ಆತ್ಮಸಾಕ್ಷಿ ಒಪ್ಪುತ್ತಿಲ್ಲ, ಜಾಮೀನು ಪಡೆಯಿರಿ: ಆರೋಪಿ ವಕೀಲರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಆತ್ಮಸಾಕ್ಷಿ ಒಪ್ಪುತ್ತಿಲ್ಲ, ಜಾಮೀನು ಪಡೆಯಿರಿ: ಆರೋಪಿ ವಕೀಲರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರಿನ ಜಿಮ್ ಟ್ರೈನರ್ ವಿಜಯ್ ಕುಮಾರ್ ಕೊಲೆಯ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ವಕೀಲ ಬಿ. ಲೋಕೇಶ್ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣ ರದ್ದುಪಡಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ, ಇಲ್ಲದಿದ್ದರೆ ಆದೇಶ ಮಾಡುತ್ತಿದ್ದೆ ಎಂದು ಹೇಳಿ ವಕೀಲರಿಗೆ ಜಾಮೀನು ಪಡೆಯಿರಿ ಎಂದು ಸೂಚಿಸಿದರು.
ವಕೀಲ ಲೋಕೇಶ್ ಮತ್ತು ಇತರ ಆರೋಪಿಗಳ ನಡುವೆ ಗಮನಾರ್ಹ ಹಣ ವರ್ಗಾವಣೆ ನಡೆದಿದೆ. ಇದನ್ನು ಹೈಕೋರ್ಟ್ ಪೀಠ ಗಮನಿಸಿತು. ಒಂದರಿಂದ ಐದನೇ ಆರೋಪಿಗಳು ಸುಪಾರಿ ಹಂತಕರಾಗಿದ್ದಾರೆ. ಅವರ ಖಾತೆಗೆ ವಕೀಲರ ಖಾತೆಯಿಂದ ಹಣ ಹೋಗಿರುವ ಬಗ್ಗೆ ನ್ಯಾಯಪೀಠ ದಾಖಲೆಯನ್ನು ಪರಿಶೀಲಿಸಿತು.
ಆರೋಪಿ ವಕೀಲ ಲೋಕೇಶ್ ಅವರನ್ನು ಪ್ರತಿನಿಧಿಸಿದ್ದ ವಕೀಲರು, ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ರಕ್ಷಣೆ ನೀಡುವಂತೆ ಕೋರಿದರು. ಇದನ್ನು ಆಲಿಸಿದ ನ್ಯಾಯಪೀಠ, ಮನವಿಗೆ ಸ್ಪಷ್ಟವಾಗಿ ನಿರಾಕರಿಸಿ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಹೇಳಿತು.
ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವುದು ಸೂಕ್ತ ಎಂದು ಹೇಳಿ ಪ್ರಸ್ತುತ ಅರ್ಜಿಯನ್ನು ಇತ್ಯರ್ಥಪಡಿಸಿತು.