-->
Consensual Sex is not Rape | ಸೆಕ್ಸ್‌ಗೆ ಸಮ್ಮತಿ ಇದ್ದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ತೀರ್ಪು

Consensual Sex is not Rape | ಸೆಕ್ಸ್‌ಗೆ ಸಮ್ಮತಿ ಇದ್ದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ತೀರ್ಪು

Consensual Sex is not Rape | ಸೆಕ್ಸ್‌ಗೆ ಸಮ್ಮತಿ ಇದ್ದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ತೀರ್ಪು



//ಸಾಂದರ್ಭಿಕ ಚಿತ್ರ//


ಸಮ್ಮತಿ ಪಡೆದು ನಡೆಸಿದ ಲೈಂಗಿಕ ಸಂಬಂಧ ಅತ್ಯಾಚಾರದ ವ್ಯಾಪ್ತಿಗೆ ಬರುವುದಿಲ್ಲ. ಇಬ್ಬರೂ ಪರಸ್ಪರ ಒಪ್ಪುಕೊಂಡು ನಡೆಸಿದ ಲೈಂಗಿಕ ಕ್ರಿಯೆಗೆ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರ ಆಪರಾಧವೆಂದು ಪರಿಗಣಿಸಲಾಗದು ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 


ಸಂತ್ರಸ್ತೆ SC-ST ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಅತ್ಯಾಚಾರ ನಡೆದಿದ್ದರೆ ಮಾತ್ರ ಸಂತ್ರಸ್ತೆ ಆ ಕಾಯ್ದೆಯಡಿ ರಕ್ಷಣೆ ಮತ್ತು ಪರಿಹಾರ ಕೇಳಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಪ್ರಕರಣ: ಆಂಧ್ರ ಪ್ರದೇಶ ಹೈಕೋರ್ಟ್, ನ್ಯಾ. Subba Reddy Satti in Criminal Petition No. 4097/2022 Dated 8-07-2022


ಸದ್ರಿ ಪ್ರಕರಣದಲ್ಲಿ ದೂರುದಾರೆ ಸಂತ್ರಸ್ತೆ "ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ"ಯಡಿ ದಾಖಲಿಸಿದ್ದ ದೂರನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. 




ದೂರುದಾರೆ ಯಾ ಸಂತ್ರಸ್ತೆ 'ನಿರ್ದಿಷ್ಟ' ಜಾತಿಗೆ ಸೇರಿದ್ದಾರೆ ಎಂಬ ಕಾರಣಕ್ಕಾಗಿಯೇ ಆರೋಪಿ ದೌರ್ಜನ್ಯ ಎಸಗಿದ್ದರೆ ಮಾತ್ರ ಆ ಪ್ರಕರಣದಲ್ಲಿ SC ST ದೌರ್ಜನ್ಯ ತಡೆ ಕಾಯ್ದೆ ಅಡಿ ರಕ್ಷಣೆ ಮತ್ತು ಪರಿಹಾರವನ್ನು ಕೋರಬಹುದು. ಒಂದು ವೇಳೆ ಇಂತಹ ಅಂಶ ಇಲ್ಲದಿದ್ದರೆ ಅನಗತ್ಯವಾಗಿ ಈ ಕಾಯ್ದೆಯನ್ನು ಪ್ರಕರಣದಲ್ಲಿ ಅನ್ವಯಿಸಲಾಗದು ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ. 


ಘಟನೆಯ ವಿವರ:


ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ LLB ವಿದ್ಯಾರ್ಥಿನಿ ಕಳೆದ ಆರು ವರ್ಷಗಳಿಂದ ದೆಹಲಿಯ CISF ಕಾನ್ಸ್‌ಟೆಬಲ್‌ನನ್ನು ಪ್ರೇಮಿಸಿದ್ದಳು. ಮದುವೆಯಾಗಿರವ ಭರವಸೆ ನೀಡಿ ಆತ ಆಕೆಯ ಜೊತೆಗೆ ದೈಹಿಕ ಸಂಬಂಧವನ್ನೂ ಬೆಳೆಸಿದ್ದ.


ಸಂತ್ರಸ್ತೆ ಆತನ ಜೊತೆಗೆ ಮದುವೆಯ ಪ್ರಸ್ತಾಪ ಇಟ್ಟಾಗ ಆರು ತಿಂಗಳು ಕಾಯುವಂತೆ ಹೇಳಿದ. ಸುಮಾರು ಒಂದೂವರೆ ವರ್ಷ ಕಳೆದ ನಂತರ ಆತ ದೂರವಾಣಿ ಕರೆ ಮಾಡಿ, ನಾನು ಅಗಸ ಸಮುದಾಯಕ್ಕೆ ಸೇರಿದ್ದು, ನನ್ನ ಹೆತ್ತವರು SC ಸಮುದಾಯದ ಯುವತಿಯ ಜೊತೆಗೆ ನಾನು ಮದುವೆಯಾಗುವುದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದ.


ಈ ಹಿನ್ನೆಲೆಯಲ್ಲಿ ಆಕೆ ಅನಂತಪುರ ಜಿಲ್ಲೆಯ ದಿಶಾ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಅರ್ಜಿಯನ್ನು ಹಾಕಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ಮಾನ್ಯ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ.




ಸಂತ್ರಸ್ತೆ ಪ್ರಾಪ್ತ ವಯಸ್ಕಳಾಗಿದ್ದು, ಕಾನೂನು ಪದವೀಧರೆಯೂ ಆಗಿದ್ದಾರೆ. ವಿಭಿನ್ನ ಸಮುದಾಯಕ್ಕೆ ಸೇರಿದ್ದರೂ ಸಂತ್ರಸ್ತೆ ಆರು ವರ್ಷಗಳ ಕಾಲ ಜೊತೆಯಾಗಿ ಆರೋಪಿ ಜೊತೆಗೆ ಬಾಂಧವ್ಯ ಬೆಳೆಸಿದ್ದರು. ಲೈಂಗಿಕ ಸಂಬಂಧವನ್ನೂ ಹೊಂದಿದ್ದರು. ಆದರೆ, ಇದನ್ನು ಅತ್ಯಾಚಾರ ಎಂದು ಪರಿಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಹಲವು ಪ್ರಕರಣಗಳನ್ನು ಉದ್ಧರಿಸಿ ನ್ಯಾಯಪೀಠ ತೀರ್ಪು ನೀಡಿದೆ.


ತನಿಖೆ ಸಂಪೂರ್ಣ ಮುಗಿದಿರುವುದರಿಂದ ಅರ್ಜಿದಾರನ ಪೊಲೀಸ್ ಬಂಧನ ಅಗತ್ಯವಿಲ್ಲ. ಎಂಬುದನ್ನು ಗಮನಿಸಿದ ಹೈಕೋರ್ಟ್ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.


ಸಮ್ಮತಿ ನೀಡಿದ ಲೈಂಗಿಕ ಸಂಬಂಧವಿದ್ದಾಗ ಅದನ್ನು ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರ ಅಪರಾಧ ಎನ್ನಲಾಗದು. ಒಪ್ಪಿಗೆ ನೀಡಿದ ಸೆಕ್ಸ್‌ಗೂ ಅತ್ಯಾಚಾರಕ್ಕೂ ವ್ಯತ್ಯಾಸವಿದೆ. ಇಂತಹ ಪ್ರಕರಣಗಳನ್ನು ನ್ಯಾಯಾಲಯ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಆರೋಪಿ ನಿಜವಾಗಿಯೂ ಮದುವೆಯಾಗುವ ಇಚ್ಚೆ ಹೊಂದಿ ಲೈಂಗಿಕ ಸಂಬಂಧ ಬೆಳೆಸಿದ್ದನೋ ಅಥವಾ ಲೈಂಗಿಕ ಆಸೆಗಾಗಿ ಮಾತ್ರ ಮದುವೆ ಭರವಸೆ ನೀಡಿದ್ದನೋ ಎಂಬುದನ್ನು ಗಮನಿಸಬೇಕಾಗುತ್ತದೆ.


ಒಂದು ವೇಳೆ, ಲೈಂಗಿಕ ಆಸೆಗಾಗಿ ಮದುವೆಯ ಸುಳ್ಳು ಭರವಸೆ ನೀಡಿದ್ದರೆ ಅದು ವಂಚನೆ ವ್ಯಾಪ್ತಿಗೆ ಬರುತ್ತದೆ. ಇದೇ ವೇಳೆ, ಸೆಕ್ಸ್‌ಗೆ ಪರಸ್ಪರ ಒಪ್ಪಿಗೆ ಇದ್ದರೆ ಅದನ್ನು ರೇಪ್ ಎಂಬ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.


ಜಾತಿ ಉದ್ದೇಶವಿಲ್ಲದ ಇಂತಹ ಅಪರಾಧಗಳಿಗೆ SC ST ದೌರ್ಜನ್ಯ ತಡೆ ಕಾಯ್ದೆಯನ್ನು ಅನ್ವಯಿಸಲಾಗದು ಎಂದು ಅಭಿಪ್ರಾಯಪಟ್ಟು ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ.



Judgement Copy

ಸೆಕ್ಸ್‌ಗೆ ಸಮ್ಮತಿ ಇದ್ದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ತೀರ್ಪು

Ads on article

Advertise in articles 1

advertising articles 2

Advertise under the article