂಡಿಸಲಾಗಿಲ್ಲ ಎಂದು ನ್ಯಾಯಾಲಯವು ಗಮನಿಸಿತು.


ರಿಟ್ ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್, ಸೇವಾ ವಿಷಯಗಳಲ್ಲಿ ನ್ಯಾಯಾಂಗ ಪರಿಶೀಲನೆಯ ಸೀಮಿತ ವ್ಯಾಪ್ತಿಯನ್ನು ಒತ್ತಿ ಹೇಳಿತು.


ಇಲಾಖಾ ವಿಚಾರಣೆ ಪ್ರಕರಣದಲ್ಲಿ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯು ಬಹಳ ಸೀಮಿತವಾಗಿರುವುದರಿಂದ, ಶಿಸ್ತು ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವು ಹೊರಡಿಸಿದ ಆಕ್ಷೇಪಾರ್ಹ ಆದೇಶಗಳಲ್ಲಿ ಈ ನ್ಯಾಯಾಲಯವು ಯಾವುದೇ ಕಾನೂನುಬಾಹಿರತೆಯನ್ನು ಕಂಡುಕೊಳ್ಳುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.


ಪ್ರಕರಣದ ಶೀರ್ಷಿಕೆ- ಮಹಾವೀರ ಸಾಗರ್ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತಿತರರು


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu