"ಕಡತ ಇಲ್ಲದ ವಕೀಲ- ಬ್ಯಾಟ್ ಇಲ್ಲದ ಸಚಿನ್ ಇದ್ದಂತೆ"
"ಕಡತ ಇಲ್ಲದ ವಕೀಲ- ಬ್ಯಾಟ್ ಇಲ್ಲದ ಸಚಿನ್ ಇದ್ದಂತೆ"
ಕಡತಗಳಿಲ್ಲದ ವಕೀಲರೊಬ್ಬರು ವಾದ ಮಾಡುವುದು ಎಂದರೆ ಬ್ಯಾಟ್ ಇಲ್ಲ ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ಇಳಿದಂತೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ. ಡಾ. ಡಿ.ವೈ.ಚಂದ್ರಚೂಡ್ ಹೇಳಿದರು.
ಸುಪ್ರೀಂ ಕೋರ್ಟ್ ವಿಭಾಗೀಯ ಪೀಠದ ಮುಂದೆ ವಾಧ ಮಂಡಿಸಲು ಯಾವುದೇ ಕಡತ ಇಲ್ಲದೆ ಬಂದಿದ್ದ ವಕೀಲರೊಬ್ಬರನ್ನು ಉದ್ದೇಶಿಸಿ ಅವರು ಈ ಮಾತನ್ನಾಡಿದರು.
ಕಪ್ಪು ಕೋಟು ಧರಿಸಿಕೊಂಡು ಕಡತಗಳಿಲ್ಲದೆ ಬಂದಿದ್ದೀರಿ... ಇದು ಸರಿಯಲ್ಲ. ನಿಮ್ಮ ಬಳಿ ಯಾವಾಗಲೂ ನೀವು ವಾದಿಸುವ ಪ್ರಕರಣಗಳ ಕಡತಗಳನ್ನು ಇಟ್ಟುಕೊಂಡು ಬರಬೇಕು ಎಂದು ಚಂದ್ರಚೂಡ್ ವಕೀಲರಿಗೆ ಕಿವಿಮಾತು ಹೇಳಿದರು.
ನ್ಯಾ. ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ವಕೀಲರು ಕಡತ ಇಲ್ಲದೆ ವಾದ ಮಂಡಿಸಲು ಆಗಮಿಸಿದ್ದರು. ಮಾಹಿತಿಗಾಗಿ ತಡಕಾಡುತ್ತಿದ್ದಾಗ ವಕೀಲರನ್ನು ಉದ್ದೇಶಿಸಿ ಚಂದ್ರಚೂಡ್ ತುಸು ಖಾರವಾಗಿಯೇ ಮಾತನಾಡಿದರು.
ಇದನ್ನೂ ಓದಿ;
ನ್ಯಾಯಾಧೀಶರ ಹುದ್ದೆಗೆ ನೇಮಕಾತಿ: ಅರ್ಹ ವಕೀಲರ ಕೊರತೆ: ಸುಪ್ರೀಂ ಕೋರ್ಟ್ ಬೇಸರ
ಇದನ್ನೂ ಓದಿ;
ಕಿವುಡರು, ದೃಷ್ಟಿಹೀನರೂ ನ್ಯಾಯಾಧೀಶರಾಗಲು ಸಾಧ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
--
.