ವಯಸ್ಕರ ಒಪ್ಪಿತ ದೈಹಿಕ ಸಂಬಂಧ: ವ್ಯಕ್ತಿತ್ವಕ್ಕೆ ಬಾಧಕವೇ..?- ಸುಪ್ರೀಂ ಮಹತ್ವದ ತೀರ್ಪು
ವಯಸ್ಕರ ಒಪ್ಪಿತ ದೈಹಿಕ ಸಂಬಂಧ: ವ್ಯಕ್ತಿತ್ವಕ್ಕೆ ಬಾಧಕವೇ..?- ಸುಪ್ರೀಂ ಮಹತ್ವದ ತೀರ್ಪು
ಅವಿವಾಹಿತ ವಯಸ್ಕರ ಒಪ್ಪಿತ ದೈಹಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧವನ್ನೇ ಕಾರಣ ಮಾಡಿ ಪೊಲೀಸ್ ಕಾನ್ಸ್‌ಟೆಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ಆಯ್ಕೆ ರದ್ದು ಮಾಡಿದ ಘಟನೆಗೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ಅವಿವಾಹಿತ ವಯಸ್ಕರ ನಡುವಿನ ಒಪ್ಪಿತ ದೈಹಿಕ ಸಂಬಂಧವು ವ್ಯಕ್ತಿಯ ಚಾರಿತ್ರ್ಯ ಬಗ್ಗೆ ವ್ಯತಿರಿಕ್ತ ಪ್ರಭಾವ ಬೀರಲು ಕಾರಣವಾಗುವುದಿಲ್ಲ'' ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತೆಲಂಗಾಣ ಪೊಲೀಸ್ ಕಾನ್ಸ್‌ಟೆಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿವಾಹಪೂರ್ವ ದೈಹಿಕ ಸಂಬಂಧ ವ್ಯಕ್ತಿತ್ವಕ್ಕೆ ಅಬಾಧಿತ ಎಂದು ಸ್ಪಷ್ಟಪಡಿಸಿದೆ.
2014 ರಲ್ಲಿ ತೆಲಂಗಾಣ ರಾಜ್ಯಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯು ಕ್ರಿಮಿನಲ್ ಪ್ರಕರಣವೊಂದರಲ್ಲಿ 'ಸ್ಟೆಪೆಂಡಿಯರಿ ಕೆಡೆಟ್ ಟ್ರೈನಿ ಪೊಲೀಸ್ ಕಾನ್ಸ್ ಟೇಬಲ್' ಆಗಿ ತಾತ್ಕಾಲಿಕ ಆಯ್ಕೆಯನ್ನು ರದ್ದುಗೊಳಿಸಿತ್ತು.
ಅಭ್ಯರ್ಥಿಯು ಪರಿಚಿತ ಮಹಿಳೆಯೊಂದಿಗೆ ಮದುವೆಯ ಸುಳ್ಳು ಭರವಸೆಯ ಮೇಲೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದಿಂದ ಈ ಪ್ರಕರಣ ಹುಟ್ಟಿಕೊಂಡಿದೆ. ನಂತರ 'ಈ ವಿಷಯವನ್ನು 2015 ರಲ್ಲಿ ಲೋಕ ಅದಾಲತ್ ಮುಂದೆ ಇತ್ಯರ್ಥಪಡಿಸಲಾಯಿತು.