-->
All are equal in the eye of justice- ಕಾನೂನು ಎಲ್ಲರಿಗೂ ಸಮಾನ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

All are equal in the eye of justice- ಕಾನೂನು ಎಲ್ಲರಿಗೂ ಸಮಾನ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಶ್ರೀಮಂತರು, ಸಂಪದ್ಭರಿತರು ಮತ್ತು ರಾಜಕೀಯವಾಗಿ ಪ್ರಬಲರು ಮತ್ತು ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಕಾನೂನು ಇಲ್ಲ. ಭಾರತದಲ್ಲಿ ಶ್ರೀಮಂತರಿಗೂ ಬಡವರಿಗೂ ಕಾನೂನು ಏಕಪ್ರಕಾರವಾಗಿದೆ, ಸಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಕಾಂಗ್ರೆಸ್ ನಾಯಕ ದೇವೇಂದ್ರ ಚೌರಾಸಿಯಾ ಹತ್ಯೆ ಪ್ರಕರಣದ ಆರೋಪಿ ಮಧ್ಯಪ್ರದೇಶ ಬಿಎಸ್‌ಪಿ ಶಾಸಕರ ಪತಿಗೆ ನೀಡಲಾಗಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯವನ್ನು ಪ್ರಕಟಿಸಿದೆ.


ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಎಂ. ಆರ್. ಷಾ ಈ ಮಹತ್ವದ ತೀರ್ಪು ನೀಡಿರುವ ನ್ಯಾಯಮೂರ್ತಿಗಳು.


ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯಾಂಗವು ಪ್ರಜಾಪ್ರಭುತ್ವದ ಮೂಲ ಆಧಾರ. ಅದು ರಾಜಕೀಯ ಒತ್ತಡ ಮತ್ತು ಬಾಹ್ಯ ಪರಿಗಣನೆ ಯಾ ಆಮಿಷಗಳಿಂದ ಮುಕ್ತವಾಗಿರಬೇಕು ಎಂದು ತೀರ್ಪು ಹೇಳಿದೆ.


ಇದೇ ವೇಳೆ, ಜಿಲ್ಲಾ ಮಟ್ಟದಲ್ಲಿ ನ್ಯಾಯಾಂಗದ ಮೇಲೆ ವಸಾಹತುಶಾಹಿ ಮನೋಸ್ಥಿತಿಯನ್ನು ಹೇರಲಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದ್ದರೆ ಈ ಮನೋಸ್ಥಿತಿ ಬದಲಾಗಬೇಕು ಎಂದು ನ್ಯಾಯಪೀಠ ಹೇಳಿದೆ.

Ads on article

Advertise in articles 1

advertising articles 2

Advertise under the article