-->
NI Act : ಹೆಚ್ಚುವರಿ ಆರೋಪಿಯ ಸೇರ್ಪಡೆ ಕಾಗ್ನಿಜೆನ್ಸ್ ಮುನ್ನ ಮಾತ್ರ ಅವಕಾಶ: ಸುಪ್ರೀಂ ಕೋರ್ಟ್‌

NI Act : ಹೆಚ್ಚುವರಿ ಆರೋಪಿಯ ಸೇರ್ಪಡೆ ಕಾಗ್ನಿಜೆನ್ಸ್ ಮುನ್ನ ಮಾತ್ರ ಅವಕಾಶ: ಸುಪ್ರೀಂ ಕೋರ್ಟ್‌

NI Act : ಹೆಚ್ಚುವರಿ ಆರೋಪಿಯ ಸೇರ್ಪಡೆ ಕಾಗ್ನಿಜೆನ್ಸ್ ಮುನ್ನ ಮಾತ್ರ ಅವಕಾಶ: ಸುಪ್ರೀಂ ಕೋರ್ಟ್‌





ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆ ಅಡಿಯಲ್ಲಿ ದಾಖಲಾದ ದೂರಿನಲ್ಲಿ ಹೆಚ್ಚುವರಿ ಆರೋಪಿಗಳ ಸೇರ್ಪಡೆಯನ್ನು ಸೆಕ್ಷನ್ 142ರ ಅಡಿಯಲ್ಲಿ ಕಾಲಮಿತಿಗೊಳಪಟ್ಟು ಕಾಗ್ನಿಜೆನ್ಸ್ ತೆಗೆದುಕೊಳ್ಳುವ ಮುನ್ನ ನಡೆಸಬೇಕು. ಆ ನಂತರ ಹೆಚ್ಚುವರಿ ಆರೋಪಿಗಳ ಸೇರ್ಪಡೆಗೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



ನ್ಯಾ. ಕೃಷ್ಣ ಮುರಾರಿ ಮತ್ತು ಬೆಲ ಎಂ. ತ್ರಿವೇದಿ ನೇತೃತ್ವದ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.



ಸೆಕ್ಷನ್ 142ರ ಅಡಿಯಲ್ಲಿ ಕಾಲಮಿತಿಯೊಳಗೆ ಅಪರಾಧದ ಕಾಗ್ನಿಜೆನ್ಸ್ ಪಡೆದುಕೊಂಡ ನಂತರ ಹೆಚ್ಚುವರಿ ಆರೋಪಿಗಳ ಸೇರ್ಪಡೆಗೆ ಯಾವುದೇ ಅವಕಾಶ ಇಲ್ಲ. ಸದ್ರಿ ಈ ಪ್ರಕರಣದಲ್ಲಿ ಈ ಕಾಲಮಿತಿಯ ಅವಧಿಯೊಳಗೆ ಹೆಚ್ಚುವರಿ ಆರೋಪಿಯ ವಿರುದ್ಧ ಕ್ರಮ ಜರುಗಿಸುವ ಯಾವುದೇ ಪ್ರಯತ್ನವನ್ನು ಫಿರ್ಯಾದುದಾರರು ನಡೆಸಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.



ಕಂಪೆನಿಯ ನಿರ್ದೇಶಕರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಆದರೆ, ಅಪರಾಧ ನಡೆದ ಸಂದರ್ಭದಲ್ಲಿ (ಚೆಕ್ ಅಮಾನ್ಯಗೊಂಡ ವೇಳೆ) ಅವರು ಕಂಪೆನಿಯ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದರು ಎಂಬುದನ್ನು ಫಿರ್ಯಾದಿಯಲ್ಲಿ ಎಲ್ಲೂ ಹೇಳಿಲ್ಲ. ಅವರ ವಿರುದ್ಧದ ಆರೋಪ ಕುರಿತು ಯಾವುದೇ ವಾದವನ್ನು ದೂರಿನಲ್ಲಿ ಮಾಡಲಾಗಿಲ್ಲ ಎಂದು ಹೇಳಿದ ನ್ಯಾಯಪೀಠ, ಹರ್ಯಾಣ ರಾಜ್ಯ Vs ಬೃಜ್ ಲಾಲ್ ಮಿತ್ತಲ್ ಮತ್ತಿತರರು ಪ್ರಕರಣವನ್ನು ಉಲ್ಲೇಖಿಸಿತು.


ಪ್ರಕರಣ: ಪವನ್ ಕುಮಾರ್ ಗೋಯೆಲ್ Vs ಉತ್ತರ ಪ್ರದೇಶ ರಾಜ್ಯ

ಸುಪ್ರೀಂ ಕೋರ್ಟ್ Cr.A. 1999/2022 Dated 17-11-2022


Referred Case

N.Harihara Krishnan Vs. J. Thomas (2018) 13 SCC 663 (Para 22-23)




Ads on article

Advertise in articles 1

advertising articles 2

Advertise under the article