-->
ಅಮಲ್ಜಾರಿ ಪ್ರಕರಣ: ಡಿಕ್ರಿದಾರರಿಗೆ ಮಾತ್ರ Order XXI, Rule 97ರಡಿ ಅರ್ಜಿ ಸಲ್ಲಿಸಲು ಅವಕಾಶ: ಸುಪ್ರೀಂ ಕೋರ್ಟ್‌

ಅಮಲ್ಜಾರಿ ಪ್ರಕರಣ: ಡಿಕ್ರಿದಾರರಿಗೆ ಮಾತ್ರ Order XXI, Rule 97ರಡಿ ಅರ್ಜಿ ಸಲ್ಲಿಸಲು ಅವಕಾಶ: ಸುಪ್ರೀಂ ಕೋರ್ಟ್‌

ಅಮಲ್ಜಾರಿ ಪ್ರಕರಣ: ಡಿಕ್ರಿದಾರರಿಗೆ ಮಾತ್ರ Order XXI, Rule 97ರಡಿ ಅರ್ಜಿ ಸಲ್ಲಿಸಲು ಅವಕಾಶ: ಸುಪ್ರೀಂ ಕೋರ್ಟ್‌

ಆಸ್ತಿ ವಿವಾದದಲ್ಲಿ ಅಮಲ್ಜಾರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ. ಇದೇ ವೇಳೆ, ಡಿಕ್ರಿ ಹೊಂದಿರುವವರು ಮಾತ್ರ ದಿವಾಣಿ ಪ್ರಕ್ರಿಯಾ ಸಂಹಿತೆ(CPC)ಯ ಆದೇಶ XXI ನಿಯಮ 97 ರ ಅಡಿಯಲ್ಲಿ, ಇತರ ವ್ಯಕ್ತಿಗಳಿಂದ ಅಡ್ಡಿ ಆತಂಕ ಇದ್ದಾಗ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಅಂತಹ ಪ್ರತಿರೋಧ ಅಥವಾ ಅಡಚಣೆಯ ಬಗ್ಗೆ ದೂರು ಸಲ್ಲಿಸಲು ನಿಯಮ 97ರಡಿ ಡಿಕ್ರಿ ಹೊಂದಿರುವವರಿಗೆ ಮಾತ್ರ ಅಧಿಕಾರ ಇದೆ ಎಂದು ವಿಭಾಗೀಯ ನ್ಯಾಯ ಪೀಠ ಸ್ಪಷ್ಟಪಡಿಸಿದೆ.


ಪ್ರಕರಣ: ಶ್ರೀರಾಮ್ ಹೌಸಿಂಗ್ ಫೈನಾನ್ಸ್‌ Vs ಓಮೇಶ್ ಮಿಶ್ರಾ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್

ಸುಪ್ರೀಂ ಕೋರ್ಟ್, CA No. 4649/2022 Dated 6/07/2022


ಸದ್ರಿ ಪ್ರಕರಣದಲ್ಲಿ, ಮೇಲ್ಮನವಿದಾರರೇ ಒಪ್ಪಿಕೊಂಡಂತೆ, ಆಸ್ತಿಯ ನಿಷ್ಠಾವಂತ ಖರೀದಿದಾರರೇ ಹೊರತು ಡಿಕ್ರಿ ಹೊಂದಿರುವವರಲ್ಲ...ಆದ್ದರಿಂದ, ಮೇಲ್ಮನವಿದಾರರು ಪ್ರತಿವಾದಿಯ ಡಿಕ್ರಿ ಅಮಲ್ಜಾರಿ ವಿರುದ್ಧ ಆಕ್ಷೇಪಣೆ ಎತ್ತಲು ನಿಯಮ 97ರ ಆಶ್ರಯ ಪಡೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.ಪ್ರಸ್ತುತ ಪ್ರಕರಣದಲ್ಲಿ, ನಿಯಮ 97 ಅಥವಾ ನಿಯಮ 99 ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮೇಲ್ಮನವಿದಾರರಿಗೆ ಅರ್ಹತೆ ಇಲ್ಲ. ಹಾಗಾಗಿ, ಆದೇಶ XXI ನಿಯಮ 101 ಅನ್ವಯವಾಗುವುದಿಲ್ಲ ಎಂದು ನ್ಯಾಯ ಪೀಠ ಹೇಳಿತು.ವಿಚಾರಣಾ ನ್ಯಾಯಾಲಯವು ವಿವಾದಾಂಶಗಳನ್ನು ರೂಪಿಸಲು ಮತ್ತು ಆಕ್ಷೇಪಣೆ ಮೇಲೆ ಸಾಕ್ಷಿ ನುಡಿಯಲು ಪಕ್ಷಕಾರರಿಗೆ ನಿರ್ದೇಶನ ನೀಡಲು ಯಾವುದೇ ಅವಕಾಶ ಹೊಂದಿಲ್ಲ ಹೇಳಿತು. 


ಸದ್ರಿ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು ಆದೇಶ XXI ನಿಯಮ 97 ಮತ್ತು ನಿಯಮ 99 ರ ವ್ಯಾಪ್ತಿಯನ್ನು ಉಲ್ಲಂಘಿಸಿದೆ ಎಂದು ಹೇಳಿ ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದು, ಮೇಲ್ಮನವಿಯನ್ನು ವಜಾಗೊಳಿಸಿತು.
Ads on article

Advertise in articles 1

advertising articles 2

Advertise under the article