-->
ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ | ಜಸ್ಟಿಸ್ ಕೆ. ಪಿ. ಲಕ್ಷ್ಮಣ ರಾವ್

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ | ಜಸ್ಟಿಸ್ ಕೆ. ಪಿ. ಲಕ್ಷ್ಮಣ ರಾವ್

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ
ಜಸ್ಟಿಸ್ ಕೆ. ಪಿ. ಲಕ್ಷ್ಮಣ ರಾವ್ | ಜಡ್ಜ್; ಹೈಕೋರ್ಟ್ ಆಫ್ ಮದ್ರಾಸ್


ದಿವಾನ್ ಬಹದ್ದೂರ್ ಸರ್ ಕಾಸರಗೋಡು ಪಟ್ಟಣಶೆಟ್ಟಿ ಲಕ್ಷ್ಮಣ ರಾವ್ ಇವರು ದಿನಾಂಕ 15.12.1887 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಪ್ರತಿಷ್ಠಿತ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಮದರಾಸಿನಲ್ಲಿ ಜನಿಸಿದರು.


ತಮ್ಮ ಶಿಕ್ಷಣವನ್ನು ಮದರಾಸಿನಲ್ಲಿ ಪೂರ್ಣಗೊಳಿಸಿದ ಇವರು ಪ್ರತಿಷ್ಠಿತ ಪ್ರಸಿಡೆನ್ಸಿ ಕಾಲೇಜಿನ ಪದವೀಧರರಾಗಿ ಮದರಾಸು ಲಾ ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದು ಮದ್ರಾಸ್ ಹೈಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು.


1930 ರಲ್ಲಿ ಮದ್ರಾಸ್ ಹೈಕೋರ್ಟ್ ನ ಹ೦ಗಾಮಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. 1934 ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಹೈಕೋರ್ಟ್ ನ್ಯಾಯಾಧೀಶರಾಗಿ ತಮ್ಮ ಅಧಿಕಾರಾವಧಿಯಲ್ಲಿ ಆಗಿನ ಮದ್ರಾಸು ಪ್ರಾ೦ತ್ಯದಲ್ಲಿ ಕುತೂಹಲ ಕೆರಳಿಸಿದ ಲಕ್ಷ್ಮೀಕಾಂತನ್ ಮರ್ಡರ್ ಕೇಸಿನಲ್ಲಿ ತೀರ್ಪು ನೀಡಿದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ದ್ವಿಸದಸ್ಯ ಪೀಠದಲ್ಲಿ ಇವರು ನ್ಯಾಯಾಧೀಶರಾಗಿದ್ದರು.ಕ್ರಿಕೆಟ್ ಕ್ರೀಡೆಯ ಅಭಿಮಾನಿಯಾಗಿದ್ದ ಇವರು ಸ್ವತಃ ಫಾಸ್ಟ್ ಮೀಡಿಯಂ ಬೌಲರ್ ಆಗಿದ್ದರು. 1936 ರಲ್ಲಿ ಪ್ರತಿಷ್ಠಿತ ಮದ್ರಾಸ್ ಕ್ರಿಕೆಟ್ ಕ್ಲಬ್ ಗೆ ಆಯ್ಕೆಯಾದ ಪ್ರಥಮ ಭಾರತೀಯನೆಂಬ ಕೀರ್ತಿಗೆ ಭಾಜನರಾದರು. 1947 ರಲ್ಲಿ ಮದ್ರಾಸ್ ಕ್ರಿಕೆಟ್ ಕ್ಲಬ್ ನ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದರು.1956 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯು ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಆಗಿನ ದಕ್ಷಿಣ ಕನ್ನಡ ಜಿಲ್ಲೆಯು ಈಗಿನ ಕಾಸರಗೋಡು, ಉಡುಪಿ ಮತ್ತು ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳನ್ನು ಒಳಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಮದ್ರಾಸ್ ಹೈಕೋರ್ಟಿನ ನಿಯಂತ್ರಣಕ್ಕೆ ಒಳಪಟ್ಟಿತ್ತು. ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಪ್ರಥಮ ಮತ್ತು ಕೊನೆಯ ನ್ಯಾಯಾಧೀಶರೆಂಬ ಹೆಗ್ಗಳಿಕೆ ಇವರದ್ದು.1946 ರಲ್ಲಿ ಬ್ರಿಟಿಷ್ ಸರಕಾರದ ನೈಟ್ ಹುಡ್ ಗೌರವದಿಂದ ಪುರಸ್ಕೃತರಾದ ಇವರ ಹೆಸರಿನ ಮುಂದೆ *ಸರ್* ಎಂಬ ಉಪಾಧಿ ಸೇರಿಕೊಂಡಿತು. ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇವರು ನೀಡಿದ ತೀರ್ಪುಗಳು Madras Law Journal ನಲ್ಲಿ ಪ್ರಕಟವಾಗಿವೆ.


1947 ರಲ್ಲಿ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದರು.✍️ ಪ್ರಕಾಶ್ ನಾಯಕ್, ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು
Ads on article

Advertise in articles 1

advertising articles 2

Advertise under the article