ವಿಚಾರಣಾ ನ್ಯಾಯಾಲಯಕ್ಕೂ ಕಲಾಪ ರಹಿತ ದಿನವಾಗಿ ಘೋಷಿಸಿ: ಹೈಕೋರ್ಟ್‌ಗೆ ವಕೀಲರ ಮನವಿ
ವಿಚಾರಣಾ ನ್ಯಾಯಾಲಯಕ್ಕೂ ಕಲಾಪ ರಹಿತ ದಿನವಾಗಿ ಘೋಷಿಸಿ: ಹೈಕೋರ್ಟ್‌ಗೆ ವಕೀಲರ ಮನವಿ
ಹೈಕೋರ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿ ಇರುವ ವ್ಯವಸ್ಥೆಯಂತೆ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಕ್ಕೂ ಕಲಾಪ ರಹಿತ ದಿನವಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯ ಹೈಕೋರ್ಟ್‌ಗೆ ಲಿಖಿತವಾಗಿ ಮನವಿ ಮಾಡಿದೆ.
ಕರ್ನಾಟಕ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮೊಟಪಲ್ಲಿ ಕಾಶೀನಾಥ್ ಅವರು ಹೈಕೋರ್ಟಿನ ವಕೀಲರಂತೆ ವಿಚಾರಣಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರು ವಾರಾಂತ್ಯವನ್ನು ನೆಮ್ಮದಿಯಿಂದ ಕಳೆಯುವಂತಾಗಲು ಕಲಾಪ ರಹಿತ ದಿನವಾಗಿ ಘೋಷಣೆ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.
ಸದ್ಯ ಈಗ ಜಾರಿಯಲ್ಲಿ ಇರುವ ವ್ಯವಸ್ಥೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರ ಮಧ್ಯೆ ತಾರತಮ್ಯ ಮಾಡಿದಂತಾಗುತ್ತಿದೆ. ಈ ಬಗ್ಗೆ ರಾಜ್ಯದ ಹೆಚ್ಚಿನ ವಕೀಲರ ಸಂಘದ ಅಧ್ಯಕ್ಷರು ತಮಗೆ ಪತ್ರ ಬರೆದಿದ್ದು, ಹೈಕೋರ್ಟಿನಲ್ಲಿ ಜಾರಿಯಲ್ಲಿ ಇರುತಂಥ ಕಲಾಪ ರಹಿತ ದಿನವನ್ನು ವಿಚಾರಣಾ ನ್ಯಾಯಾಲಯಕ್ಕೂ ಜಾರಿಗೆ ತರಲು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ಕೆಎಸ್‌ಬಿಸಿ ಅಧ್ಯಕ್ಷ ಮೊಟಪಲ್ಲಿ ಕಾಶೀನಾಥ್ ಪತ್ರದಲ್ಲಿ ನಿವೇದಿಸಿಕೊಂಡಿದ್ದಾರೆ.