-->
'ಸಂಧ್ಯಾಕಿರಣ': ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಆಶಾಕಿರಣ

'ಸಂಧ್ಯಾಕಿರಣ': ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಆಶಾಕಿರಣ

'ಸಂಧ್ಯಾಕಿರಣ': ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಆಶಾಕಿರಣ





60 ವರ್ಷದಿಂದ 70 ವರ್ಷದೊಳಗಿನ ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸೇವೆ ಒದಗಿಸಲು 'ಸಂಧ್ಯಾಕಿರಣ' ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.


ಇದಕ್ಕೆ ಅವರು ತಮ್ಮ ಪಿಂಚಣಿಯ ಶೇ 1.25 ರಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.


'ನಿವೃತ್ತ ಸರ್ಕಾರಿ ನೌಕರರು 70 ವರ್ಷಗಳ ಒಳಗೆ ಮೃತಪಟ್ಟರೆ, ಅವರ ಕುಟುಂಬದವರಿಗೆ ಸಿಗುವ ಪಿಂಚಣಿಯ ಮೊತ್ತದ ಶೇ 0.75ರಷ್ಟು ಮೊತ್ತವನ್ನು ಪಾವತಿಸಿ ಈ ಸೌಕರ್ಯ ಪಡೆಯಬಹುದು ಈ ಯೋಜನೆಗೆ ವಾರ್ಷಿಕ ₹ 40 ಕೋಟಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ' ಎಂದು ಖಾದರ್ ಹೇಳಿದರು.


70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಜಾರಿಗೆ ತಂದಿರುವ 'ವಯೋ ವಂದನ' ಯೋಜನೆಯಲ್ಲಿ ಸ್ಪಷ್ಟತೆ ಇಲ್ಲ. ಎಲ್ಲ ಎಪಿಎಲ್ ಕುಟುಂಬಗಳು ಈ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಖಾದರ್ ವಿವರಿಸಿದರು.


ಈ ಯೋಜನೆಗೆ ಕೆಲವೊಂದು ಮಾರ್ಪಾಡು ಮಾಡಿದರೆ ಸದ್ರಿ ಯೋಜನೆಯಡಿ ಚಿಕಿತ್ಸೆ ಒದಗಿಸಲು ಖಾಸಗಿ ಆಸ್ಪತ್ರೆಗಳು ಸಿದ್ದ ಇವೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದೇನೆ' ಎಂದು ಅವರು ಹೇಳಿದರು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu