ಪಿಯುಸಿ, ಪದವೀಧರರ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ: ವಿವಿಧ ಇಲಾಖೆಗಳ 4,723 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಪಿಯುಸಿ, ಪದವೀಧರರ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ: ವಿವಿಧ ಇಲಾಖೆಗಳ 4,723 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಪಿಯುಸಿ, ಪದವೀಧರರ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಭರ್ಜರಿ ಅವಕಾಶ ಒದಗಿ ಬಂದಿದೆ. ವಿವಿಧ ಇಲಾಖೆಗಳ 4,723 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗ ಮಾಡಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಾನಾ ಇಲಾಖೆಗಳ ಒಟ್ಟು 4,723 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ ಸೇರಿವೆ.
1) ಗ್ರಾಮ ಆಡಳಿತ ಅಧಿಕಾರಿಯ 572 ಹುದ್ದೆಗಳು
2) ಸರ್ವೆ ಇಲಾಖೆಯ 750 ಭೂಮಾಪಕರ ಹುದ್ದೆಗಳು
3) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಶಾಲೆಗಳ 1,087 ಶಿಕ್ಷಕರ ಹುದ್ದೆ
4) ಕೆಎಸ್‌ಆರ್‌ಪಿ ಪೊಲೀಸ್ ಕಾನ್ಸ್‌ಟೇಬಲ್ 2,314 ಹುದ್ದೆಗಳು
ಈ ಮೇಲಿನ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ)ಯ ಅಧಿಸೂಚನೆಯನ್ನು ನೋಡಬಹುದಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಜೆನ್ ಜಿಗಳೇ ಎಚ್ಚರ! ಉದ್ಯೋಗದ ಹೆಸರಲ್ಲಿ ನಡೆಯುತ್ತಿದೆ ಭಾರೀ ವಂಚನೆ
ಜಾಬ್ ಹೆಸರಲ್ಲಿ 10ರಲ್ಲಿ 9 ಜನರಿಗೆ ವಂಚನೆ: ಹೂಡಿಕೆ ಹಣ ದುಪ್ಪಟ್ಟುಗೊಳಿಸುವುದು, ಡಿಜಿಟಲ್ ಅರೆಸ್ಟ್ ಸೇರಿ ಹಲವು ರೀತಿಯಲ್ಲಿ ಆನ್‌ಲೈನ್ ವಂಚನೆಗಳು ಬಯಲಾಗುತ್ತಲೇ ಇವೆ. ಇದರ ಮಧ್ಯೆಯೇ, ಆನ್‌ಲೈನ್ ಮೂಲಕ ಸಂಪರ್ಕಿಸಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಕೊನೆಗೆ ವಂಚಿಸುವ ಪ್ರಕರಣಗಳೂ ಜಾಸ್ತಿಯಾಗುತ್ತಿವೆ. ಇಂಡೀಡ್ ಕಂಪನಿಯ ಇತ್ತೀಚಿನ ವರದಿಯೊಂದು ಇಂತಹ ಭೀತಿ ಹುಟ್ಟಿಸಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ 10 ಜನರ ಪೈಕಿ 9 ಮಂದಿಗೆ ವಂಚನೆ ಮಾಡಲಾಗುತ್ತಿದೆ ಎಂಬುದಾಗಿ ವರದಿ ತಿಳಿಸಿದೆ.
ಇಂಡೀಡ್ ಕಂಪನಿಯು ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿ ಸಮೀಕ್ಷಾವರದಿ ತಯಾರಿಸಿದೆ. 'ದೇಶದಲ್ಲಿ ಶೇ.93ರಷ್ಟು ಮಂದಿಯು ಉದ್ಯೋಗದ ನೆಪದಲ್ಲಿ ವಂಚನೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ. ಇದೇ ರೀತಿ, 51ರಷ್ಟು ಆಕಾಂಕ್ಷಿಗಳು ಆನ್ ಲೈನ್ ಮೂಲಕ ಸಿಗುವ ಜಾಬ್ ಆಫರ್‌ಗಳನ್ನು ನಂಬುವಂತೆ ಇಲ್ಲ ಎಂದು ಹೇಳಿದ್ದಾರೆ,'' ಎಂದು ವರದಿ ತಿಳಿಸಿದೆ.
''ಶೇ.31 ರಷ್ಟು ಜನರು ತಮಗೆ ಬರುವ ಯಾವುದೇ ಆಫರ್‌ಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇಂತಹ ವಂಚನೆಗಳಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಿದೆ,'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ವಂಚನೆಗೆ ಸಿಲುಕುವವರಲ್ಲಿಜೆನ್ ಜಿ ಪೀಳಿಗೆಯವರೇ ಜಾಸ್ತಿ ಇದ್ದಾರೆ ಎಂಬುದಾಗಿಯೂ ವರದಿ ತಿಳಿಸಿದೆ.