-->
ಖಾಸಗಿ ಆವರಣದಲ್ಲಿದ್ದರೂ ಮರ ಕಡಿಯದ ಬಿಬಿಎಂಪಿ: ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಗೆ ₹2.82 ಕೋಟಿ ಪರಿಹಾರ- ಹೈಕೋರ್ಟ್ ಆದೇಶ

ಖಾಸಗಿ ಆವರಣದಲ್ಲಿದ್ದರೂ ಮರ ಕಡಿಯದ ಬಿಬಿಎಂಪಿ: ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಗೆ ₹2.82 ಕೋಟಿ ಪರಿಹಾರ- ಹೈಕೋರ್ಟ್ ಆದೇಶ

ಖಾಸಗಿ ಆವರಣದಲ್ಲಿದ್ದರೂ ಮರ ಕಡಿಯದ ಬಿಬಿಎಂಪಿ: ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಗೆ ₹2.82 ಕೋಟಿ ಪರಿಹಾರ- ಹೈಕೋರ್ಟ್ ಆದೇಶ





ನಿರ್ದಿಷ್ಟ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ನ್ಯಾಯಾಲಯದ ಅಭಿಪ್ರಾಯ


2024ರಲ್ಲಿ ಗುಲ್‌ಮೊಹರ್ ಮರದ ಕೊಂಬೆ ಬಿದ್ದು, ಎರಡೂ ಕೈ-ಕಾಲುಗಳನ್ನು ಚಲಿಸಲು ಸಾಧ್ಯವಾಗದ ರೀತಿಯಲ್ಲಿ ಪಾರ್ಶ್ವವಾಯುವಿಗೆ (Paraplegia) ಒಳಗಾದ ಬೆಂಗಳೂರಿನ ನಿವಾಸಿಗೆ ಕರ್ನಾಟಕ ಹೈಕೋರ್ಟ್ ₹2.82 ಕೋಟಿ ಪರಿಹಾರವನ್ನು ಮಂಜೂರು ಮಾಡಿದೆ.


ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಸಾರ್ವಜನಿಕ ಕಾನೂನು ಪರಿಹಾರದ ಅಧಿಕಾರವನ್ನು (Public Law Remedy) ಅನ್ವಯಿಸಿ ಈ ಆದೇಶ ನೀಡಿದ್ದಾರೆ. ಅನಿರೀಕ್ಷಿತ ಅಪಘಾತ ಮತ್ತು ಅಪಾಯದ ಬಗ್ಗೆ ಮುಂಚಿತವಾಗಿಯೇ ತಿಳಿದಿದ್ದರೂ ಅದನ್ನು ಪರಿಹರಿಸದೆ ಬಿಟ್ಟಿರುವ ಸ್ಥಿತಿ—ಇವೆರಡರ ನಡುವೆ ಮಹತ್ವದ ವ್ಯತ್ಯಾಸವಿದೆ ಎಂದು ನ್ಯಾಯಾಲಯವು ಗಮನಿಸಿದೆ.


ನಾಗರಭಾವಿಯ ನಿವಾಸಿ ಜಿ. ಚಂದನ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2024ರ ಮಾರ್ಚ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ, ಬೆಂಗಳೂರಿನ ಕಾನ್ವೆಂಟ್ ರಸ್ತೆಯಲ್ಲಿರುವ ಗುಡ್ ಶೆಫರ್ಡ್ ಕಾನ್ವೆಂಟ್‌ನ ಆವರಣದಲ್ಲಿದ್ದ ಮರದ ಕೊಂಬೆಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರ ಕುತ್ತಿಗೆಯ ಮೇಲೆ ಬಿದ್ದಿತ್ತು.


ಆರಂಭದಲ್ಲಿ ₹5 ಕೋಟಿ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್, ಬಿಬಿಎಂಪಿ (ಈಗಿನ GBA) ಆಯುಕ್ತರು ಹಾಗೂ ಬಿಬಿಎಂಪಿಯ ಅರಣ್ಯ ಘಟಕದ DCF, ಒಟ್ಟು ₹2.77 ಕೋಟಿ ಪರಿಹಾರವನ್ನು ಪಾವತಿಸುವಂತೆ ನಿರ್ದೇಶಿಸಿದೆ. ಈಗಾಗಲೇ ನಾಗರಿಕ ಸಂಸ್ಥೆಯು ಪಾವತಿಸಿರುವ ₹5 ಲಕ್ಷವನ್ನು ಇದರಲ್ಲಿ ಸರಿಹೊಂದಿಸಲಾಗಿದೆ. ಈ ಮೊತ್ತವನ್ನು 12 ವಾರಗಳೊಳಗೆ ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.


ಅರ್ಜಿದಾರರ ಪರವಾಗಿ ವಾದಿಸುವಾಗ, ಘಟನೆ ನಡೆದ ದಿನ ಅವರಿಗೆ 39 ವರ್ಷ ವಯಸ್ಸಾಗಿತ್ತು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ₹26.82 ಲಕ್ಷ ವೆಚ್ಚವಾಗಿದೆ ಎಂದು ತಿಳಿಸಲಾಯಿತು.


100% ಕಾರ್ಯಾತ್ಮಕ ಅಂಗವೈಕಲ್ಯ

ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ನೀಡಿದ ಅಂಗವೈಕಲ್ಯ ಪ್ರಮಾಣಪತ್ರದಲ್ಲಿ ಅವರ ಅಂಗವೈಕಲ್ಯವನ್ನು 85% ಎಂದು ನಿರ್ಧರಿಸಲಾಗಿತ್ತು. ಆದರೆ ಅರ್ಜಿದಾರರ ಕಾರ್ಯಾತ್ಮಕ ಅಂಗವೈಕಲ್ಯವನ್ನು 85% ಎಂದು ನಿರ್ಧರಿಸಲಾಗಿತ್ತು. ಆದರೆ ಅರ್ಜಿದಾರರ ಕಾರ್ಯಾತ್ಮಕ ಅಂಗವೈಕಲ್ಯ (Functional Disability) ಶೇ.100ರಷ್ಟಿದೆ ಎಂಬ ಅವರ ವಾದವನ್ನು ಹೈಕೋರ್ಟ್ ಅಂಗೀಕರಿಸಿತು.


ಬಿಬಿಎಂಪಿ ₹5 ಲಕ್ಷ ಪಾವತಿಸಿದ್ದರೆ, ಶಾಲಾ ಆಡಳಿತ ಮಂಡಳಿಯು ₹3 ಲಕ್ಷ ಪಾವತಿಸಿತ್ತು. ಅಲ್ಲದೆ, ಅರ್ಜಿದಾರರ ಮಗಳು 12ನೇ ತರಗತಿ ಪೂರ್ಣಗೊಳಿಸುವವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಹಿಂದೆ ನೀಡಿದ್ದ ಭರವಸೆಯನ್ನು ಮುಂದುವರಿಸುವುದಾಗಿ ಶಾಲಾ ಆಡಳಿತ ತಿಳಿಸಿತ್ತು.


*ಮರ ಖಾಸಗಿ ಆವರಣದಲ್ಲಿದ್ದರೂ ಬಿಬಿಎಂಪಿಗೆ ಕರ್ತವ್ಯವಿತ್ತು*


ಘಟನೆ ಸಂಭವಿಸುವ 14 ದಿನಗಳ ಮುನ್ನ, ಅಂದರೆ 2024ರ ಫೆಬ್ರವರಿ 22ರಂದು, ಅಪಾಯಕಾರಿ ಕೊಂಬೆಯನ್ನು ಕತ್ತರಿಸಲು (pruning) ಅನುಮತಿ ಕೋರಿ ಬಿಬಿಎಂಪಿಗೆ ಪತ್ರ ಬರೆದಿದ್ದಾಗಿ ಶಾಲಾ ಆಡಳಿತವು ನ್ಯಾಯಾಲಯಕ್ಕೆ ತಿಳಿಸಿತು.

ಮರವು ಖಾಸಗಿ ಜಾಗದಲ್ಲಿದ್ದರೂ, ಅದರ ಸುರಕ್ಷತೆಗೆ ಸಂಬಂಧಿಸಿದಂತೆ ಬಿಬಿಎಂಪಿಗೆ ಕಾನೂನುಬದ್ಧ ಹಾಗೂ ಸಾರ್ವಜನಿಕ ಕರ್ತವ್ಯವಿತ್ತು ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.


ಈ ಘಟನೆ ಪ್ರಕೃತಿಯ ಅನಿರೀಕ್ಷಿತ ಘಟನೆ ಅಥವಾ ‘Act of God’ ಎಂದು ಪರಿಗಣಿಸಿ ತನ್ನ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳಲು ಅಥವಾ ಕಡಿಮೆ ಮಾಡಲು ಬಿಬಿಎಂಪಿ ಮುಂದಿಟ್ಟ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.


ನಿರ್ದಿಷ್ಟ ಅಪಾಯದ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ, ಅದನ್ನು ಕೇವಲ ಅನಿರೀಕ್ಷಿತ ಪ್ರಕೃತಿ ಘಟನೆ ಎಂದು ಹೇಳಿ ನಾಗರಿಕ ಸಂಸ್ಥೆ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu