ಸರ್ಕಾರಿ ನೌಕರನ ಅಮಾನತು ಅನಂತ ಕಾಲಕ್ಕೆ ಮುಂದುವರಿಯದು- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರ್ಕಾರಿ ನೌಕರನ ಅಮಾನತು ಅನಂತ ಕಾಲಕ್ಕೆ ಮುಂದುವರಿಯದು- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರ್ಕಾರಿ ನೌಕರನ ಅಮಾನತು ಆದೇಶವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸರ್ಕಾರಿ ನೌಕರನ ಅಮಾನತು ಆದೇಶವು ಕೇವಲ ಆತನ ವಿರುದ್ಧದ ಅಪರಾಧ ಪ್ರಕರಣ ಬಾಕಿ ಇದೆ ಎಂಬುದನ್ನೇ ಆಧಾರವಾಗಿ ಇಟ್ಟುಕೊಂಡಿದ್ದರೆ ಮತ್ತು ಸಮಂಜಸವಾದ ಅವಧಿಯೊಳಗೆ ಯಾವುದೇ ಇಲಾಖಾ ಶಿಸ್ತು ಕ್ರಮವನ್ನು ಪ್ರಾರಂಭಿಸದಿದ್ದಲ್ಲಿ ಅಂತಹ ಅಮಾನತು ಮುಂದುವರಿಯುವುದು ನ್ಯಾಯಸಮ್ಮತವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಮಾನತು ಆದೇಶದಿಂದ ನೌಕರನಿಗೆ ಅನಗತ್ಯ ತೊಂದರೆಯನ್ನು ತಪ್ಪಿಸಲು 90 ದಿನದೊಳಗೆ ಇಲಾಖಾ ಶಿಸ್ತು ಕ್ರಮ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಅಮಾನತು ವಿಚಾರಣೆಯ ಪ್ರಕ್ರಿಯೆಗಿಂತಲೂ ಶಿಕ್ಷೆಯಾಗಿ ಪರಿಣಮಿಸುತ್ತದೆ. ಹಾಗಾಗಿ, ಅಮಾನತು ಒಬ್ಬ ಸರ್ಕಾರಿ ನೌಕರನ ವಿರುದ್ಧ ಜಾರಿಗೊಳಿಸಲಾದ ಆದೇಶವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Service Law
An order of suspension against a public servant cannot continue indefinitely, particularly when the suspension is based solely on the pendency of a criminal case and no domestic disciplinary proceedings have been initiated within a reasonable timeframe. Karnataka High Court.
ಪ್ರಕರಣ: ಕಿಶೋರ್ ಕುಮಾರ್ ಬಿ.ಕೆ. ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, 25080/2023, Dated 10-03-2025