-->
ಡಿಸ್ಟ್ರಿಕ್‌ ಜಡ್ಜ್‌ ಕಾರು ಅಪಘಾತ ಪ್ರಕರಣ; ಗಾಯಾಳು ಚೇತರಿಕೆ

ಡಿಸ್ಟ್ರಿಕ್‌ ಜಡ್ಜ್‌ ಕಾರು ಅಪಘಾತ ಪ್ರಕರಣ; ಗಾಯಾಳು ಚೇತರಿಕೆ

ಡಿಸ್ಟ್ರಿಕ್‌ ಜಡ್ಜ್‌ ಕಾರು ಅಪಘಾತ ಪ್ರಕರಣ; ಗಾಯಾಳು ಚೇತರಿಕೆ





ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಬಳಿ ನಡೆದ ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಘಟನೆಯಲ್ಲಿ ಆಟೋ ಚಾಲಕ ಮೃತಪಟ್ಟಿದ್ದು, ನ್ಯಾಯಾಧೀಶರು ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.


ಜಿಲ್ಲಾ ನ್ಯಾಯಾಧೀಶರು ತಮ್ಮ ವಾಹನದಲ್ಲಿ ಕರ್ತವ್ಯಕ್ಕಾಗಿ ಬೆಳಿಗ್ಗೆ ನ್ಯಾಯಾಲಯ ಸಂಕೀರ್ಣಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.


ಘಟನೆಯ ವಿವರ

ಸೆಪ್ಟೆಂಬರ್ 29 ರಂದು ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಬಳಿ ಕಾರ್ಗೋ ಆಟೋರಿಕ್ಷಾ, ನ್ಯಾಯಾಧೀಶರ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರು ಮತ್ತು ದ.ಕ. ಜಿಲ್ಲಾ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿನಯ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.


ಮಂಗಳೂರು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ಶ್ರೀ ವಿನಯ್ ಅವರು ಹ್ಯಾಟ್ ಹಿಲ್‌ನಲ್ಲಿರುವ ತಮ್ಮ ಅಧಿಕೃತ ನಾಮಾಂಕಿತ ವಸತಿ ನಿವಾಸದಿಂದ ನ್ಯಾಯಾಲಯದ ಕಡೆಗೆ ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದಾರೆ.


ಬೆಳಿಗ್ಗೆ 10 ಗಂಟೆ ಸುಮಾರಿಗೆ ರಾಧಾ ಮೆಡಿಕಲ್ಸ್ ಅಂಗಡಿಯಿಂದ ನ್ಯಾಯಾಲಯದ ಕಟ್ಟಡಕ್ಕೆ ಹೋಗುವ ರಸ್ತೆಗೆ ಬರುತ್ತಿದ್ದಾಗ, ಸರಕು ಸಾಗಣೆ ಆಟೋರಿಕ್ಷಾ ನ್ಯಾಯಾಲಯದ ರಸ್ತೆಯಲ್ಲಿ ಬರುತ್ತಿತ್ತು. ಅದು ಬಲಕ್ಕೆ ತಿರುಗಿ ಶ್ರೀ ವಿನಯ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆಟೋರಿಕ್ಷಾ ಪಲ್ಟಿಯಾಗಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.


ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾದ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.


ಕೋರ್ಟ್‌ ರಸ್ತೆಯಿಂದ ಬರುತ್ತಿದ್ದ ಗೂಡ್ಸ್ ಆಟೋ ರಿಕ್ಷಾ ನೇರವಾಗಿ ಬಂದು ಕರಂಗಲ್ಪಾಡಿ ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ತಿರುವು ಪಡೆಯುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಕಾರನ್ನು ಸ್ವತಃ ನ್ಯಾಯಾಧೀಶ ವಿನಯ್ ಅವರು ಚಲಾಯಿಸುತ್ತಿದ್ದರು.


ಆಟೋ ಗೂಡ್ಸ್ ಕಾರಿಗೆ ಡಿಕ್ಕಿಯಾಗಿ ಪಲ್ಟಿಯಾಗಿ ಬಿದ್ದಿದೆ. ಅದರ ಚಾಲಕ ಚಂದ್ರ ಕೆ. (69) ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಬಳಿಕ 12 ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನ್ಯಾಯಾಧೀಶ ವಿನಯ್ ಅವರಿಗೂ ಕೈಗೆ ಗಾಯವಾಗಿದೆ. ಗೂಡ್ಸ್ ಆಟೋ ಪಲ್ಟಿಯಾದ ವೇಳೆ ಅಲ್ಲಿಯೇ ಇದ್ದ ಸ್ಕೂಟರಿಗೆ ತಾಗಿದ್ದು ಅದರ ಸವಾರ ಪ್ಲೇವಿಯರ್ (51) ರಸ್ತೆಗೆ ಬಿದ್ದು ಅವರಿಗೂ ಗಾಯವಾಗಿದೆ.


ನ್ಯಾಯಾಧೀಶ ವಿನಯ್ ಅವರ ದೂರಿನಂತೆ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರ ಅವರು ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಕಲ್ಪನಾ ಸ್ವೀಟ್ಸ್ ಶಾಪ್ ಗೆ ಸೇರಿದ ಗೂಡ್ಸ್ ಆಟೋದಲ್ಲಿ ಚಾಲಕರಾಗಿದ್ದರು. ಅಪಘಾತ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆಟೋ ನೇರವಾಗಿ ಬಂದು ಕಾರಿಗೆ ಡಿಕ್ಕಿಯಾಗಿದ್ದು ಕಂಡುಬಂದಿದೆ. ಹೀಗಾಗಿ ಆಟೋ ಚಾಲಕ ಕಣ್ಣು ಮಂಜಾಗಿ ಅಥವಾ ಏನಾದ್ರೂ ಸಮಸ್ಯೆ ಉಂಟಾಗಿ ಕಾರಿಗೆ ಡಿಕ್ಕಿಯಾಗಿರುವ ಸಾಧ್ಯತೆಯಿದೆ. ಸ್ವಲ್ಪನಾದ್ರೂ ಬ್ರೇಕ್ ಹಾಕುತ್ತಿದ್ದರೆ ಆಟೋ ಮುಂಭಾಗ ಅಪ್ಪಚ್ಚಿ ಆಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu