6 ವಕೀಲರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ: ಸುಪ್ರೀಂ ಕೊಲೀಜಿಯಂ ಶಿಫಾರಸ್ಸು
6 ವಕೀಲರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ: ಸುಪ್ರೀಂ ಕೊಲೀಜಿಯಂ ಶಿಫಾರಸ್ಸು
ಆರು ವಕೀಲರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿದೆ.
ನ್ಯಾಯಮೂರ್ತಿಗಳಾಗಿ ನೇಮಿಸಲು ಶಿಫಾರಸ್ಸುಗೊಂಡ ವಕೀಲರ ವಿವರ ಹೀಗಿದೆ.
ರಾಘವೇಂದ್ರ ಸೀತಾರಾಮ ಶ್ರೀವಾತ್ಸವ
ಹೇಮಾ ಕುಲಕರ್ಣಿ
ಸುಬ್ರಮಣ್ಯ ರಂಗಾರಾವ್
ಟಿ.ಪಿ. ವಿವೇಕಾನಂದ
ಬಕ್ಕೇಶ್ವರ ಪ್ರಮೋದ್
ಹೊಂಬೇಗೌಡ ಶಾಂತಿಭೂಷಣ್
ಕೆಳ ದಿನಗಳ ಹಿಂದೆಯಷ್ಟೇ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದ್ದು, ಆ ಮೂವರು ನ್ಯಾಯಮೂರ್ತಿಗಳಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಶಿಫಾರಸ್ಸುಗೊಂಡಿರುವ ವಕೀಲರ ಹೆಸರಿಗೆ ಒಪ್ಪಿಗೆ ದೊರೆತರೆ ನ್ಯಾಯಮೂರ್ತಿಗಳ ಸಂಖ್ಯೆ 54 ಕ್ಕೆ ಏರಿಕೆಯಾಗಲಿದೆ.
ಎಚ್ ಶಾಂತಿಭೂಷಣ್ ಅವರು ಸದ್ಯ ಡೆಪ್ಯೂಟಿ ಸಾಲಿಸಿಟರ್ ಜನರಲ್ ಆಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.