-->
ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆ ದಿನ ನಿಗದಿ: ಹೈಕೋರ್ಟ್ ಪ್ರಕಟಣೆ

ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆ ದಿನ ನಿಗದಿ: ಹೈಕೋರ್ಟ್ ಪ್ರಕಟಣೆ

ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆ ದಿನ ನಿಗದಿ: ಹೈಕೋರ್ಟ್ ಪ್ರಕಟಣೆ






ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆಗೆ ದಿನ ನಿಗದಿಪಡಿಸಿ ಹೈಕೋರ್ಟ್ ಸೂಚನೆ ಹೊರಡಿಸಿದೆ. ಅಕ್ಟೋಬರ್ 07 ಮತ್ತು 08ರಂದು ಈ ಮುಖ್ಯ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಬಿ. ಮುರಳೀಧರ ಪೈ ಅವರು ತಿಳಿಸಿದ್ದಾರೆ.


ಬೆಂಗಳೂರು ಮತ್ತು ಸುತ್ತಮುತ್ತಲು ಸುರಿದ ಧಾರಾಕಾರ ಮಳೆ ಹಾಗೂ ಹವಾಮಾನ ವ್ಯತ್ಯಯದಿಂದಾಗಿ ಸೆಪ್ಟಂಬರ್ 10 ಮತ್ತು 11, 2022ರಂದು ನಿಗದಿಯಾಗಿದ್ದ ಸಿವಿಲ್ ಜಡ್ಜ್‌ ಲಿಖಿತ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿತ್ತು.


ಮುಖ್ಯ ಲಿಖಿತ ಪರೀಕ್ಷೆಯನ್ನು ಮರುನಿಗದಿಗೊಳಿಸಲಾಗಿದ್ದು, ಅಭ್ಯರ್ಥಿಗಳಿಗೆ ಹೆಚ್ಚಿನ ಮಾಹಿತಿ ಮತ್ತು ಸೂಚನೆಯನ್ನು ನೀಡಲಾಗುವುದು ಎಂದು ಹೈಕೋರ್ಟ್‌ ತಿಳಿಸಿದೆ.


ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ವ್ಯಾಪಕ ಮಳೆ ಸುರಿದಿದ್ದು, ವಕೀಲರಿಗೆ ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನಾನುಕೂಲವಾಗಿತ್ತು. ಈ ಕಾರಣದಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಸಂಘ ಹಾಗೂ ಇತರ ವಕೀಲ ಸಂಘಗಳು ಮನವಿ ಮಾಡಿದ್ದವು.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu