-->
Consumer Case: ಕ್ಯಾರಿ ಬ್ಯಾಗಿಗೆ 24 ರೂ.: ಗ್ರಾಹಕನಿಗೆ 7000 ರೂ. ಪರಿಹಾರ ನೀಡಲು ರಿಲಯನ್ಸ್ ರಿಟೇಲ್‌ಗೆ ಆದೇಶ

Consumer Case: ಕ್ಯಾರಿ ಬ್ಯಾಗಿಗೆ 24 ರೂ.: ಗ್ರಾಹಕನಿಗೆ 7000 ರೂ. ಪರಿಹಾರ ನೀಡಲು ರಿಲಯನ್ಸ್ ರಿಟೇಲ್‌ಗೆ ಆದೇಶ

ಕ್ಯಾರಿ ಬ್ಯಾಗಿಗೆ 24 ರೂ.: ಗ್ರಾಹಕನಿಗೆ 7000 ರೂ. ಪರಿಹಾರ ನೀಡಲು ರಿಲಯನ್ಸ್ ರಿಟೇಲ್‌ಗೆ ಆದೇಶ





ರಿಲಯನ್ಸ್ ರಿಟೇಲ್‌ ತನ್ನ ಗ್ರಾಹಕನಿಗೆ ಕ್ಯಾರಿ ಬ್ಯಾಗ್‌ಗೆ 24 ರೂಪಾಯಿ ವಿಧಿಸಿರುವುದು ದುಬಾರಿಯಾಗಿ ಪರಿಣಮಿಸಿದೆ. ಬಾಧಿತ ಗ್ರಾಹಕನಿಗೆ 7000 ರೂ. ಪರಿಹಾರ ನೀಡುವಂತೆ ಗ್ರಾಹಕರ ನ್ಯಾಯಾಲಯ ರಿಲಯನ್ಸ್ ರಿಟೇಲ್ ಬೆಂಗಳೂರಿನ ಮಳಿಗೆಗೆ ಆದೇಶ ನೀಡಿದೆ.



ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಕ್ಯಾರಿ ಬ್ಯಾಗನ್ನು ಉಚಿತವಾಗಿ ನೀಡುವುದಿಲ್ಲ ಎಂದು ಗ್ರಾಹಕನಿಗೆ ತಿಳಿಸದ ರಿಲಯನ್ಸ್‌ ಮಳಿಗೆ ಸಿಬ್ಬಂದಿ, ಕ್ಯಾರಿ ಬ್ಯಾಗ್‌ ನ್ನು ಸೇರಿಸಿ ಬಿಲ್ ಮಾಡಿದ್ದರು.



ಇದರಿಂದ ಬಾಧಿತ ಗ್ರಾಹಕರಾದ ವಕೀಲ ಸಿ. ರವಿಕಿರಣ್ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಹಕರ ನ್ಯಾಯಾಲಯ 24.90 ರೂ. ಜೊತೆಗೆ ರೂ. 5000/- ಪರಿಹಾರ ನೀಡುವಂತೆ ಆದೇಶ ನೀಡಿದೆ. ಅರ್ಜಿದಾರರು ಸ್ವತಃ ವಕೀಲರಾಗಿರುವುದರಿಂದ ಕೋರ್ಟ್ ಖರ್ಚು ರೂ. 2000/- ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.



ಗ್ರಾಹಕರ ಆಯೋಗದ ಅಧ್ಯಕ್ಷೆ ಎಂ. ಶೋಭಾ, ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಮತ್ತು ಎಚ್. ಜನಾರ್ದನ್ ಈ ಆದೇಶ ಹೊರಡಿಸಿದ್ದಾರೆ.



ಖರೀದಿಗೆ ಮುನ್ನ ಕ್ಯಾರಿ ಬ್ಯಾಗ್‌ಗೂ ಹೆಚ್ಚುವರಿ ವೆಚ್ಚ ಆಗಲಿದೆ ಎಂಬುದನ್ನು ತಿಳಿಸುವ ಹೊಣೆಗಾರಿಗೆ ಮಳಿಗೆಯದ್ದಾಗಿದ್ದು, ಅದು ಗ್ರಾಹಕನ ಹಕ್ಕು ಎಂದು ಹೇಳಿರುವ ಗ್ರಾಹಕರ ಆಯೋಗ, ಗ್ರಾಹಕರಿಗೆ ಮಾಹಿತಿ ನೀಡದೆ ಕ್ಯಾರಿ ಬ್ಯಾಗ್‌ಗೂ ಬಿಲ್ ಮಾಡಿರುವುದು ಅನ್ಯಾಯ ಮತ್ತು ಅಶಿಸ್ತು ಎಂದು ಹೇಳಿದೆ. ನೋಟೀಸ್ ನೀಡಿದ್ದರೂ ರಿಲಯನ್ಸ್ ಆಯೋಗದ ಮುಂದೆ ಹಾಜರಾಗಿರಲಿಲ್ಲ. 



ಇದನ್ನೂ ಓದಿ

NI Act : ಹೆಚ್ಚುವರಿ ಆರೋಪಿಯ ಸೇರ್ಪಡೆ ಕಾಗ್ನಿಜೆನ್ಸ್ ಮುನ್ನ ಮಾತ್ರ ಅವಕಾಶ: ಸುಪ್ರೀಂ ಕೋರ್ಟ್‌



6 ತಿಂಗಳೊಳಗೆ ಅಮಲ್ಜಾರಿ ಪ್ರಕರಣ ಇತ್ಯರ್ಥ ಮಾಡಿ, ಇಲ್ಲವೇ ಕಾರಣ ಕೊಡಿ: ವಿಚಾರಣಾ ನ್ಯಾಯಾಲಗಳಿಗೆ ಸುಪ್ರೀಂ ಕೋರ್ಟ್ ತಾಕೀತು




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200