-->
RTI Act: ಮಾಹಿತಿ ನೀಡದೆ ತಪ್ಪು ಹಿಂಬರಹ: ತಹಶೀಲ್ದಾರ್‌ಗೆ ದಂಡ ಹಾಕಿದ ರಾಜ್ಯ ಮಾಹಿತಿ ಆಯೋಗ

RTI Act: ಮಾಹಿತಿ ನೀಡದೆ ತಪ್ಪು ಹಿಂಬರಹ: ತಹಶೀಲ್ದಾರ್‌ಗೆ ದಂಡ ಹಾಕಿದ ರಾಜ್ಯ ಮಾಹಿತಿ ಆಯೋಗ

RTI Act: ಮಾಹಿತಿ ನೀಡದೆ ತಪ್ಪು ಹಿಂಬರಹ: ತಹಶೀಲ್ದಾರ್‌ಗೆ ದಂಡ ಹಾಕಿದ ರಾಜ್ಯ ಮಾಹಿತಿ ಆಯೋಗ





ಮಾಹಿತಿ ಹಕ್ಕುಗಳ ಕಾಯ್ದೆ ಪ್ರಕಾರ ಮಾಹಿತಿ ಕೋರಿ ನೀಡಿದ ಅರ್ಜಿಗೆ ಸೂಕ್ತ ಮಾಹಿತಿ ನೀಡದೆ, ತಪ್ಪು ಹಿಂಬರಹ ನೀಡಿ ಕರ್ತವ್ಯ ಲೋಪ ಎಸಗಿದ ತಹಶೀಲ್ದಾರ್ ಅವರಿಗೆ ದಂಡ ಹಾಕುವ ಮೂಲಕ ರಾಜ್ಯ ಮಾಹಿತಿ ಆಯೋಗವು ಬಿಸಿ ಮುಟ್ಟಿಸಿದ ಪ್ರಕರಣ ನಡೆದಿದೆ.



ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಹಶೀಲ್ದಾರ್ ಚಂದ್ರಮೌಳಿ ಮಾಹಿತಿ ಆಯೋಗದ ದಂಡನೆಗೆ ಒಳಗಾದ ಅಧಿಕಾರಿ. ಮಂಗಳೂರಿನ ಮಂಗಳಾದೇವಿ ನಿವಾಸಿ ಮೊಹಮ್ಮದ್ ಜಮೀರ್ ಅವರ ದೂರು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ರಾಜ್ಯ ಮಾಹಿತಿ ಆಯೋಗ ಈ ಮಹತ್ವದ ಆದೇಶ ನೀಡಿದೆ.



ಪಿರಿಯಾಪಟ್ಟಣದ ತಹಶೀಲ್ದಾರ್ ಅವರಿಗೆ ಕಾರಣ ಕೇಳಿ ನೋಟೀಸ್‌ ಜಾರಿಗೊಳಿಸಿದ್ದ ರಾಜ್ಯ ಮಾಹಿತಿ ಆಯೋಗ, ನಿಗದಿತ ಅವಧಿಯೊಳಗೆ ಮಾಹಿತಿ ನೀಡದೆ ಇರುವುದಕ್ಕೆ ಏಕೆ ದಂಡ ವಿಧಿಸಬಾರದು ಎಂಬ ಬಗ್ಗೆ ಖುದ್ದು ಹಾಜರಾಗಿ ಉತ್ತರ ನೀಡಬೇಕು ಎಂದು ನಿರ್ದೇಶನ ನೀಡಿತ್ತು.



ಆದರೆ, ಮಾಹಿತಿ ಆಯೋಗಕ್ಕೂ ಸೊಪ್ಪು ಹಾಕದ ಪಿರಿಯಾಪಟ್ಟಣದ ತಹಶೀಲ್ದಾರ್ ವಿಚಾರಣೆ ದಿನ ಗೈರು ಹಾಜರಾಗಿದ್ದರು.



ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಾಹಿತಿ ಆಯೋಗ ನಿಗದಿತ ಸಮಯದೊಳಗೆ ಕೋರಿದ ಮಾಹಿತಿ ಒದಗಿಸದೆ ಇರುವುದು ಮತ್ತು ತಪ್ಪು ಹಿಂಬರಹವನ್ನು ಒದಗಿಸಿರುವುದನ್ನು ಆದೇಶದಲ್ಲಿ ಗಮನಸಿತು.



ಮಾಹಿತಿದಾರರು ಕೋರುವ ಮಾಹಿತಿಯನ್ನು 30 ದಿನದೊಳಗೆ ಉಚಿತವಾಗಿ ನೋಂದಾಯಿತ ಅಂಚೆ ಸ್ವೀಕೃತಿ ಮೂಲಕ ದೃಢೀಕರಿಸಿದ ಮಾಹಿತಿಯನ್ನು ಒದಗಿಸಿ ಅದರ ಅನುಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ತಹಶೀಲ್ದಾರ್‌ಗೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.



ಈ ಕರ್ತವ್ಯ ಲೋಪವಾಗಿ ರೂ. 15000/- ದಂಡ ವಿಧಿಸಲಾಗಿದ್ದು, ಪ್ರತಿ ತಿಂಗಳು ರೂ. 7500/-ರಂತೆ ಮಾಹಿತಿ ಹಕ್ಕುಗಳ ಕಾಯ್ದೆ ಖಾತೆಗೆ ಜಮೆ ಮಾಡಿ ಅದರ ರಶೀದಿಯನ್ನು ಅನುಪಾಲನಾ ವರದಿಯೊಂದಿಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ನೀಡಬೇಕು ಎಂದು ನಿರ್ದೇಶಿಸಲಾಗಿದೆ.



ಮಾಹಿತಿ ಹಕ್ಕುಗಳ ಕಾಯ್ದೆ ಬಗ್ಗೆ ಉಡಾಫೆ ತೋರುವ ಅಧಿಕಾರಿಗಳಿಗೆ ಈ ಮೂಲಕ ರಾಜ್ಯ ಮಾಹಿತಿ ಆಯೋಗ ಕಠಿಣ ಕ್ರಮ ಜರುಗಿಸುವ ಮೂಲಕ ಸ್ಪಷ್ಟ ಸಂದೇಶವನ್ನು ಸಾರಿದೆ.



ಮೊಹಮ್ಮದ ಜಮೀರ್ Vs ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ್ ಪರಿಯಾಪಟ್ಟಣ

ಕಮಾಆ 13478 ಎಪಿಎಲ್ 2022 Dated 21-10-2022

ಕರ್ನಾಟಕ ಮಾಹಿತಿ ಆಯೋಗ




ಇದನ್ನೂ ಓದಿ:

ಸೆಂಡ್ ಆಫ್ ಪಾರ್ಟಿಯನ್ನು ಜಡ್ಜ್ ಸಾಹೇಬರ ಸಖತ್ ನಾಗಿನ್ ಡ್ಯಾನ್ಸ್‌!


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200