ಜಡ್ಜ್ ಆಯ್ಕೆಗೆ ವಕೀಲಿಕೆ ಅರ್ಹತೆ: ಸಿವಿಲ್ ನ್ಯಾಯಾಧೀಶರ ನೇಮಕಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು
Saturday, August 22, 2026
ಜಡ್ಜ್ ಆಯ್ಕೆಗೆ ವಕೀಲಿಕೆ ಅರ್ಹತೆ: ಸಿವಿಲ್ ನ್ಯಾಯಾಧೀಶರ ನೇಮಕಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು
31 ಮಾರ್ಚ್ 2027ರವರೆಗೆ — ವಕೀಲರಾಗಿ ಕಾನೂನು ವೃತ್ತಿಯ ಅನುಭವ (Law Practice) ಕಡ್ಡಾಯವಲ್ಲ.
1 ಏಪ್ರಿಲ್ 2027ರಿಂದ — ವಕೀಲರಾಗಿ ಒಂದು ವರ್ಷದ ಕಾನೂನು ವೃತ್ತಿಯ ಅನುಭವ ಕಡ್ಡಾಯವಾಗಿರುತ್ತದೆ.
ಎರಡೂ ವರ್ಗಗಳ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ರಾಜ್ಯ ನ್ಯಾಯಾಂಗ ಅಕಾಡೆಮಿಯಲ್ಲಿ ಒಂದು ವರ್ಷದ ತರಬೇತಿ ಪಡೆಯಬೇಕು.
ಅದರ ನಂತರ ಜಿಲ್ಲಾ ನ್ಯಾಯಾಧೀಶರೊಂದಿಗೆ 6 ತಿಂಗಳ ಕ್ಲರ್ಕ್‌ಶಿಪ್ ಹಾಗೂ ಹೈಕೋರ್ಟ್ ನ್ಯಾಯಾಧೀಶರೊಂದಿಗೆ 6 ತಿಂಗಳ ಕ್ಲರ್ಕ್‌ಶಿಪ್ ಮಾಡಬೇಕು.
ಬಳಿಕ ಹೈಕೋರ್ಟ್ ನ್ಯಾಯಾಧೀಶರು ಮೌಲ್ಯಮಾಪನ ವರದಿಯನ್ನು ಸಲ್ಲಿಸುತ್ತಾರೆ.
ಮೌಲ್ಯಮಾಪನ ವರದಿ ತೃಪ್ತಿಕರವಾಗಿದ್ದಲ್ಲಿ, ಅಭ್ಯರ್ಥಿಯನ್ನು ನಿಯಮಿತ ನ್ಯಾಯಾಧೀಶರಾಗಿ ನೇಮಕ ಮಾಡಲಾಗುತ್ತದೆ.
ತರಬೇತಿ ಮತ್ತು ಕ್ಲರ್ಕ್‌ಶಿಪ್ ಅವಧಿಯಲ್ಲಿಯೂ ಅಭ್ಯರ್ಥಿಗಳಿಗೆ ವೇತನ/ಭತ್ಯೆ (Emoluments) ನೀಡಲಾಗುತ್ತದೆ.