-->
ಜಡ್ಜ್‌ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸೀಮಾಂತ್ ಕುಮಾರ್ ಸಿಂಗ್: ಟೀಕೆ ತೆಗೆದುಹಾಕಲು ಅರ್ಜಿ

ಜಡ್ಜ್‌ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸೀಮಾಂತ್ ಕುಮಾರ್ ಸಿಂಗ್: ಟೀಕೆ ತೆಗೆದುಹಾಕಲು ಅರ್ಜಿ

ಜಡ್ಜ್‌ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸೀಮಾಂತ್ ಕುಮಾರ್ ಸಿಂಗ್: ಟೀಕೆ ತೆಗೆದುಹಾಕಲು ಅರ್ಜಿ

ಎಸಿಬಿ ಎಡಿಜಿಪಿ ಸೀಮಾಂತ್ ಕುಮಾರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಟೀಕಾ ಪ್ರಹಾರ ಮಾಡಿರುವ ಹೈಕೋರ್ಟ್‌ ನ್ಯಾಯಮೂರ್ತಿಗಳು ಮಾಡಿರುವ ಮೌಖಿಕ ಟೀಕೆಗಳನ್ನು ತೆಗೆದುಹಾಕುವಂತೆ ಹಾಗೂ ತಮ್ಮ ವಿರುದ್ಧ ಟೀಕೆ ಮಾಡದಂತೆ ಸೂಕ್ತ ಆದೇಶ ಹೊರಡಿಸುವಂತೆ ನ್ಯಾಯಪೀಠದ ಮುಂದೆ ಅವರು ಮನವಿ ಅರ್ಜಿ ಸಲ್ಲಿಸಿದ್ದಾರೆ.


ಇದರ ಜೊತೆಗೆ ತಮ್ಮ ಸೇವಾ ದಾಖಲೆಯನ್ನು ಸಲ್ಲಿಸಲು ನೀಡಿರುವ ಆದೇಶವನ್ನೂ ರದ್ದುಪಡಿಸುವಂತೆ ಅವರು ಕೋರಿದ್ದಾರೆ.ಬೆಂಗಳೂರು ಡಿಸಿ ಮಂಜುಣಾಥ್ ಅವರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ನ್ಯಾಯ ವಿಚಾರಣೆ ವೇಳೆ, ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಚ್‌. ಪಿ. ಸಂದೇಶ್‌ ಎಸಿಬಿ ಹಾಗೂ ಅದರ ಎಡಿಜಿಪಿಯಾದ ಸೀಮಾಂತ್ ಕುಮಾರ್‌ ಸಿಂಗ್ ವಿರುದ್ಧ ಗಂಭೀರ ಟೀಕೆಗಳನ್ನು ಮಾಡಿದ್ದರು. ಅದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಮಾನ್ಯ ನ್ಯಾಯಪೀಠ ತಮ್ಮ ವಿರುದ್ಧ ಮಾಡಿರುವ ಮೌಖಿಕ ಟೀಕೆಗಳನ್ನು ತೆಗೆದುಹಾಕುವಂತೆ ಕೋರಿ ಹಾಗೂ ಭವಿಷ್ಯದಲ್ಲಿ ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ಸೀಮಾಂತ್ ತಮ್ಮ ಮನವಿ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ. ಅದೇ ರೀತಿ, ತಮ್ಮ ಸೇವಾ ದಾಖಲೆಯನ್ನು ಸಲ್ಲಿಸಲು ನೀಡಿರುವ ಆದೇಶ ರದ್ದುಪಡಿಸುವಂತೆ ಅವರು ಕೋರಿದ್ದಾರೆ.ACB ADGP ಹುದ್ದೆಯಲ್ಲಿ ತಾನು ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದು ಸೀಮಾಂತ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ನಡೆದ ನ್ಯಾಯ ವಿಚಾರಣೆಯಲ್ಲಿ ತಾನಾಗಲಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರಾಗಲಿ ಪಕ್ಷಕಾರನಲ್ಲ. ಆದರೂ ನ್ಯಾಯಪೀಠ ತಮ್ಮ ವಿರುದ್ಧ ಟಿಪ್ಪಣಿ ಮಾಡಿದೆ. ಇದು ನ್ಯಾಯಪೀಠದ ಕಾರ್ಯವ್ಯಾಪ್ತಿಗೆ ಮೀರಿದ್ದು ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.ಮಾನ್ಯ ನ್ಯಾಯಮೂರ್ತಿಗಳು ವಾದಿಯೊಬ್ಬರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ. ತನ್ನ ಹಾಗೂ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ. ತಮ್ಮ ಸೇವಾ ವರದಿಯನ್ನು ಸಲ್ಲಿಸಲು ಕೋರಿರುವುದು ಸಹ ಜಾಮೀನು ಅರ್ಜಿಯ ವ್ಯಾಪ್ತಿಯ ಹೊರಗಿದೆ ಎಂದು ಸೀಮಾಂತ್ ತಮ್ಮ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.


Also Read

ADGP ಸೀಮಾಂತ್ ಕುಮಾರ್ ಬಗ್ಗೆ ಹೈಕೋರ್ಟ್ ಮತ್ತೆ ಗರಂ: ACBಯ ಕಳ್ಳಾಟ, ಬೇಜವಾಬ್ದಾರಿಗೆ ತರಾಟೆ
ವಕೀಲರ ವಂಚನೆ ಪ್ರಕರಣ- RTC ತಿದ್ದುಪಡಿ ನೆಪದಲ್ಲಿ ದಲಿತ ಮಹಿಳೆಗೆ ವಂಚಿಸಿ ಕ್ರಯಪತ್ರ ನೋಂದಣಿ!
8-07-2022: ಕರ್ನಾಟಕ ನ್ಯಾಯಾಂಗ ಸೇವೆಗೆ 75 ಸಿವಿಲ್ ನ್ಯಾಯಾಧೀಶರ ಸೇರ್ಪಡೆ- ರಾಜ್ಯಪಾಲರ ಅಂಕಿತ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200