-->
ADGP ಸೀಮಾಂತ್ ಕುಮಾರ್ ಬಗ್ಗೆ ಹೈಕೋರ್ಟ್ ಮತ್ತೆ ಗರಂ: ACBಯ ಕಳ್ಳಾಟ, ಬೇಜವಾಬ್ದಾರಿಗೆ ತರಾಟೆ

ADGP ಸೀಮಾಂತ್ ಕುಮಾರ್ ಬಗ್ಗೆ ಹೈಕೋರ್ಟ್ ಮತ್ತೆ ಗರಂ: ACBಯ ಕಳ್ಳಾಟ, ಬೇಜವಾಬ್ದಾರಿಗೆ ತರಾಟೆ

ADGP ಸೀಮಾಂತ್ ಕುಮಾರ್ ಬಗ್ಗೆ ಹೈಕೋರ್ಟ್ ಮತ್ತೆ ಗರಂ: ACBಯ ಕಳ್ಳಾಟ, ಬೇಜವಾಬ್ದಾರಿಗೆ ತರಾಟೆ






ಬೆಂಗಳೂರು ಡಿಸಿ ಮಂಜುನಾಥ್‌ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಹಾಗೂ ACB ADGP ಸೀಮಾಂತ್ ಕುಮಾರ್‌ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಕೆಂಡಾಮಂಡಲವಾದರು.



ADGP ಬಗ್ಗೆ ಅನಮಾನ ಬರಲೂ ಕಾರಣಗಳಿವೆ. ಮೊದಲು ಅವರು ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ ಎಂದು ADGP ವಕೀಲರಿಗೆ ಹೈಕೋರ್ಟ್ ಕಟು ಶಬ್ದಗಳಿಂದ ತಿವಿಯಿತು.



ಪ್ರಕರಣದ ವಿಚಾರಣೆ ನಡೆಸುವ ನ್ಯಾಯಪೀಠಕ್ಕೆ 'ಬಿ' ರಿಪೋರ್ಟ್ ಕುರಿತು ಸಮರ್ಪಕವಾದ ಮಾಹಿತಿ ನೀಡಿಲ್ಲ. ಜೊತೆಗೆ ಸಹಿ ಮಾಡದೆ ಬೇಜವಾಬ್ದಾರಿಯಾಗಿ ವರದಿ ಸಲ್ಲಿಸಿದ ACB ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿತು.



"ACB ವರದಿ ಸಂಪೂರ್ಣ ನಿಜವಲ್ಲ. ನೀವು ಈ ರೀತಿ ಆಟ ಆಡುತ್ತೀರಿ ಎಂದೇ ಈ ಬಗ್ಗೆ ಮಾಹಿತಿ ಪಡೆದಿರುವೆ. ಈ ವರ್ಷ ACB ಸಲ್ಲಿಸಿದ ಬಿ ರಿಪೋರ್ಟ್‌ಗಳ ವಿವರ ಇಲ್ಲ. ಮಾರ್ಚ್‌ ಮತ್ತು ಜೂನ್‌ ತಿಂಗಳ 'ಬಿ' ರಿಪೋರ್ಟ್‌ ನೀಡಿದ್ದೀರಿ. ಕೋರ್ಟಿನಿಂದ 819 ಸರ್ಚ್ ವಾರೆಂಟ್ ಪಡೆಯಲಾಗಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಏಕೆ ಸಾಧ್ಯವಾಗಿಲ್ಲ? ಕೋರ್ಟ್ ಹೇಳಿದ ಬಳಿಕ ಡಿಸಿಯನ್ನು ಆರೋಪಿಯನ್ನಾಗಿ ಮಾಡಿದ್ದೀರಿ. ಮತ್ತೆ ಆ ಬಳಿಕ, ಈಗ ದಾಳಿ ಮಾಡಿದ್ದೀರಿ. ಮೊದಲೇ ಏಕೆ ದಾಳಿ ನಡೆಸಲಿಲ್ಲ?" ಎಂದು ಎಸಿಬಿಗೆ ಪ್ರಶ್ನೆಗಳ ಸುರಿಮಳೆಗರೆಯಿತು.



"ಡಿಸಿಯನ್ನು 'ನೌಕರೇತರ ವ್ಯಕ್ತಿ' ಸಹಾಯ ಮಾಡಲು ಹೇಗೆ ಸಾಧ್ಯ? ಪ್ರಕರಣದ ೧ನೇ ಆರೋಪಿ ಜೊತೆ ಮಾತನಾಡಲು ಖುದ್ದು ಡಿಸಿ ಹೇಳಿದ್ದಾರೆ. ಒಂದನೇ ಆರೋಪಿ ಆದೇಶ ಸಿದ್ಧವಿದ್ದರೂ ಡಿಸಿ ಸಹಿ ಏಕೆ ಮಾಡಲಿಲ್ಲ?” ಎಂದು ನ್ಯಾಯಪೀಠ ಕೇಳಿತು.



ಬೆಂಗಳೂರು SP ನೇಮಕದಲ್ಲೂ ತಾರತಮ್ಯ ಮಾಡಿರುವ ಕುರಿತೂ ಕಿಡಿಕಾರಿದ ನ್ಯಾಯಪೀಠ, “ADGPಗೆ ಮಣಿಯದ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ಚಂದ್ರ ಅವರಿಗೆ ಜವಾಬ್ದಾರಿ ನೀಡಿಲ್ಲ. ಇದೆಂಥ ನಿಮ್ಮ ಕಾರ್ಯವೈಖರಿ?" ಎಂದು ಕುಟುಕಿತು.



ADGP ಬಗ್ಗೆ ನಮಗೆ ವೈಯಕ್ತಿಕ ದ್ವೇಷ ಇಲ್ಲ ಎಂದ ನ್ಯಾಯಮೂರ್ತಿಗಳು, 2022ರಲ್ಲಿ ದಾಖಲಾದ ಬಿ ರಿಪೋರ್ಟ್‌ಗಳ ವಿವರ ಇಲ್ಲ. ACB ADGP ಸೀಮಾಂತ್ ಕುಮಾರ್‌ ರಕ್ಷಣೆಗಾಗಿಯೇ ಈ ಮಾಹಿತಿ ನೀಡಿಲ್ಲ. ಅವರ ಬಗ್ಗೆ ಅನಮಾನ ಬರಲೂ ಕಾರಣಗಳಿವೆ. ಮೊದಲು ACB ADGP ಸೀಮಾಂತ್ ಕುಮಾರ್‌ ತಮ್ಮ ಆತ್ಮಸಾಕ್ಷಿಯನ್ನ ಕೇಳಿಕೊಳ್ಳಲು ಹೇಳಿ ಎಂದು ನ್ಯಾಯಾಲಯ ಕೆಂಡಾಮಂಡಲವಾಯಿತು.



ಕಳೆದ ವಿಚಾರಣೆ ವೇಳೆ, "ACB ಕಲೆಕ್ಷನ್‌ ಸೆಂಟರ್‌ ಆಗಿದೆ. ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದರವರಿಗೂ ಬಿ ರಿಪೋರ್ಟ್‌ ಹಾಕುತ್ತಿದೆ" ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಗುಡುಗಿದ್ದರು. 



ACB ADGP ಸೀಮಾಂತ್ ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡದ್ದಕ್ಕೆ ತಮಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದರು. ನ್ಯಾಯಮೂರ್ತಿಗಳ ಈ ಮಾತುಗಳು ದೇಶದಲ್ಲೇ ಸಂಚಲನ ಮೂಡಿಸಿತ್ತು. 


Read This Also...

ನಾನು ರೈತನ ಮಗ, ಜಡ್ಜ್ ಹುದ್ದೆ ಹೋದರೆ ಕೃಷಿ ಮಾಡುವೆ: ಭ್ರಷ್ಟಾಚಾರದ ವಿರುದ್ಧ ಗುಡುಗಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200