500 ರೂ. ವಾಚ್‌ಗೆ ಕಾನೂನು ಸಮರ: 29 ವರ್ಷಗಳ ಕಾನೂನು ಹೋರಾಟದ ಬಳಿಕ ವೃದ್ಧ ಅಪರಾಧಿ ಬಿಡುಗಡೆ!
500 ರೂ. ವಾಚ್‌ಗೆ ಕಾನೂನು ಸಮರ: 29 ವರ್ಷಗಳ ಕಾನೂನು ಹೋರಾಟದ ಬಳಿಕ ವೃದ್ಧ ಅಪರಾಧಿ ಬಿಡುಗಡೆ!
500 ರೂ. ವಾಚ್‌ಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ಪ್ರಕರಣದಲ್ಲಿ 29 ವರ್ಷಗಳ ಕಾನೂನು ಹೋರಾಟದ ಬಳಿಕ ವೃದ್ಧ ಅಪರಾಧಿ ಬಿಡುಗಡೆ ಹೊಂದಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಇದರಿಂದ ಕ್ಷುಲ್ಲಕ ಕಾರಣಕ್ಕಾಗಿ 29 ವರ್ಷಗಳ ಹಿಂದೆ ಜೈಲು ಸೇರಿದ್ದ ವ್ಯಕ್ತಿಗೆ ರಿಲೀಫ್ ಸಿಕ್ಕಿದೆ.
ಕೇವಲ 500 ರೂ. ಬೆಲೆಯ ವಾಚ್‌ಗೆ ಸಂಬಂಧಿಸಿದಂತೆ ಉತ್ತರಾಖಂಡದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಘಟನೆಗೆ ಕಾರಣವಾಗಿದ್ದ 29 ವರ್ಷ ಹಳೆಯ ಪ್ರಕರಣವನ್ನು ಇದೀಗ ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ.
ಪ್ರಕರಣದಲ್ಲಿ ಜೀವಂತವಿರುವ ಕೊನೆಯ ವೃದ್ಧ ಅಪರಾಧಿಯ 5 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆ ಮಾಡಲು ನ್ಯಾಯಾಲಯ ಅನುಮತಿಸಿದೆ.
"ಘಟನೆ ನಡೆದ 1997ರಲ್ಲಿ ಅರ್ಜಿದಾರ ಜಗದೀಶ್ ಅವರಿಗೆ 33 ವರ್ಷ ವಯಸ್ಸಾಗಿತ್ತು. ಈಗ ನಾವು 2026ರಲ್ಲಿದ್ದೇವೆ. ಘಟನೆ ಆಗಿ ಸುಮಾರು ಮೂರು ದಶಕಗಳು ಕಳೆದಿವೆ. ಅರ್ಜಿದಾರನಿಗೆ ಈಗ 60 ವರ್ಷ ದಾಟಿದೆ" ಎಂಬುದನ್ನು ನ್ಯಾಯಪೀಠ ಗಮನಿಸಿತು.
ಮೃತ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಕೈಗಡಿಯಾರದ ವಿಷಯವಾಗಿ ಆರಂಭವಾದ ಸಣ್ಣ ಜಗಳವು ಹೇಗೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಮತ್ತು ಆ ಗಲಾಟೆಯಲ್ಲಿ ಮೃತ ವ್ಯಕ್ತಿ ಪಕ್ಕದಲ್ಲಿದ್ದ ಒಣ ಕಾಲುವೆಗೆ ಬಿದ್ದು ಮೃತಪಟ್ಟರು ಎಂಬುದನ್ನು ಗಮನಿಸಬೇಕು'' ಎಂದು ನ್ಯಾಯಾಲಯ ಹೇಳಿದೆ.
ಈ ಆದೇಶದೊಂದಿಗೆ, ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ವೃದ್ಧ ಅಪರಾಧಿ ಮುಕ್ತವಾಗಿ ಹೊರನಡೆಯಲಿದ್ದಾರೆ.