-->
Madras HC on encroachment of public place- ಸಾರ್ವಜನಿಕ ಸ್ಥಳವನ್ನು ದೇವರೇ ಒತ್ತುವರಿ ಮಾಡಿದ್ದರೂ ಅದರ ತೆರವಿಗೆ ಕೋರ್ಟ್ ನಿರ್ದೇಶನ: ಮದ್ರಾಸ್‌ ಹೈಕೋರ್ಟ್‌

Madras HC on encroachment of public place- ಸಾರ್ವಜನಿಕ ಸ್ಥಳವನ್ನು ದೇವರೇ ಒತ್ತುವರಿ ಮಾಡಿದ್ದರೂ ಅದರ ತೆರವಿಗೆ ಕೋರ್ಟ್ ನಿರ್ದೇಶನ: ಮದ್ರಾಸ್‌ ಹೈಕೋರ್ಟ್‌

ಸಾರ್ವಜನಿಕ ಸ್ಥಳವನ್ನು ದೇವರೇ ಒತ್ತುವರಿ ಮಾಡಿದ್ದರೂ ಅದರ ತೆರವಿಗೆ ಕೋರ್ಟ್ ನಿರ್ದೇಶನ: ಮದ್ರಾಸ್‌ ಹೈಕೋರ್ಟ್‌






ದೇವರ, ಆರಾಧನೆಯ ಹೆಸರಿನಲ್ಲಿ ಸಾರ್ವಜನಿಕ ಪ್ರದೇಶವನ್ನು, ಸರ್ಕಾರಿ ಜಮೀನನ್ನು ಒತ್ತುವರಿ ಮಾಡುತ್ತಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.


"ನಮ್ಮಲ್ಲಿ ಸಾಕಷ್ಟು ದೇವಸ್ಥಾನಗಳು ಈಗಾಗಲೇ ಇವೆ. ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡಿಕೊಂಡು ನೂತನ ದೇವಾಲಯ ಕಟ್ಟುವಂತೆ, ಅಥವಾ ದೇವರ ಹೆಸರಿನಲ್ಲಿ ಕಟ್ಟಡ ನಿರ್ಮಿಸುವಂತೆ ಯಾವುದೇ ದೇವರು ಮನವಿ ಮಾಡಿಲ್ಲ" ಎಂದು ಪೀಠವು ಹೇಳಿತು.



ಹಾಗಾಗಿ, ದೇವರ ಆರಾಧನೆಯ ಹೆಸರಿನಲ್ಲಿ ಸಾರ್ವಜನಿಕ ರಸ್ತೆ ಯಾ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸುತ್ತಿರುವುದಕ್ಕೆ ಮದ್ರಾಸ್ ಹೈಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.



ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನನ್ನು ಎತ್ತಿ ಹಿಡಿಯಲು ಅಗತ್ಯ ಬಿದ್ದರೆ, ಸಾರ್ವಜನಿಕ ಸ್ಥಳವನ್ನು ದೇವರೇ ಒತ್ತುವರಿ ಮಾಡಿದರೂ ಅದನ್ನು ತೆರವು ಮಾಡಲು ನ್ಯಾಯಾಲಯ ನಿರ್ದೇಶಿಸಲಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.



ಸಾರ್ವಜನಿಕ ಸ್ಥಳದಲ್ಲಿ ದೇವಾಲಯ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೇವಸ್ಥಾನದ ಆಡಳಿತ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾ ಮಾಡಿರುವ ನ್ಯಾ. ಎನ್‌ ಆನಂದ್‌ ವೆಂಕಟೇಶ್‌ ಸಾರ್ವಜನಿಕ ಸ್ಥಳವನ್ನು ಅಕ್ರಮವಾಗಿ ಯಾರೇ ಒತ್ತುವರಿ ಮಾಡಿಕೊಂಡರೂ ಅದನ್ನು ತಡೆಯಲಾಗುವುದು ಎಂದರು.



ಆರಾಧನಾ ಕೇಂದ್ರಗಳ ಹೆಸರಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದನ್ನು ಒತ್ತುವರಿ ಮಾಡುವ ತಂತ್ರವನ್ನು ಕೆಲವರು ಹಿಂದೆ ಅನುಸರಿಸುತ್ತಿದ್ದರು ಎಂದು ಎಂಬುದನ್ನು ಹೈಕೋರ್ಟ್ ಗಮನಿಸಿತು.


"ಯಾರೆಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳು ಯಾವುದರ ಹೆಸರಿನಲ್ಲಿ ಒತ್ತುವರಿ ಮಾಡಿದ್ದಾರೆ ಎಂಬುದರ ಬಗ್ಗೆ ನ್ಯಾಯಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಸಾರ್ವಜನಿಕ ಸ್ಥಳವನ್ನು ದೇವರೇ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವು ಮಾಡುವಂತೆ ನ್ಯಾಯಾಲಯಗಳೂ ನಿರ್ದೇಶಿಸುವ ಹಂತವನ್ನು ನಾವು ತಲುಪಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಪಾಲನೆಯನ್ನು ಎತ್ತಿಹಿಡಿಯುವ, ರಕ್ಷಿಸುವ ಕೆಲಸವನ್ನು ನ್ಯಾಯಾಲಯ ಮಾಡಲಿದೆ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

Ads on article

Advertise in articles 1

advertising articles 2

Advertise under the article