-->
ED Director term extension questioned- ಜಾರಿ ನಿರ್ದೇಶನಾಧಿಕಾರಿಯ ಅವಧಿ ವಿಸ್ತರಣೆ: ಕೇಂದ್ರ ನಿರ್ಧಾರ ಸುಪ್ರೀಂ ಅಂಗಣದಲ್ಲಿ ಪ್ರಶ್ನಿಸಿದ ಟಿಎಂಸಿ ವಕ್ತಾರ

ED Director term extension questioned- ಜಾರಿ ನಿರ್ದೇಶನಾಧಿಕಾರಿಯ ಅವಧಿ ವಿಸ್ತರಣೆ: ಕೇಂದ್ರ ನಿರ್ಧಾರ ಸುಪ್ರೀಂ ಅಂಗಣದಲ್ಲಿ ಪ್ರಶ್ನಿಸಿದ ಟಿಎಂಸಿ ವಕ್ತಾರ

ಜಾರಿ ನಿರ್ದೇಶನಾಧಿಕಾರಿಯ ಅಧಿಕಾರಾವಧಿ ವಿಸ್ತರಣೆ: ಕೇಂದ್ರ ನಿರ್ಧಾರ ಸುಪ್ರೀಂ ಅಂಗಣದಲ್ಲಿ ಪ್ರಶ್ನಿಸಿದ ಟಿಎಂಸಿ ವಕ್ತಾರಜ್ಯಾರಿ ನಿರ್ದೇಶನಾಲಯ (ED) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅಧಿಕಾರಾವಧಿ ವಿಸ್ತರಣೆ ಈಗ ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರದ ಈ ವಿವಾದಾತ್ಮಕ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್‌ನ ವಕ್ತಾರ ಸಾಕೇತ್ ಗೋಖಲೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.


ಪ್ರಕರಣ: ಸಾಕೇತ್‌ ಗೋಖಲೆ Vs ಭಾರತ ಸರ್ಕಾರಕೇಂದ್ರ ವಿಚಕ್ಷಣಾ ಆಯೋಗದ ಕಾಯ್ದೆ ಸೆಕ್ಷನ್ 25 ಪ್ರಕಾರ ಈ ಅಧಿಕಾರಾವಧಿ ವಿಸ್ತರಣೆ ಅಸಿಂಧು. ಜಾರಿ ನಿರ್ದೇಶನಾಲಯದ ಪ್ರಸ್ತುತ ನಿರ್ದೇಶಕರ ಅವಧಿ ವಿಸ್ತರಣೆ ಮಾಡುವ ಹಾಕಿಲ್ಲ. ಇದು ಕಾಮನ್‌ ಕಾಸ್‌ Vs ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಸಂಪೂರ್ಣ ಉಲ್ಲಂಘನೆ ಎಂದು ಅರ್ಜಿದಾರ ಗೋಖಲೆ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ.ED ನಿರ್ದೇಶಕ ಮಿಶ್ರಾ 2018, 2019 ಮತ್ತು 2020ನೇ ಸಾಲಿನಲ್ಲಿ ತಮ್ಮ ವಾರ್ಷಿಕ ಆದಾಯ, ಆಸ್ತಿ ವಿವರವನ್ನೂ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇಂತಹ ಗಂಭೀರ ಲೋಪ ಇದ್ದರೂ ಅವರ ಅಧಿಕಾರವಧಿ ವಿಸ್ತರಣೆ ಮಾಡಿದ್ದು ಏಕೆ? ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.ಕಳೆದ ಸೆಪ್ಟೆಂಬರ್ 2021ರಲ್ಲಿ ಮಿಶ್ರಾ ಅವರ ಅಧಿಕಾರಾವಧಿಯನ್ನು 2 ವರ್ಷಗಳಿಂದ 3 ವರ್ಷಗಳಿಗೆ ಹೆಚ್ಚಿಸುವ ಮೂಲಕ ಅವರ ನೇಮಕಾತಿ ಆದೇಶಕ್ಕೆ ಪೂರ್ವಾನ್ವಯ ಬದಲಾವಣೆ ಮಾಡಲಾಗಿತ್ತು. ಮತ್ತು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.


Ads on article

Advertise in articles 1

advertising articles 2

Advertise under the article