Passport impunding- Ktk HC- ಪೊಲೀಸ್ ಅಥವಾ ಕೋರ್ಟ್‌ಗೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕುವ ಅಧಿಕಾರವಿಲ್ಲ - ಹೈಕೋರ್ಟ್ ಮಹತ್ವದ ತೀರ್ಪು
ಪೊಲೀಸ್ ಅಥವಾ ಕೋರ್ಟ್‌ಗೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕುವ ಅಧಿಕಾರವಿಲ್ಲ - ಹೈಕೋರ್ಟ್ ಮಹತ್ವದ ತೀರ್ಪು
ಪಾಸ್‌ಪೋರ್ಟ್ ಸಕ್ಷಮ ಪ್ರಾಧಿಕಾರ ಹೊರತುಪಡಿಸಿ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಪೊಲೀಸರು, ಕೋರ್ಟ್ ಸೇರಿದಂತೆ ಯಾರಿಗೂ ಇಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದ ಪೊಲೀಸರು ವಶಪಡಿಸಿದ್ದ ಪಾಸ್‌ಪೋರ್ಟ್ ವಿಚಾರದಲ್ಲಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣ: ಪ್ರವೀಣ್ ಸುರೇಂದಿರನ್ Vs ಕರ್ನಾಟಕ ಸರ್ಕಾರ
Criminal Petition: 1892/2022
ಕರ್ನಾಟಕ ಹೈಕೋರ್ಟ್ Dated- 21-03-20222
ಯಾವುದೇ ನ್ಯಾಯಾಲಯಕ್ಕೆ ದಾಖಲೆಯನ್ನು ವಶಪಡಿಸಿಕೊಳ್ಳುವ ಅಧಿಕಾರ ಇದೆ. ಅದು ಸಿಆರ್ ಪಿಸಿ(CrPC)ಯ ಕಲಂ 104 ಅಡಿಯಲ್ಲಿ ನ್ಯಾಯಾಲಯಕ್ಕೆ ಇರುವ ಪ್ರದತ್ತ ಅಧಿಕಾರವಾಗಿರುತ್ತದೆ. ಆದರೆ, ಪಾಸ್‌ಪೋರ್ಟ್‌ನ್ನು ವಶದಲ್ಲಿಟ್ಟುಕೊಳ್ಳುವ ಅಧಿಕಾರ ಇರುವುದಿಲ್ಲ. ಅದನ್ನು ವಿಶೇಷ ಕಾಯ್ದೆ ಸೆಕ್ಷನ್ 10ರ ಪ್ರಕಾರ ಪಾಸ್‌ಪೋರ್ಟ್ ಸಕ್ಷಮ ಪ್ರಾಧಿಕಾರ ಮಾತ್ರ ಮಾಡಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಅದೇ ರೀತಿ, ಸಿಆರ್ ಪಿಸಿ(CrPC)ಯ ಕಲಂ 102ರ ಅಡಿಯಲ್ಲಿ ಪೊಲೀಸರಿಗೆ ಯಾವುದೇ ದಾಖಲೆಗಳನ್ನು ವಶಪಡಿಸಿಕೊಳ್ಳಲು ಪ್ರದತ್ತ ಅಧಿಕಾರ ಇರುತ್ತದೆ. ಪಾಸ್‌ಪೋರ್ಟನ್ನೂ ಅಗತ್ಯಕ್ಕೆ ಅನುಗುಣವಾಗಿ ವಶಪಡಿಸಿಕೊಳ್ಳಬಹುದು. ಆದರೆ, ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಹೊತ್ತು ಅದನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ ಎಂದು ನ್ಯಾಯಪೀಠ ಸಮಜಾಯಿಷಿ ನೀಡಿದೆ.
ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10ರ ಅಡಿಯಲ್ಲಿ ಪಾಸ್ ಪೋರ್ಟ್ ವಶಪಡಿಸಿಕೊಳ್ಳೋದಕ್ಕೆ, ಬದಲಾವಣೆ ಮಾಡೋದಕ್ಕೆ ಅಥವಾ ಹಿಂಪಡೆಯುವ ಅಧಿಕಾರಿ, ಪಾಸ್ ಪೋರ್ಟ್ ಸಕ್ಷಮ ಪ್ರಾಧಿಕಾರಕ್ಕೆ ಮಾತ್ರವೇ ಇದೆ. ಅದರ ಹೊರತಾಗಿ ಪೊಲೀಸ್, ಕೋರ್ಟ್ ಗೆ ಇಲ್ಲ ಎಂಬುದಾಗಿ ತೀರ್ಪು ನೀಡಿದೆ.
Passport Act, 1967 ವಿಶೇಷ ಶಾಸನವಾಗಿದ್ದು, ಆ ನಿಯಮಗಳ ಮೇಲೆ CrPC ನಿಯಮಗಳನ್ನು ಬಳಸಲಾಗದು ಎಂದು ಹೈಕೋರ್ಟ್ ಹೇಳಿದೆ. ಪೊಲೀಸರು ಜಪ್ತಿ ಮಾಡಿದ ಪಾಸ್ ಪೋರ್ಟ್ ಅನ್ನು ಅರ್ಜಿದಾರರಿಗೆ ಹಿಂದಿರುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಅಲ್ಲದೇ ಅರ್ಜಿದಾರರು ಪ್ರಕರಣದ ವಿಚಾರಣೆ ಇತ್ಯರ್ಥದವರೆಗೆ ದೇಶಬಿಟ್ಟು ಹೋಗದಂತೆ ಸೂಚಿಸಿದೆ.