-->
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಕಾರರ ಸಮ್ಮತಿ ಮೇರೆಗೆ ಅಂಗೀಕರಿಸಿದ ಡಿಕ್ರಿ ಸುಸಂಬದ್ಧವಾಗಿದ್ದು, ಅದನ್ನು ರದ್ದುಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಉಭಯ ಪಕ್ಷಕಾರರು ಮತ್ತು ಅವರ ವಕೀಲರು ಸಹಿ ಹಾಕಿರುವ ಸಮ್ಮತಿ ಪತ್ರ (Compromise Petition)ವನ್ನು ಆಧರಿಸಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿಯೇ ತಯಾರಿಸಲಾದ ಡಿಕ್ರಿಯ ನೈಜತೆಯನ್ನು ಅನುಮಾನಿಸಲಾಗದು ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.



ನ್ಯಾ. ಬಿ. ವಿ. ನಾಗರತ್ನ ಹಾಗೂ ನ್ಯಾ. ಎಂ.ಆರ್. ಶಾ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದ್ದು, ಲೋಕ ಅದಾಲತ್‌ನಲ್ಲಿ ಪಕ್ಷಕಾರರ ಸಮ್ಮತಿ ಮೇರೆಗೆ ಮಾಡಲಾದ ಡಿಕ್ರಿಯನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪನ್ನು ಬದಿಗಿರಿಸಿದ್ದು, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.



ಲೋಕ ಅದಾಲತ್‌ನಲ್ಲಿ ಪಕ್ಷಕಾರರನ್ನು ವಂಚಿಸಿ ಸಹಿ ಪಡೆದುಕೊಂಡು ಈ ಡಿಕ್ರಿಯನ್ನು ಬರೆಯಾಗಿದೆ ಎಂದು ಮೇಲ್ಮನವಿದಾರರು ಹೈಕೋರ್ಟ್‌ನಲ್ಲಿ ವಾದಿಸಿದ್ದರು.



ಪ್ರಕರಣ: ಹೇಮಂತ ಕುಮಾರ್ Vs ಆರ್. ಮಹಾದೇವಯ್ಯ

ಸುಪ್ರೀಂ ಕೋರ್ಟ್, Civil Appeal 4108/2022 Dated 11-07-2022



ಇದನ್ನೂ ಓದಿ:

ಸೆಂಡ್ ಆಫ್ ಪಾರ್ಟಿಯನ್ನು ಜಡ್ಜ್ ಸಾಹೇಬರ ಸಖತ್ ನಾಗಿನ್ ಡ್ಯಾನ್ಸ್‌!





...

Ads on article

Advertise in articles 1

advertising articles 2

Advertise under the article